For Quick Alerts
  ALLOW NOTIFICATIONS  
  For Daily Alerts

  ಜಯನಗರ ಚುನಾವಣೆ: ಮತದಾನ ಮಾಡಿದ ಚಿತ್ರರಂಗದ ಗಣ್ಯರು

  By Naveen
  |
  ಇಂದು ಜಯನಗರದಲ್ಲಿ ನಡೆದ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ಸ್ಟಾರ್ಸ್ ಇವರು..!! | Filmibeat kannada

  ಇಂದು ಬೆಂಗಳೂರಿನ ಜಯನಗರ ವಿಧಾನಸಭೆ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಬಿಜಿಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕರಾಗಿದ್ದ ಬಿ.ಎನ್.ವಿಜಯಕುಮಾರ್ ಅವರ ನಿಧನದ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಚುನಾವಣೆ ನಡೆಸಲಾಗುತ್ತಿದೆ.

  ಇನ್ನು ಜಯನಗರ ಕ್ಷೇತ್ರದಲ್ಲಿ ವಾಸವಾಗಿರುವ ಕನ್ನಡ ಚಿತ್ರರಂಗದ ಅನೇಕರು ಬೆಳ್ಳಗೆಯಿಂದಲೇ ಮತದಾನ ಮಾಡುತ್ತಿದ್ದಾರೆ. ಜಯನಗರದ ಸುದರ್ಶನ ವಿದ್ಯಾಮಂದಿರದಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮತದಾನ ಮಾಡಿದ್ದಾರೆ. ಸಾಲಿನಲ್ಲಿ ಜನರ ಜೊತೆಗೆ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ.

  .

  ಜಯನಗರ ಚುನಾವಣೆ LIVE: 'ಜನರಿಂದ ಉತ್ತಮ ಸ್ಪಂದನೆ' ಸೌಮ್ಯ ರೆಡ್ಡಿ

  ಹಿರಿಯ ಹಾಸ್ಯ ನಟ ಉಮೇಶಣ್ಣ ಜೆ.ಪಿ ನಗರದ 4ನೇ ರಸ್ತೆಯಲ್ಲಿರುವ ಕ್ಲಾರೆನ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ವೋಟ್ ಮಾಡಿದ್ದಾರೆ. ಜೊತೆಗೆ ಜೆ.ಪಿ.ನಗರದ ವಿ.ಇ.ಟಿ. ಸ್ಕೂಲ್ ನಲ್ಲಿ ಹಿರಿಯ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದ್ದಾರೆ.

  ಉಳಿದಂತೆ, ನಟಿ ತಾರಾ ಅನುರಾಧ ಕುಟುಂಬ, ನಟಿ ಮೇಘನಾ ರಾಜ್ ಕುಟುಂಬ, ನಿರ್ಮಾಪಕ ಕೆ.ಮಂಜು ಸೇರಿದಂತೆ ಚಿತ್ರರಂಗಕ್ಕೆ ಸಂಭಂದಪಟ್ಟ ಕೆಲವರು ಇಂದು ಮತ ಚಲಾವಣೆ ಮಾಡಲಿದ್ದಾರೆ.

  English summary
  Karnataka Assembly Elections 2018 : Kannada senior actress Bharathi Vishnuvardhan, senior writer, director Baraguru Ramachandrappa and senior actor Umesh voted in Jayanagar Today (June 11th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X