For Quick Alerts
  ALLOW NOTIFICATIONS  
  For Daily Alerts

  ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ 'ಭಾರತಿಪುರ ಕ್ರಾಸ್'ಗೆ ಮೂರು ಪ್ರಶಸ್ತಿ

  By Bharath Kumar
  |

  ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳು ಎಲ್ಲಾ ಕಡೆ ಸೌಂಡ್ ಮಾಡುತ್ತಿವೆ. ಚಿತ್ರರಂಗಕ್ಕೆ ಬರುವವರಿಗೆ ಕಿರುಚಿತ್ರ ಒಂದು ವೇದಿಕೆಯಾಗಿದೆ. ಅಂತಹ ಚಿತ್ರಗಳನ್ನು ನಿರ್ಮಿಸುವವರಿಗೆ ಪ್ರೋತ್ಸಾಹ ನೀಡಲೆಂದು ಎಬಿ ನೆಟ್ ವರ್ಕ್ ಹಾಗೂ ಎಐಎಂ ಇನ್ಫೋಮೀಡಿಯಾ ಎಂಬ ಸಂಸ್ಥೆಗಳು ಕಿರುಚಿತ್ರೋತ್ಸವ ಸ್ಪರ್ಧೆಯನ್ನು ಆಯೋಜಿಸಿದ್ದವು.

  ನಯನ ಸಭಾಂಗಣದಲ್ಲಿ 2 ದಿನಗಳ ಕಾಲ ನಡೆದ ಈ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ದೇಶ-ವಿದೇಶಗಳಿಂದ ಹಲವಾರು ಕಿರುಚಿತ್ರಗಳು ಪಾಲ್ಗೊಂಡಿದ್ದವು. 2ನೇ ದಿನ ಅತ್ಯುತ್ತಮ ಚಿತ್ರಗಳಿಗೆ ಕಲಾವಿದ, ತಂತ್ರಜ್ಞರಿಗೆ 31 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು.

  ಈ ಚಿತ್ರೋತ್ಸವದಲ್ಲಿ ಕನ್ನಡದ ಹಲವಾರು ಚಿತ್ರಗಳು ಪ್ರಶಸ್ತಿ ಗಳಿಸಿದ್ದು ವಿಶೇಷವಾಗಿತ್ತು. ಅತ್ಯುತ್ತಮ ನಟ ಪ್ರಶಸ್ತಿಯನ್ನು ಸಂಚಾರಿ ವಿಜಯ್ ಪಡೆದರು. ಪತ್ರಕರ್ತ ವಿಜಯ್ ಭರಮಸಾಗರ ಅವರ 'ಭಾರತೀಪುರ ಕ್ರಾಸ್' ಚಿತ್ರಕ್ಕೆ ಟಾಪ್-3, ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಮತ್ತು ಸುದೀಪ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಧ್ವನಿ ಹಾಗೂ ಇಂಟರ್ ನ್ಯಾಷನಲ್ ಕ್ಯಾಟಗಿರಿ ಅವಾರ್ಡ್ ಕೂಡ ಈ ಚಿತ್ರಕ್ಕೆ ಲಭಿಸಿದೆ.

  ಅಂತಾರಾಷ್ಟ್ರೀಯ ವಿಭಾಗದಲ್ಲಿ ಇಂಗ್ಲೆಂಡ್ ನ ನಾದಿರ್ ಮೌರ್ಯ ನಿರ್ದೇಶನದ ಎಂ.ಎಸ್. ನಂದಿನಿ ಯುಕೆ ಲುಕುಡ್ ಇನ್ ಮತ್ತು ಅಮೆರಿಕದ ಇಮಾ ಬುರೆಟ್ ನಿರ್ದೇಶನದ 'ಟೇಕ್ ದಿ ರೆನ್ಸ್' ಪ್ರಶಸ್ತಿ ಲಭಿಸಿದೆ. ಅಲ್ಲದೆ ಲೈಫ್ ಟೈಮ್ ಅಚೀವ್ ಮೆಂಟ್ ಪ್ರಶಸ್ತಿಯನ್ನು ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಪಡೆದುಕೊಂಡಿದ್ದಾರೆ. ಅತ್ಯುತ್ತಮ ನಿರ್ದೇಶನಕ್ಕಾಗಿ ಮಾ.ಚಂದ್ರು ಅವರು ತಮ್ಮ ಮಾತೃಭಾಷಾ ಎಂಬ ಕಿರುಚಿತ್ರ ನಿರ್ದೇಶನಕ್ಕಾಗಿ ಪಡೆದುಕೊಂಡಿದ್ದಾರೆ.

  ಈ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ಹಿರಿಯ ನಿರ್ದೇಶಕ ಭಗವಾನ್, ಅಮೃತಾ ರಾವ್, ಮೈತ್ರಿಯಾ ಗೌಡ, ಸಂಜನಾ ಪ್ರಕಾಶ್ ಹಾಗೂ ನಿರ್ದೇಶಕ್ ಆದತ್ ಎಂ.ಪಿ. ಉಪಸ್ಥಿತರಿದ್ದರು.

  English summary
  Kannada short film 'Bharathipura cross' gets 3 award in international short film festival organized by ab network and abm info media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X