Just In
Don't Miss!
- Sports
ಥೈಲ್ಯಾಂಡ್ ಓಪನ್: ಸಮೀರ್, ಸಾತ್ವಿಕ್-ಪೊನ್ನಪ್ಪ ಕ್ವಾರ್ಟರ್ ಫೈನಲ್ಗೆ
- News
ಬೆಂಗಳೂರು; ಜ. 24ರಿಂದ ಕೆಲವು ರೈಲುಗಳ ಸಂಚಾರ ರದ್ದು, ಪಟ್ಟಿ
- Lifestyle
ರುಚಿ ರುಚಿಯಾದ ಸ್ನ್ಯಾಕ್ಸ್ ಕಾರ್ನ್-ಚೀಸ್ ಬಾಲ್ ರೆಸಿಪಿ
- Automobiles
ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು- 10 ಕೋಟಿ ಬೈಕ್ ಉತ್ಪಾದಿಸಿದ ಹೀರೋ ಮೋಟೊಕಾರ್ಪ್
- Finance
ದಿನದ ಗರಿಷ್ಠ ಮಟ್ಟದಿಂದ 500ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೊದಲ ದಿನವೇ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ 'ಭರ್ಜರಿ' ಹುಡುಗ !
'ಭರ್ಜರಿ' ಸಿನಿಮಾ ಲೇಟ್ ಆದರೂ ಲೇಟೆಸ್ಟ್ ಆಗಿ ಬಂದಿದೆ. ಕಳೆದ ಶುಕ್ರವಾರ ರಿಲೀಸ್ ಆದ ಈ ಸಿನಿಮಾ ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನವನ್ನು ಕಂಡಿದೆ. ಅದೇ ರೀತಿ ಕಲೆಕ್ಷನ್ ನಲ್ಲಿಯೂ 'ಭರ್ಜರಿ' ಚಿತ್ರ ದಾಖಲೆಯನ್ನು ಮಾಡಿದೆ.
ಗಾಂಧಿನಗರದಲ್ಲಿ 'ಭರ್ಜರಿ' ಸಿನಿಮಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇತ್ತು. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಿನಿಮಾದ ಪ್ರದರ್ಶನ ಮಧ್ಯರಾತ್ರಿಯೇ ಶುರುವಾಗಿತ್ತು. ಇನ್ನೂ ಮೂರು ವರ್ಷದ ನಂತರ ಬಂದ ಧ್ರುವ ಸರ್ಜಾ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದ್ದು, ಮೊದಲ ದಿನವೇ 'ಭರ್ಜರಿ' ಚಿತ್ರ ಕೋಟಿ ಕೋಟಿ ಲೂಟಿ ಮಾಡಿ ಮುನ್ನುಗ್ಗುತ್ತಿದೆ. ಮುಂದೆ ಓದಿ...

ಮೊದಲ ದಿನ 4.18 ಕೋಟಿ ಗಳಿಕೆ
ಕಳೆದ ಶುಕ್ರವಾರ (ಸಪ್ಟೆಂಬರ್ 15) ತೆರೆಗೆ ಬಂದ 'ಭರ್ಜರಿ' ಸಿನಿಮಾ ಮೊದಲ ದಿನವೇ 4.18 ಕೋಟಿ ಕಲೆಕ್ಷನ್ ಮಾಡಿದೆಯಂತೆ.

ವಿತರಕರ ಸಂತಸ
ಸಿನಿಮಾದ ಕಲೆಕ್ಷನ್ ನೋಡಿ ಚಿತ್ರತಂಡ ಫುಲ್ ಖುಷಿಯಾಗಿದೆ. ಚಿತ್ರದ ವಿತರಕರಾದ ಸುಪ್ರಿತ್ ''ಭರ್ಜರಿ' ಸಿನಿಮಾ 4.18 ಕೋಟಿ ಗಳಿಕೆ ಮಾಡುವ ಮೂಲಕ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಚಿತ್ರವಾಗಿದೆ'' ಎಂದು ತಿಳಿಸಿದ್ದಾರೆ.
ವಿಮರ್ಶೆ: 'ಬಹದ್ದೂರ್' ಹುಡುಗನ 'ಭರ್ಜರಿ' ಪ್ರೇಮ ಕಥೆ

ಅಂದಾಜು ಗಳಿಕೆ
'ಭರ್ಜರಿ' ಚಿತ್ರದ ಕಲೆಕ್ಷನ್ ಲೆಕ್ಕಾಚಾರ ಮಾಡಿರುವ ಚಿತ್ರತಂಡ ಸಿನಿಮಾ ಮೂರು ದಿನದಲ್ಲಿ 12 ಕೋಟಿ ಮತ್ತು ಒಂದೇ ವಾರದಲ್ಲಿ 20 ಕೋಟಿ ಸಾಧ್ಯತೆ ಇದೆ ಎಂದು ಅಂದಾಜು ಮಾಡಿದೆ.
ಕಥೆ ಕೇಳ್ಬೇಡಿ, 'ಭರ್ಜರಿ' ಆಟ ನೋಡಿ ಎಂದ ವಿಮರ್ಶಕರು.!

ಉತ್ತರ ಕರ್ನಾಟಕದಲ್ಲಿ ದೊಡ್ಡ ರೆಸ್ಪಾನ್ಸ್
'ಭರ್ಜರಿ' ಸಿನಿಮಾ ಉತ್ತರ ಕರ್ನಾಟಕದಲ್ಲಿ ದೊಡ್ಡ ಓಪನಿಂಗ್ ಪಡೆದುಕೊಂಡಿದೆ. ಉತ್ತರ ಕರ್ನಾಟಕದಲ್ಲಿ ಚಿತ್ರ ಸುಮಾರು 2.76 ಕೋಟಿ ಗಳಿಸಿದೆ ಎನ್ನಲಾಗಿದೆ.
ಫಸ್ಟ್ ಡೇ, ಫಸ್ಟ್ ಶೋ 'ಭರ್ಜರಿ' ನೋಡಿದವರು ಏನಂದ್ರು.?

ಸಿನಿಮಾ ಹೇಗಿದೆ..?
'ಭರ್ಜರಿ' ಸಿನಿಮಾ ಡಬಲ್ ಮೀನಿಂಗ್ ಡೈಲಾಗ್ಸ್ ಇಲ್ಲದ, ಐಟಂ ಸಾಂಗ್ಸ್ ತುರುಕದ, ಅಸಭ್ಯ ಸನ್ನಿವೇಶಗಳು ಇಲ್ಲದ ಕಂಪ್ಲೀಟ್ ಎಂಟರ್ ಟೇನರ್. ಧ್ರುವ ಸರ್ಜಾ ಅಭಿಮಾನಿಗಳಿಗೆ 'ಭರ್ಜರಿ' ಮನರಂಜನೆ ನೀಡುವ ಈ ಚಿತ್ರವನ್ನ ಆರಾಮಾಗಿ ಇಡೀ ಫ್ಯಾಮಿಲಿ ಕೂತು ನೋಡಬಹುದು.