»   » ಧ್ರುವ ಸರ್ಜಾ 'ಭರ್ಜರಿ' ಸಿನಿಮಾದ ಪ್ರದರ್ಶನ ಇಂದು ರಾತ್ರಿಯೇ ಶುರು!

ಧ್ರುವ ಸರ್ಜಾ 'ಭರ್ಜರಿ' ಸಿನಿಮಾದ ಪ್ರದರ್ಶನ ಇಂದು ರಾತ್ರಿಯೇ ಶುರು!

Posted By:
Subscribe to Filmibeat Kannada

'ಭರ್ಜರಿ' ಸಿನಿಮಾದ ಕ್ರೇಜ್ ಸಿಕ್ಕಾಪಟ್ಟೆ ಜೋರಾಗಿದೆ. ಸಿನಿಮಾ ನಾಳೆ(ಸಪ್ಟೆಂಬರ್ 15)ಕ್ಕೆ ರಿಲೀಸ್ ಆಗಲಿದ್ದು, ಇಂದು ರಾತ್ರಿಯೇ ಸಿನಿಮಾದ ಪ್ರದರ್ಶನ ಶುರುವಾಗಲಿದೆ.

ಈ ವಾರ 'ಭರ್ಜರಿ' ಹುಡುಗನಿಗೆ ಪೈಪೋಟಿ ಕೊಡ್ತಾರೆ ಮರಿ ಟೈಗರ್

ದಾವಣಗೆರೆಯಲ್ಲಿ ರಾತ್ರಿ 12 ಗಂಟೆಗೆ, ಬಿಜಾಪುರ, ಹೊಸಪೇಟೆಯಲ್ಲಿ ರಾತ್ರಿ 2.30ಕ್ಕೆ, ಶಿವಮೊಗ್ಗ, ಒಳ್ಳಾರಿ, ಹುಬ್ಬಳ್ಳಿಯಲ್ಲಿ ಬೆಳ್ಳಗೆ 4 ಗಂಟೆಗೆ, ಬೆಂಗಳೂರಿನ ತಾವರೆಕೆರೆಯ ಲಕ್ಷ್ಮಿ ಚಿತ್ರಮಂದಿರದಲ್ಲಿ ಬೆಳ್ಳಗೆ 6.30ಕ್ಕೆ ಸೇರಿದಂತೆ ರಾಜ್ಯದ ಅನೇಕ ಕಡೆ ಸಿನಿಮಾದ ಪ್ರದರ್ಶನ ಇಂದು ಮಧ್ಯರಾತ್ರಿಯಿಂದ ಶುರುವಾಗಲಿದೆ.

'Bharjari' movie shows will start from today midnight

ಜೊತೆಗೆ ಬಾಗಲಕೋಟೆ, ಬಿಜಾಪುರ, ಒಳ್ಳಾರಿ, ಹುಬ್ಬಳ್ಳಿಯ ಚಿತ್ರಮಂದಿರದಲ್ಲಿ ಒಂದೇ ದಿನಕ್ಕೆ ಬರೋಬ್ಬರಿ 8 ಶೋ ನೀಡಲಾಗಿದೆ. ಜೊತೆಗೆ ಬೆಂಗಳೂರಿನ ಕನ್ನಡೇತರ ಚಿತ್ರಮಂದಿರಗಳಾದ 'ಉರ್ವಶಿ' ಮತ್ತು 'ರೆಕ್ಸ್' ಚಿತ್ರಮಂದಿದಲ್ಲಿ 'ಭರ್ಜ'ರಿ ಸಿನಿಮಾ ಪ್ರದರ್ಶನವಾಗುತ್ತಿದೆ.

ಅಂದಹಾಗೆ, 'ಭರ್ಜರಿ' ಧ್ರುವ ಸರ್ಜಾ ಮತ್ತು ರಚಿತಾ ರಾಮ್ ನಟನೆಯ ಸಿನಿಮಾ. 'ಬಹದ್ದೂರ್' ಖ್ಯಾತಿಯ ಚೇತನ್ ಕುಮಾರ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ಮತ್ತು ನಟಿ ವೈಶಾಲಿ ಕೂಡ ಕಾಣಿಸಿಕೊಂಡಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ.

English summary
Dhruva sarja staring 'Bharjari' movie shows will start from today midnight.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada