»   » 8 ವಿಭಿನ್ನ ಸೆಟ್ ನಲ್ಲಿ ಧ್ರುವ ಸರ್ಜಾ ಇಂಟ್ರೊಡಕ್ಷನ್ ಸಾಂಗ್

8 ವಿಭಿನ್ನ ಸೆಟ್ ನಲ್ಲಿ ಧ್ರುವ ಸರ್ಜಾ ಇಂಟ್ರೊಡಕ್ಷನ್ ಸಾಂಗ್

Posted By:
Subscribe to Filmibeat Kannada

'ಭರ್ಜರಿ' ಸಿನಿಮಾದ ಹಾಡಿನ ಚಿತ್ರೀಕರಣ ಈಗಾಗಲೇ ಮುಗಿದಿದೆ. ಸಿನಿಮಾದ ಎಲ್ಲ ಹಾಡುಗಳಿಂತ ಒಂದು ಹಾಡು ಸಖತ್ ಅದ್ದೂರಿಯಾಗಿ ಮೂಡಿ ಬಂದಿದೆ ಅಂತ ಹೇಳಲಾಗುತ್ತಿದೆ.

'ನೀರ್ ದೋಸೆ' ತಿಂದ ಮೇಲೆ ಫಾರಿನ್ ನಲ್ಲಿ ಹರಿಪ್ರಿಯಾ ಪ್ರತ್ಯಕ್ಷ

ನಿರ್ದೇಶಕ ಚೇತನ್ ಇಂಟ್ರೊಡಕ್ಷನ್ ಸಾಂಗ್ ಬರೆಯುವುದರಲ್ಲಿ ಎತ್ತಿದ ಕೈ. ಇನ್ನೂ ತಮ್ಮ 'ಭರ್ಜರಿ' ಸಿನಿಮಾದಲ್ಲಿಯೂ ಅದೇ ರೀತಿ ಒಂದು ಹಾಡನ್ನು ಇಟ್ಟಿದ್ದಾರೆ. 'ಇವನ್ ವಂಶ ಸರ್ಜಾ ರೀ.. ಇವನ್ ಆಲ್ವೇಸ್ ಭರ್ಜರಿ..' ಅಂತ ಕ್ಯಾಚಿ ಲಿರಿಕ್ಸ್ ಬರೆದಿದ್ದಾರೆ.

'Bharjari' movie song Introduction Song

ವಿದೇಶದಲ್ಲಿ ಧ್ರುವ ಸರ್ಜಾ, ರಚಿತಾ ರಾಮ್ 'ಭರ್ಜರಿ' ಡ್ಯಾನ್ಸ್

ಧ್ರುವ ಸರ್ಜಾ ಅವರ ಪಾತ್ರವನ್ನು ಪರಿಚಯ ಮಾಡುವ ಈ ಹಾಡನ್ನು 7 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆಯಂತೆ. ವಿಶೇಷ ಅಂದರೆ ಈ ಒಂದೇ ಒಂದು ಹಾಡಿಗಾಗಿ 8 ವಿಭಿನ್ನ ಸೆಟ್ ಹಾಕಿ ಎರಡು ದೇಶಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆಯಂತೆ. ಈ ಹಾಡಿಗೆ ಹರ್ಷ ನೃತ್ಯ ನಿರ್ದೇಶನ ಮಾಡಿದ್ದು, ಸದ್ಯದಲ್ಲೇ 'ಭರ್ಜರಿ' ಆಡಿಯೋ ರಿಲೀಸ್ ಆಗಲಿದೆ.

English summary
Dhruva Sarja Starring Kannada Movie 'Bharjari' Introduction Song shooted in 8 different Sets.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada