»   » ಎರಡೇ ದಿನದಲ್ಲಿ 'ಭರ್ಜರಿ' ಹುಡುಗ ಮಾಡಿದ ದಾಖಲೆ ಏನು?

ಎರಡೇ ದಿನದಲ್ಲಿ 'ಭರ್ಜರಿ' ಹುಡುಗ ಮಾಡಿದ ದಾಖಲೆ ಏನು?

Posted By:
Subscribe to Filmibeat Kannada

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಚಿತ್ರದ ಟೈಟಲ್ ಹಾಡು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಎರಡೇ ದಿನದಲ್ಲಿ ಅತಿ ಹೆಚ್ಚು ವೀಕ್ಷಕರು ಈ ಹಾಡನ್ನ ನೋಡಿದ್ದು, 'ಭರ್ಜರಿ ಸೌಂಡು'ಗೆ ಫಿದಾ ಆಗಿದ್ದಾರೆ.

ಆಗಸ್ಟ್ 24 ರಂದು 'ಭರ್ಜರಿ' ಚಿತ್ರದ 'ಭರ್ಜರಿ ಸೌಂಡು' ಯ್ಯೂಟ್ಯುಬ್ ನಲ್ಲಿ ರಿಲೀಸ್ ಆಗಿತ್ತು. 26 ಗಂಟೆಯಲ್ಲಿ ಸುಮಾರು 4 ಲಕ್ಷ ವೀಕ್ಷಕರನ್ನ ಹೊಂದಿದ್ದ ಈ ಹಾಡನ್ನ, 48 ಗಂಟೆಯಲ್ಲಿ 8 ಲಕ್ಷ ವೀಕ್ಷಕರು ನೋಡಿದ್ದಾರೆ.

Bharjari soundu Song gets 8 Lakh Viwers in 2days

ಇವನೊಂಶ ಸರ್ಜಾ ರೀ,,,,ಇವನು ಆಲ್ವೇಸ್ 'ಭರ್ಜರಿ'.!

ನಿರ್ದೇಶಕ ಕಮ್ ಬರಹಗಾರ ಚೇತನ್ ಕುಮಾರ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ವಿ.ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಶಶಾಂಕ್ ಶೇಷಗಿರಿ ಅವರ ಕಂಠದಲ್ಲಿ ಈ ಹಾಡು ಮೂಡಿ ಬಂದಿದ್ದು, ಡಿ-ಬೀಟ್ಸ್ ಸಂಸ್ಥೆ ರಿಲೀಸ್ ಮಾಡಿದೆ.

ಇನ್ನು ಧ್ರುವ ಸರ್ಜಾಗೆ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಸಾಥ್ ಕೊಟ್ಟಿದ್ದು, ಚಿತ್ರದ ಮುಖ್ಯಪಾತ್ರವೊಂದರಲ್ಲಿ ಹರಿಪ್ರಿಯಾ ಕೂಡ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ಮೂಲಕ ಅಬ್ಬರಿಸುತ್ತಿರುವ 'ಭರ್ಜರಿ' ಸೆಪ್ಟಂಬರ್ ನಲ್ಲಿ ತೆರೆ ಕಾಣಲಿದೆ.

'ಟೀಸರ್'ನಲ್ಲೇ ಘರ್ಜಿಸಿದ 'ಆಕ್ಷನ್ ಪ್ರಿನ್ಸ್' ಧ್ರುವ

English summary
Bharjari soundu Song from kannada movie Bharjari, gets 8 Lakh Viwers in 2days. starring action prince dhruva sarja, rachita ram, haripriya.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada