For Quick Alerts
  ALLOW NOTIFICATIONS  
  For Daily Alerts

  ಭಟ್ಟರ ಡ್ರಾಮಾ ಫಸ್ಟ್ ಡೇ ಟ್ವೀಟ್ ರಿಪೋರ್ಟ್

  By Mahesh
  |

  ರೆಬೆಲ್ ಸ್ಟಾರ್ ಅಂಬರೀಶ್ ವಿಶೇಷ ಪಾತ್ರ, ಯಶ್ ಹಾಗೂ ರಾಧಿಕಾ ಪಂಡಿತ್ ಕೆಮಿಸ್ಟ್ರಿ, ನೀನಾಸಂ ಸತೀಶ್ ಹಾಗೂ ಸಿಂಧು ಕಾಂಬಿನೇಶ್ ಇರುವ ಭಟ್ಟರ ಡ್ರಾಮಾ ಮೊದಲ ದಿನವೇ ಸಿನಿಪ್ರೇಮಿಗಳನ್ನು ಆಕರ್ಷಿಸಿದೆ. ತುಂಡ್ ಹೈಕ್ಲು ಜೊತೆ ಫಿಲಾಸಫಿ ಬೆರೆಸಿ ಡ್ರಾಮಾ ಆಡಿಸಿರುವ ಯೋಗರಾಜ್ ಭಟ್ಟರ ಬಗ್ಗೆ ಎಲ್ಲಾ ಥಿಯೇಟರ್ ನಿಂದ ಮೆಚ್ಚುಗೆ ವ್ಯಕ್ತವಾಗಿದೆ.

  ಸಾಗರ್, ವೀರೇಶ್, ಉಮಾ, ಮಾರುತಿ, ರಾಜಮುರಳಿ ಇತ್ಯಾದಿ ರೆಗ್ಯುಲರ್ ಸಿಂಗರ್ ಸ್ಕ್ರೀನ್ ಚಿತ್ರಮಂದಿರಗಳು ಸೇರಿದಂತೆ ಐನಾಕ್ಸ್, ಗೋಪಾಲನ್ ಸಿನಿಮಾಸ್, ಸಿನೆಪೊಲೀಸ್, ಫನ್, ಫ್ರೇಮ್ ಸಿನಿಮಾಸ್, ಸಿನೆಮ್ಯಾಕ್ಸ್ ಮಲ್ಟಿಫ್ಲೆಕ್ಸ್ ಗಳಲ್ಲಿ ತುಂಬು ಪ್ರದರ್ಶನ ಕಾಣುತ್ತಿದೆ. ಗಂಧದಗುಡಿ ಹೈಕಳು ಟ್ವೀಟ್ಟರ್ ನಲ್ಲಿ ಡ್ರಾಮಾ ಬಗ್ಗೆ ತುಂಡ್ ತುಂಡ್ ಆಗಿ ಹಾಕೋರೋ.. ಓದ್ಕೋಳಿ

  * ಮೊದಲ ದೃಶ್ಯದಲ್ಲೇ ಬೊಂಬೆ ಆಡಿಸುವವನ ವೇಷದಲ್ಲಿ ಅಂಬರೀಷ್ ಎಂಟ್ರಿ,
  * ನಂತರ ಪಂಚಾಯಿತಿ ಕಟ್ಟೆ ಬಳಿ ಯಶ್ ಫುಲ್ ಮಂಡ್ಯ ಭಾಷೆ.
  * ವಾಹ್..! ಯಶ್ ಅಜ್ಜ ಉಮೇಶ್ ಮ್ಯಾರೇಜ್ ಪ್ರೊಪೊಸಲ್ ಅಜ್ಜಿ ಜೊತೆಗೆ..
  * ತುಂಡ್ ಹೈಕ್ಳ ಸವಾಸ...ಸಾಂಗ್ಸು..ಯಶ್ ಕವಿ ಯಂತೆ..
  * ಲೋಹಿತಾಶ್ವ ದುಬೈ ಡಾನ್ ಫುಲ್ ತುಳು ಭಾಷೆ ಡೈಲಾಗ್ಸ್
  * ರಾಧಿಕಾ ಫಸ್ಟ್ ಎಂಟ್ರಿಯಲ್ಲೇ ಅಳ್ತಾ ಇದ್ದಾಳೆ.
  * ಓಹ್ ರಾಧಿಕಾ ಅಪ್ಪ ಅಂಡರ್ ವರ್ಲ್ಡ್ ಡಾನ್!

  ಕಟ್ ಮಾಡಿದ್ರೆ ಪಂಚಾಯಿತಿ ಸೀನ್...

  * ಯಶ್ ಹಾಗೂ ಸತೀಶ್ ಜೊತೆ ಅಂಬಿ ಮೀಟಿಂಗ್
  * ಪ್ರಳಯ ಅಂದ್ರೆ ನೀರು ಇಲ್ಲಾಂದ್ರೆ ಬರೀ ಬೀರು ಹಹ್ಹಾ ಏನ್ ಡೈಲಾಗ್ -ಅಂಬರೀಷ್
  * ಯಶ್ ಅಂಡ್ 'ಕಾಮುಕ' ಸತೀಶ್ಬಗ್ಗೆ ಬೊಂಬೆ ಕತೆ ಹೇಳುತ್ತಿರುವ ಅಂಬಿಯಣ್ಣ
  * ಯಪ್ಪಾ.. ಲೇಡಿಸ್ vs ಜೆಂಟ್ಸ್ ಕಬಡ್ಡಿ ಮ್ಯಾಚ್ , ಇದು ಭಟ್ಟರ್ ಸಿನ್ಮಾದಲ್ಲೇ ಸಾಧ್ಯ
  * ಕಿಸ್ ಕೊಟ್ಟು ಮ್ಯಾಚ್ ಗೆದ್ದ ರಾಧಿಕಾ ಪಂಡಿತ್

  * ಭಟ್ಟರ ನಿರೂಪಣೆ ಫುಲ್ ಡಿಫರೆಂಟ್
  * ಯಶ್ ಹಾಗೂ ಸತೀಶ್ ಕಾಲೇಜಿಗೆ ಸುಚೇಂದ್ರ ಪ್ರಸಾದ್ ಪ್ರಿನ್ಸಿ
  * ಸುಚೇಂದ್ರರಿಂದ ಕನ್ನಡ ಮಾತಾಡೋದು ಕಲೀಬೇಕು ಕನ್ಲಾ

  * ಛೇ ಸಿಂಧು ಮೂಗಿ.. ನೀನಾಸಂ ಸತೀಶ್ ಪರ್ವಾಗಿಲ್ಲ ಬಿಡು ಅಂತಾನೆ

  * ಏನೇನೋ ಆಗ್ತಿದೆ. .ಕಾಲೇಜು ಸೀನ್ ಮೇಲೆ ಲವ್ಲಿ ಹಾಡು
  * ಯಶ್, ಸತೀಶ್ ಜೈಲಿನಲ್ಲಿ
  * ಕೊಲೆ ಯತ್ನ..
  * 100 ಕಿಸ್ ಲಂಚ ಭರವಸೆಗೆ ಯಶ್ ಏನೋ ಮಾಡ್ಬಿಟ್ತಾನೆ
  * ರಾಕ್ ಲೈನ್ ತನಿಖೆ ಮಾಡೋಕೆ ಬಂದ
  * ಮಾಳವಿಕ ಮೇಡಮ್ ಮೈಸೂರು ಮಹಾರಾಣಿ
  * ಯಶ್ ಹಾಗೂ ಡಾನ್ ಮುಖಾಮುಖಿ

  * ಕಥೆಯೊಳಗೆ ಕತೆ.. ಓತ್ಲಾ ಹಿತವಚನ ಸಾಂಗ್ ಹಿತವಾಗಿದೆ.
  * @ShyamSPrasad: ಸಾಗರ್ ಥೇಟರ್ ನಲ್ಲಿ ಕೆಲಕಾಲ ಪ್ರದರ್ಶನ ಸ್ಥಗಿತ. ಪ್ರೊಜೆಕ್ಷನ್ ಪ್ರಾಬ್ಲಂ ಅಂತೆ
  * ಮತ್ತೆ ಸೆಂಟಿಮೆಂಟು ಸತೀಶ್ ಹಾಗೂ ತಂಗಿ ಕಲ್ಯಾಣಿ..
  * ಹಳೆ ಸಿನ್ಮಾಗಳ ಥರಾ ಮಳೆಯಲ್ಲಿ ಹೀರೋ ಕುಡ್ಕುಂಡ್ ಡೈಲಾಗ್
  * ಇಂಟರ್ 'ವೆಲ್' ನಲ್ಲಿದ್ದ ಸಸ್ಪೆನ್ ಯಾಕೋ 'ಹಳ್ಳ' ಹಿಡಿತೈತೆ
  * ಕ್ಲೈಮ್ಯಾಕ್ಸ್ ಕೈ ಕೊಟ್ಟಿದೆ. ಕ್ಲೈಮ್ಯಾಕ್ಸ್ ಏನಾಯ್ತು ಹೇಳೋಕ್ಕಿಲ್ಲ .. ನೀವೇ ನೋಡ್ಕೋಳ್ಳಿ
  * ಭಟ್ಟರು ಸಕತ್ 'ಡ್ರಾಮಾ' ಆಡೋರೆ :)

  ಟ್ವೀಟ್ಟರ್ ವರದಿಗಾರರ ಅಂತಿಮ ತೀರ್ಪು: ಭಟ್ರು ಜಸ್ಟ್ ಪಾಸ್.. ನಿರೀಕ್ಷೆ ಇಲ್ಲಾಂದ್ರೆ ಪ್ರೇಕ್ಷಕ ಬಚಾವ್

  English summary
  DRAMA tickets are getting sold out in multiplexes like hot cake!! Bookmyshow many shows are getting filled so fast. Inox Mantri allots its l reports twitter users.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X