ನನ್ನ ರೋಮಿಯೋ ಸಿಕ್ಕಿ 9 ವರ್ಷವಾಗಿದೆ: ಪ್ರೀತಿ ವಿಚಾರ ಬಹಿರಂಗ ಪಡಿಸಿದ ನಟಿ ಭಾವನಾ

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಭಾವನ ಮೆನನ್ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಮಲಯಾಳಂ ಸುಂದರಿ ನಟಿ ಭಾವನ ಕನ್ನಡದ ನಟ ಮತ್ತು ನಿರ್ಮಾಪಕ ನವೀನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. 2018ರಲ್ಲಿ ಭಾವನ ಮತ್ತು ನವೀನ್ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Recommended Video

Sushant Singh's 'Dil Bechara' breaks Avengers record | Filmibeat Kannada

ಇಬ್ಬರದ್ದು ಅನೇಕ ವರ್ಷಗಳ ಪ್ರೀತಿ. ಮಲಯಾಳಂ ನಟಿ ಕನ್ನಡದ ಹುಡುಗನನ್ನು ಪ್ರೀತಿಸಿ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಭಾವನಾ ಮಲಯಾಳಂ ಸೇರಿದ್ದಂತೆ, ಕನ್ನಡ, ತಮಿಳು ಮತ್ತು ತೆಲುಗು ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಸದ್ಯ ನವೀನ್ ಜೊತೆ ಬೆಂಗಳೂರಿನಲ್ಲಿ ನೆಲೆಸಿರುವ ಭಾವನಾ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

ಜಾಕಿ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ

ಜಾಕಿ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ

ಪವರ್ ಸ್ಟಾರ್ ಪುನೀತ್ ರಾಜ್ ಅಭಿನಯದ ಜಾಕಿ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟ ಭಾವನಾ, ಕನ್ನಡದ ಹುಡುಗನ್ನು ಪ್ರೀತಿಸಿ, ಮದುವೆಯಾಗಿ ಕನ್ನಡದ ಸೊಸೆಯಾಗಿದ್ದಾರೆ. ಅಂದ್ಹಾಗೆ ಭಾವನಾ ಮತ್ತು ನವೀನ್ ಅವರ ಪ್ರೇಮ ಕಥೆ ಪ್ರಾರಂಭವಾಗಿಜದ್ದು, ರೋಮಿಯೋ ಸಿನಿಮಾ ಸಮಯದಲ್ಲಿ. 2011ರಲ್ಲಿ ಸೆಟ್ಟೇರಿಸಿದ ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ನಾಯಕಿಯಾಗಿ ಭಾವನಾ ಕಾಣಿಸಿಕೊಂಡಿದ್ದಾರೆ.

9 ವರ್ಷದ ಪ್ರೀತಿ ಬಗ್ಗೆ ಭಾವನಾ ಪೋಸ್ಟ್

9 ವರ್ಷದ ಪ್ರೀತಿ ಬಗ್ಗೆ ಭಾವನಾ ಪೋಸ್ಟ್

ರೋಮಿಯೋ ಸಿನಿಮಾಗೆ ನವೀನ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಸಮಯದಲ್ಲಿ ಪ್ರಾರಂಭವಾದ ಪ್ರೀತಿಯ ಬಗ್ಗೆ ಭಾವನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ರೋಮಿಯೋ ಸಿನಿಮಾಗೆ 8 ವರ್ಷ. ನಮ್ಮ ಪ್ರೀತಿಗೆ 9 ವರ್ಷ. ಈ ಸಿನಿಮಾ ನನಗೆ ನನ್ನ ರೋಮಿಯೋವನ್ನು ನೀಡಿದೆ. ನಾವು ಹೇಗೆ ಭೇಟಿ ಆದೆವು, ಪ್ರೀತಿಯಲ್ಲಿ ಬಿದ್ದೆವು ಎನ್ನುವುದು ಮ್ಯಾಜಿಕ್. ನನ್ನ ಜೀವನಕ್ಕೆ ಜೀವನಕ್ಕೆ ಬಂದಿದ್ದಕ್ಕಾಗಿ ಮತ್ತು ನಿಮ್ಮ ಪ್ರೀತಿಯಲ್ಲಿ ಬಿದ್ದಿದ್ದಕ್ಕೆ ಧನ್ಯವಾದಗಳು. 9 ವರ್ಷ ಜೊತೆಗಿದ್ದೀವಿ" ಎಂದು ಬರೆದುಕೊಂಡಿದ್ದಾರೆ.

2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ

2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ

ಜೊತೆಗೆ ಪತಿಯ ಜೊತೆ ಇರುವ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಭಾವನಾ ಮತ್ತು ನವೀನ 2018ರಲ್ಲಿ ಕೇರಳದ ತ್ರಿಶೂರ್ ನ ತಿರುವಂಬಾಡಿ ದೇವಸ್ಥಾನದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ಮದುವೆಗೆ ಕುಟುಂಬದವರು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.

ಭಾವನಾ ಕನ್ನಡ ಸಿನಿಮಾಗಳು

ಭಾವನಾ ಕನ್ನಡ ಸಿನಿಮಾಗಳು

ಭಾವನ ಕನ್ನಡದಲ್ಲಿ ಜಾಕಿ, ವಿಷ್ಣುವರ್ಧನ, ರೋಮಿಯೋ, ಟೋಪಿವಾಲ, ಬಚ್ಚನ್, ಚೌಕ, ಟಗರು, 99 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಸದ್ಯ ಮೂರು ಕನ್ನಡದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಭಜರಂಗಿ-2, ಇನ್ಸ್ಪೆಕ್ಟರ್ ವಿಕ್ರಮ್ ಮತ್ತು ಗೋವಿಂದ ಗೋವಿಂದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
South Indian Actress Bhavana Menon reveals her love story. Bhavana and hubby celebrate 9 year of love.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X