ಅಶ್ಲೀಲ ಮೆಸೇಜ್ ಕಳುಹಿಸಿ ಭಾವನಾ ಬೆಳಗೆರೆಗೆ ಫೇಸ್ ಬುಕ್ ನಲ್ಲಿ ಕಿರುಕುಳ

By Harshitha

Recommended Video

ಭಾವನಾ ಬೆಳಗೆರೆಗೆ ಅನಾಮಿಕ ವ್ಯಕ್ತಿಯಿಂದ ಫೇಸ್ ಬುಕ್ ನಲ್ಲಿ ಕಿರುಕುಳ | Filmibeat Kannada

ಪತ್ರಕರ್ತ ರವಿ ಬೆಳಗೆರೆ ಪುತ್ರಿ... ನಟ ಶ್ರೀನಗರ ಕಿಟ್ಟಿ ಪತ್ನಿ ಭಾವನಾ ಬೆಳಗೆರೆ ಅವರಿಗೆ ಫೇಸ್ ಬುಕ್ ನಲ್ಲಿ ಕಿಡಿಗೇಡಿಯೊಬ್ಬ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ನೀಡಿದ್ದಾನೆ.

ಮೊನ್ನೆಯಿಂದ ಪದೇ ಪದೇ ವಿಡಿಯೋ ಕಾಲ್ ಮಾಡುವುದರ ಜೊತೆಗೆ ಕೆಟ್ಟ ಕೆಟ್ಟ ಮೆಸೇಜ್ ಕಳುಹಿಸುತ್ತಿರುವ ಪ್ರದೀಪ್ ಕುಮಾರ್ ಪಾಯಲ್ ಎಂಬಾತನ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ಭಾವನಾ ಬೆಳಗೆರೆ ಮನಸ್ಸು ಮಾಡಿದ್ದಾರೆ.

ತಮಗಾಗುತ್ತಿರುವ ಕಿರುಕುಳದ ಬಗ್ಗೆ ಭಾವನಾ ಬೆಳೆಗೆರೆ ಫೇಸ್ ಬುಕ್ ನಲ್ಲಿಯೇ ಬರೆದುಕೊಂಡಿದ್ದಾರೆ.

ಕೊಳಕು ಸಂದೇಶಗಳ ಜೊತೆಗೆ ಅಶ್ಲೀಲ ಫೋಟೋಗಳನ್ನು ಪ್ರದೀಪ್ ಕುಮಾರ್ ಪಾಯಲ್ ಎಂಬಾತ ಕಳುಹಿಸುತ್ತಿರುವುದರಿಂದ ಆತನಿಗೆ ಬುದ್ಧಿ ಕಲಿಸಲು ಭಾವನಾ ಬೆಳಗೆರೆ ಮುಂದಾಗಿದ್ದಾರೆ.

''ಅವರು ಯಾರು ಅನ್ನೋದು ನನಗೆ ಖಂಡಿತ ಗೊತ್ತಿಲ್ಲ. 'ಬಿಗ್ ಬಾಸ್'ಗೆ ಹೋಗುವ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಸ್ವಲ್ಪ ಜಾಸ್ತಿ ಆಕ್ಟೀವ್ ಆಗಿದ್ದೆ. 'ಬಿಗ್ ಬಾಸ್'ಗೆ ಹೋಗಿ ಬಂದ್ಮೇಲೆ, ನನ್ನ ಫೇಸ್ ಬುಕ್ ಅಕೌಂಟ್ ಪೇಜ್ ಆಗಿ ಕ್ರಿಯೇಟ್ ಆಯ್ತು. ನಲವತ್ತು ಸಾವಿರ ಫಾಲೋವರ್ಸ್ ಇದ್ದಿದ್ರಿಂದ, ಪ್ರತಿಯೊಬ್ಬರಿಗೂ ಪ್ರತಿಕ್ರಿಯೆ ಕೊಡಲು ನನಗೆ ಕಷ್ಟ ಆಯ್ತು. ಈಗ ನನ್ನ ಪರ್ಸನಲ್ ಅಕೌಂಟ್ ಗೆ ಪ್ರದೀಪ್ ಕುಮಾರ್ ಪಾಯಲ್ ಎಂಬಾತ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನ ನಾನು ಅಕ್ಸೆಪ್ಟ್ ಮಾಡಿದ್ದೆ. ಅದನ್ನೇ ದುರುಪಯೋಗ ಪಡಿಸಿಕೊಂಡು ಮೊನ್ನೆಯಿಂದ ನನಗೆ ವಿಡಿಯೋ ಕಾಲ್ ಮಾಡ್ತಿದ್ದಾನೆ. ಸಾಲದಕ್ಕೆ, ಅಶ್ಲೀಲ, ಕೆಟ್ಟ, ಕೊಳಕ ಮೆಸೇಜ್ ಕಳುಹಿಸುತ್ತಿದ್ದಾನೆ. ಅವನನ್ನ ಬ್ಲಾಕ್ ಮಾಡೋದು ದೊಡ್ಡ ವಿಷಯ ಅಲ್ಲ. ಆದ್ರೆ, ನಾಳೆ ಇನ್ನೊಬ್ಬರಿಗೆ ಇದೇ ತರಹ ಆಗಬಾರದು. ಹೀಗಾಗಿ ನಾನು ಸೈಬರ್ ಕ್ರೈಂಗೆ ದೂರು ಕೊಡಲು ನಿರ್ಧಾರ ಮಾಡಿದ್ದೇನೆ'' ಎಂದು ಭಾವನಾ ಬೆಳಗೆರೆ ತಿಳಿಸಿದ್ದಾರೆ.

More from Filmibeat

English summary
Journalist, Daughter of Ravi Belagere, Wife of Kannada Actor Srinagara Kitty Bhavana Belagere gets annoyed with Unknown person who is sending her nasty pics in Facebook.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X