"ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು"; ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ಭಾವನಾ ಬೆಳಗೆರೆ ಮಾತು
ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದೆ. ಪ್ರಕರಣದಲ್ಲಿ ನಟ ದರ್ಶನ್‌ಗೆ ಕಠಿಣ ಶಿಕ್ಷೆ ಆಗುವ ಮಾತುಗಳು ಕೇಳಿಬರ್ತಿದೆ. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳಿಸಿದ್ದ ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ತಮ್ಮ ಆಪ್ತರ ಮೂಲಕ ಅಪಹರಿಸಿ ಹತ್ಯೆ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬರ್ತಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿ 13 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಮೃತ ಚಿತ್ರದುರ್ಗದಲ್ಲಿರುವ ಮೃತ ರೇಣುಕಾಸ್ವಾಮಿ ಮನೆಗೆ ಭಾವನಾ ಬೆಳಗೆರೆ ಭೇಟಿ ನೀಡಿ ಮೃತನ ಪತ್ನಿಗೆ ಸಾಂತ್ವನ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಭಾವನಾ ಬೆಳಗೆರೆ "ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು" ಎಂದಿದ್ದಾರೆ. ಪ್ರಕರಣದಲ್ಲಿ "ನಟ ದರ್ಶನ್ ಅವರು ಮೃತ ರೇಣುಕಾ ಸ್ವಾಮಿಗೆ ಹೊಡೆದಿದ್ದಾರೆ, ಹೊಡೆಸಿದ್ದಾರೆ, ಹೊಡೆಯಿರಿ ಎಂದು ಹೇಳಿದ್ದಾರೆ ಎನ್ನುವುದು ಸಾಬೀತಾದರೆ ಅವರು ಶಿಕ್ಷೆಗೆ ಅರ್ಹರು" ಎಂದು ಭಾವನಾ ತಿಳಿಸಿದರು. ಇದು ಆಗಬಾರದು. ದರ್ಶನ್ ಆಗಲಿ ಅಥವಾ ಬೇರೆ ಯಾರೇ ಆಗಲಿ ಯಾರಿಗೂ ಒಂದು ಜೀವ ತೆಗೆಯಲು ಯಾವುದೇ ಹಕ್ಕು ಇಲ್ಲ ಎಂದಿದ್ದಾರೆ.
"ನನಗೆ ರೇಣುಕಾ ಸ್ವಾಮಿ ಮನೆ ಪರಿಸ್ಥಿತಿ ನೋಡಿ ಬೇಸರವಾಯಿತು. ರೇಣುಕಾಸ್ವಾಮಿ ಪತ್ನಿಗೆ ಸಾಂತ್ವನ ಹೇಳಿದ್ದೇನೆ, ನನಗೂ ಮಾಧ್ಯಮಗಳಿಂದ ವಿಷಯ ತಿಳಿಯಿತು. ದರ್ಶನ್ ಬಂಧನವಾಗಿದೆ ಎಂದು ಗೊತ್ತಾಗಿದೆ. ಹತ್ತು ನಿಮಿಷ ಹಿಂದೆ ನನಗೆ ಮಾಹಿತಿ ಗೊತ್ತಾಗಿದೆ. ನನ್ನ ಮನಸ್ಸಿಗೆ ಬಹಳ ನೋವಾಗುತ್ತಿದೆ. ರೇಣುಕಾಸ್ವಾಮಿ ಅಜ್ಜಿ ಏನಾದ್ರೂ ಪಂಕ್ಷನ್ ಇದಿಯಾ? ಅಂತ ಕೇಳಿದ್ರು. ಯಾರಿಗೂ ಕೂಡ ಮನೆಯಲ್ಲಿ ವಿಷಯ ಗೊತ್ತಿಲ್ಲ" ಎಂದು ವಿವರಿಸಿದ್ದಾರೆ.
ರೇಣುಕಾಸ್ವಾಮಿ ಅಮಾಯಕ ಹುಡುಗ. ಇವರು ಟಿವಿ ಸಹ ನೋಡಿಲ್ಲ, ಕೆಲಸಕ್ಕೆ ಹೋಗ್ತೀನಿ ಎಂದು ಹೇಳಿ ಹೋಗಿದ್ದಾನೆ. ಅವನು ಫೋನ್ ಮಾಡಿದ್ದ ವೇಳೆ ಪತ್ನಿ ಫೋನ್ ಪಿಕ್ ಮಾಡಿಲ್ಲ. ಅಕ್ಕ ಅವರು ಮೃತ ಪಟ್ಟಿದ್ದಾರೆ ಅಲ್ವ, ಬದುಕಿಸೋದಕ್ಕೆ ಸಾಧ್ಯವಿಲ್ಲ ಅಲ್ವ? ಮನೆಯಲ್ಲಿ ದರ್ಶನ್ ಯಾವುದೇ ಫೋಟೋಗಳಿಲ್ಲ ಪವಿತ್ರಗೌಡಗೆ ಕಾಮೆಂಟ್ ಹಾಕಿದ್ದ ಎಂಬ ವಿಚಾರ ಗೊತ್ತಿಲ್ಲ.
ಇಂಥ ಕಾಮೆಂಟ್‌ಗೆ ಸೈಬರ್ ಕ್ರೈಮ್ ಇದೆ ಅಲ್ಲಿ ದೂರು ಕೊಟ್ರೆ ಸಾಕು"
"ಒಂದು ಪರಿಜ್ಞಾನ ಇರ್ಬೇಕು, ಪ್ರಾಣ ತೆಗೆಯುವ ಮಟ್ಟಕ್ಕೆ ಇಳಿಬಾರ್ದು. ಸ್ಟಾರ್‌ಗಿರಿಯನ್ನ ಯಾವ್ ಮಟ್ಟಕ್ಕೆ ಜನ ತಕೋಬೇಕು. ಸ್ಟಾರ್‌ಗಿರಿಗೆ ಇದೊಂದು ಶೇಮ್ ಆಗಿದೆ. ಇಂಥ ಕೃತ್ಯವನ್ನು ನಾನು ಖಂಡಿಸುತ್ತೇನೆ. ಅಪರಾಧ ಮಾಡಿದ್ದು ಸತ್ಯ ಆದರೆ ಖಂಡಿತ ಶಿಕ್ಷೆ ಆಗಬೇಕು. ದರ್ಶನ್ ಇದರಲ್ಲಿ ಭಾಗಿಯಾಗಿದ್ರೆ ಶಿಕ್ಷೆಯಾಗಬೇಕು" ಎಂದು ಭಾವನಾ ಬೆಳಗೆರೆ ಆಗ್ರಹಿಸಿದರು.


Click it and Unblock the Notifications










