ಬ್ರೇಕಪ್ ಬಗ್ಗೆ ಮೌನ ಮುರಿದ ಜಾಕಿ ಭಾವನಾ
ಬಹುಭಾಷಾ ನಟಿ ಭಾವನಾ ಮೆನನ್ ಬೆಂಗಳೂರಿನ ಉದ್ಯಮಿ ನವೀನ್ ಎಂಬುವವರನ್ನು ಪ್ರೀತಿಸಿ ಮುದುವೆ ಆಗಿದ್ದಾರೆ. 'ರೋಮಿಯೋ' ಚಿತ್ರದಲ್ಲಿ ನವೀನ್ ಸಹ ಒಬ್ಬರಾಗಿದ್ದರು. ಆ ಸಿನಿಮಾ ಚಿತ್ರೀಕರಣದ ವೇಳೆ ಶುರುವಾಗಿದ್ದ ಪರಿಚಯ, ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. 2018ರಲ್ಲಿ ಕೇರಳದ ತ್ರಿಶೂರ್‌ನಲ್ಲಿ ಇಬ್ಬರ ಮದುವೆ ನೆರವೇರಿತ್ತು.
ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿ ಭಾವನಾ ಮೋಡಿ ಮಾಡಿದ್ದಾರೆ. 'ಜಾಕಿ' ಆಕೆ ನಟಿಸಿದ ಮೊದಲ ಕನ್ನಡ ಸಿನಿಮಾ. ಬಳಿಕ ಗಣೇಶ್, ಶಿವಣ್ಣ, ಸುದೀಪ್ ಹೀಗೆ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದರು. ಬೆಂಗಳೂರಿನ ಸೊಸೆಯಾಗಿರುವ ಭಾವನಾ ಸದ್ಯ ಕನ್ನಡದ ಎರಡು ಹಾಗೂ ತಮಿಳಿನ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಟಿ ಭಾವನಾ ಜೀವನದಲ್ಲಿ ಕಹಿ ಘಟನೆ ಗೊತ್ತೇಯಿದೆ. ಅದನ್ನೆಲ್ಲಾ ಮರೆತು ಮತ್ತೆ ಸಿನಿಮಾಗಳಲ್ಲಿ ಆಕೆ ಮಿಂಚುತ್ತಿದ್ದಾರೆ. ಮದುವೆ ಬಳಿಕವೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. 'ರೋಮಿಯೊ' ಸಿನಿಮಾ ಸಮಯದಲ್ಲಿ ಭಾವನಾ- ನವೀನ್ ನಡುವೆ ಲವ್ವಾಗಿದ್ದು ಗೊತ್ತೇಯಿದೆ. ಆ ಬಗ್ಗೆ ಇದೀಗ ಸ್ವತಃ ಭಾವನಾ ಮಾತನಾಡಿದ್ದಾರೆ. ಪ್ರೀತಿ ಹುಟ್ಟಿದ್ದೇಗೆ? ಎಂದು ತಮಿಳಿನ ಬಿಹೈಂಡ್‌ವುಡ್ಸ್ ಯೂಟ್ಯೂಬ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ನವೀನ್ ಅವರಿಗಿಂತ ಮುನ್ನ ಮೊತ್ತೊಬ್ಬರನ್ನು ಪ್ರೀತಿಸಿ ಲವ್ ಬ್ರೇಕಪ್ ಆಗಿದ್ದನ್ನು ಬಹಿರಂಗಪಡಿಸಿದ್ದಾರೆ.
"ನಮ್ಮದು ಲವ್ ಮ್ಯಾರೇಜ್. ಯಾರು ಪ್ರಪೋಸ್ ಮಾಡಿದರು ಎಂದು ಹೇಳುವುದು ಕಷ್ಟ. ಇಬ್ಬರೂ ಒಟ್ಟೊಟ್ಟಿಗೆ ಪ್ರಪೋಸ್ ಮಾಡಿಕೊಂಡೆವು ಅಂದುಕೊಳ್ಳಿ. ನನಗೆ ಅದಕ್ಕೂ ಮುನ್ನ ಮುನ್ನ ಒಂದು ಲವ್ ಫೇಲ್ಯೂರ್ ಆಗಿತ್ತು. ಕನ್ನಡದಲ್ಲಿ ನಾನು ಪುನೀತ್ ಜೊತೆ ಮೊದಲು 'ಜಾಕಿ' ಚಿತ್ರದಲ್ಲಿ ನಟಿಸಿದ್ದೆ. 2ನೇ ಸಿನಿಮಾ ಸುದೀಪ್ ಜೊತೆ ನಟಿಸುತ್ತಿದ್ದಾಗಲೇ 'ರೋಮಿಯೊ' ಸಿನಿಮಾ ಅವಕಾಶ ಬಂದಿತ್ತು" ಎಂದು ಭಾವನಾ ಆ ದಿನಗಳನನ್ನು ನೆನಪಿಸಿಕೊಂಡಿದ್ದಾರೆ.
"ರೋಮಿಯೊ' ಚಿತ್ರದ ಕಥೆ ಹೇಳಬೇಕು ಎಂದು ನವೀನ್ ನನಗೆ ಕಾಲ್ ಮಾಡಿದ್ದರು. ಆಗ ನಾನು ಕೇರಳದಲ್ಲಿ ಬೇರೆ ಸಿನಿಮಾ ಚಿತ್ರೀಕರಣದಲ್ಲಿದ್ದೆ. ಅಲ್ಲಿಗೆ ಬಂದು ಕತೆ ಹೇಳಿದ್ದರು. ಅದೇ ಸಮಯದಲ್ಲಿ ನಾನು ಬ್ರೇಕಪ್ ಆಗಿ ಡಿಪ್ರೆಶಷನ್‌ನಲ್ಲಿದ್ದೆ. ಸಿನಿಮಾ ಚಿತ್ರೀಕರಣದ ವೇಳೆಗೆ ನವೀನ್ ಒಳ್ಳೆ ಸ್ನೇಹಿತರಾಗಿಬಿಟ್ಟಿದ್ದರು. ಅದೇ ಸಮಯದಲ್ಲಿ ಅವರಿಗೂ ಒಂದು ಲವ್ ಬ್ರೇಕಪ್ ಆಗಿತ್ತು. ಇಬ್ಬರದ್ದು ಸೇಮ್ ಪಿಂಚ್ ಎನಿಸಿತು" ಎಂದು ಭಾವನಾ ನಕ್ಕಿದ್ದಾರೆ.

"ಬಳಿಕ ನಮ್ಮ ಸ್ನೇಹ ಹೀಗೆ ಮುಂದುವರೆಯಿತು. ನನಗೆ ಆಗ ಮದುವೆಯ ಆಲೋಚನೆ ಇರಲಿಲ್ಲ. ಅದೇ ಗೊತ್ತಿಲ್ಲ, ಎಲ್ಲರೂ ಮದುವೆ, ಮಕ್ಕಳು ಅಂತ ಯೋಚಿಸಿದರೆ ನಾನು ಅದಕ್ಕೆ ವಿರುದ್ಧ. ಲವ್ ಓಕೆ ಮದುವೆ ಯಾಕೆ ಎನ್ನುವ ಲೆಕ್ಕಾಚಾರ. ಕೊನೆಗೆ ಒಪ್ಪಿದೆ. ಆಗ ನನ್ನ ದೃಷ್ಟಿ ಕರಿಯರ್ ಮೇಲಿತ್ತು. ಲೈಫ್ ಬಗ್ಗೆ ಅಲ್ಲ, ನನಗೆ ಇಂತಹ ಆಲೋಚನೆ ಆಗಾಗ್ಗೆ ಬದಲಾಗುತ್ತಿರುತ್ತದೆ. ಒಮ್ಮೆ ಜೀವನ ಮುಖ್ಯ ಎನಿಸಿದರೆ ಮತ್ತೊಮ್ಮೆ ಲೈಫ್ ಮುಖ್ಯ ಎನಿಸುತ್ತದೆ. ಹೀಗೆ ನನ್ನದು ಬಹಳ ಕನ್‌ಫ್ಯೂಶನ್ ವ್ಯಕ್ತಿತ್ವ" ಎಂದು ಭಾವನಾ ತಿಳಿಸಿದ್ದಾರೆ.
ನವೀನ್ ಅವರನ್ನು ಪ್ರೀತಿಸಿ ಮದುವೆ ಆಗುವ ಮುನ್ನ ಮತ್ತೊಬ್ಬರೊಟ್ಟಿಗೆ ಲವ್ ಫೇಲ್ಯೂರ್ ಆಗಿದ್ದನ್ನು ಭಾವನಾ ಹೇಳಿದ್ದಾರೆ. ಆದರೆ ಆತ ಯಾರು ಎನ್ನುವುದನ್ನು ತಿಳಿಸಿಲ್ಲ. ಆದರೆ ಮಲಯಾಳಂ ನಟ ಅನೂಪ್ ಮೆನನ್ ಹಾಗೂ ಭಾವನಾ ಮನೆನ್ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಆಗ ಗುಲ್ಲಾಗಿತ್ತು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇರಲಿಲ್ಲ. ಭಾವನಾ ಮೊದಲ ಲವ್ ಬ್ರೇಕಪ್ ಅನೂಪ್ ಮೆನನ್ ಜೊತೆಗೆ ಇರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.
ಮನೆಯಲ್ಲಿ ಕೂಡ ಹೀಗೆ ಮಾತನಾಡುತ್ತಿರುತ್ತೇನೆ. ಒಮ್ಮೊಮ್ಮೆ ಸಿನಿಮಾ ಸಾಕು ಬೇರೆ ಏನಾದರೂ ಮಾಡ್ತೀನಿ ಎನ್ನುತ್ತೇನೆ. ಒಮ್ಮೊಮ್ಮೆ ದಿಢೀರನೆ 'ಗಗನಯಾತ್ರಿ' ಆಗ್ತೀನಿ ಎನ್ನುತ್ತೇನೆ. ಮತ್ತೊಮ್ಮೆ ವ್ಯಾಂಪೈರ್ ಆಗಬೇಕು ಎನಿಸಿಬಿಟ್ಟಿತ್ತು. ಒಟ್ಟಾರೆ ನನ್ನ ಆಲೋಚನೆಗೆಲ್ಲಾ ಬಹಳ ವಿಚಿತ್ರವಾಗಿರುತ್ತದೆ. ವ್ಯಾಂಪೈರ್ ಆಗುವುದು ಹೇಗೆ ಎಂದು ಗೂಗಲ್ ಮಾಡಿ ಸರ್ಚ್ ಮಾಡಿದ್ದೆ. ನಮ್ಮ ಪತಿಗೂ ಇದು ಮೊದಲು ವಿಚಿತ್ರ ಅನಿಸಿತು, ಬಳಿಕ ಅಭ್ಯಾಸವಾಯಿತು. ಒಮ್ಮೆ ಬಂದು ನೀನು ಲೂಸಾ ಎಂದು ಕೇಳಿದ್ದರೂ ಎಂದು ಭಾವನಾ ಮೆನನ್ ವಿವರಿಸಿದ್ದಾರೆ.
ನನ್ನ ಈ ವಿಚಿತ್ರ ವ್ಯಕ್ತಿತ್ವದ ಬಗ್ಗೆ ನನ್ನ ಸ್ನೇಹಿತರಿಗೆಲ್ಲಾ ಚೆನ್ನಾಗಿ ಗೊತ್ತು. ನಮ್ಮ ಪತಿ ನನಗೆ ಬಂಬಲವಾಗಿ ನಿಲ್ಲುತ್ತಾರೆ. ನನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಚೆನ್ನಾಗಿ ನಟಿಸುತ್ತೀಯಾ, ನಿನಗೆ ಎಷ್ಟು ದಿನ ಇಷ್ಡ ಬರುತ್ತದೋ ಅಷ್ಟು ದಿನ ನಟಿಸು ಎಂದು ಬೆಂಬಲ ಸೂಚಿಸುತ್ತಾರೆ. ಆದರೆ ನನ್ನ ಮನಸ್ಸೆ ಅತ್ತಿತ್ತ ವಾಲುತ್ತಿರುತ್ತದೆ. ನಾನು ಏನು ಮಾಡೋದು ಎಂದು ಗೂಗಲ್ ಮಾಡಿ ಮಾಡಿ ನನಗ ಒಂದು ಕೆಲಸದ ಅವಕಾಶವೂ ಬಂದಿತ್ತು ಎಂದು ಭಾವನಾ ಒಂದು ಪ್ರಸಂಗ ನೆನಪಿಸಿಕೊಂಡಿದ್ದಾರೆ.
"ನನಗೆ ಫೈನಲ್ ಆಗಿ ಸ್ವಿಗ್ಗಿಯಿಂದ ಒಂದು ಜಾಬ್ ಆಫರ್ ಬಂದಿತ್ತು. ನಿಮಗೆ ಇಷ್ಟವಿದ್ದರೆ ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಸ್ವವಿವರ ಕೊಡಿ ಎಂದು ಭಾವನಾ ಹೇಳಿ ನಕ್ಕಿದ್ದಾರೆ. ನನಗೆ ಚಿಪ್ಸ್ ಅಂದರೆ ಬಹಳ ಇಷ್ಟ, ಡಯೆಟ್ ಎಲ್ಲಾ ಮಾಡಲ್ಲ. ಬೇರೆ ಸೆಲೆಬ್ರೆಟಿಗಳು ಇದು ತಿನ್ನಲ್ಲ, ಅದು ತಿನ್ನಲ್ಲ, ಡಯೆಟ್ ಎಂದು ಹೇಳುವುದು ನೋಡಿ ಅಚ್ಚರಿ ಆಗುತ್ತದೆ. ಇರುವುದು ಒಂದು ಜೀವನ ಇಷ್ಟ ಬಂದಿದ್ದನ್ನು ತಿನ್ನಬೇಕು ಎನ್ನುವುದು ನನ್ನ ಪಾಲಿಸಿ ಎಂದು ಭಾವನಾ ಹೇಳಿಕೊಂಡಿದ್ದಾರೆ.
ಜೀವನದಲ್ಲಿ ಹಣ ಬಹಳ ಮುಖ್ಯ. ಕೋಟಿ ಕೋಟಿ ಸಂಪಾದನೆ ಮಾಡಿದವರು ಹಣವೇ ಎಲ್ಲಾ ಅಲ್ಲ, ಹಣ ಹಿಂದೆ ಹೋಗಬೇಡಿ ಎಂದು ಉಪದೇಶ ಮಾಡುತ್ತಾರೆ ಅದನ್ನೆಲ್ಲಾ ನೋಡಿದರೆ ನಗು ಬರುತ್ತದೆ. ಯಾವಾಗಲೂ ಪಾಸಿಟಿವ್ ಆಗಿ ಇರಲು ಸಾಧ್ಯವಿಲ್ಲ, ಪಾಸಿಟಿವ್ ನೆಗೆಟಿವ್ ಹೀಗೆ ಆಲೋಚನೆ ಬದಲಾಗುತ್ತಿರುತ್ತದೆ ಎಂದು ಭಾವನಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಎಲ್ಲಾ ಇದ್ದಾಗ ನಮಗೆ ಕಷ್ಟದ ಅರಿವಾಗುವುದಿಲ್ಲ. ನನ್ನ ಬಳಿ ಈಗ ಸಾಕಷ್ಟು ಹಣ ಇರಬಹುದು. ಆದರೆ 500 ರೂ. ಫೋನ್ ರೀಚಾರ್ಜ್ ಮಾಡಿಸುವುದಕ್ಕೂ ಹಣವಿಲ್ಲದೇ ಕಷ್ಟಪಡುವವರು ಇದ್ದಾರೆ. ಚಿಕ್ಕಂದಿನಲ್ಲಿ ಬರ್ತ್‌ಡೇ ಕೇಕ್ ಅಂದರೆ ಇಷ್ಟವಾಗಿತ್ತಿತ್ತು. ಯಾಕಂದರೆ ಅಷ್ಟು ಕೇಕ್ ಆಗ ಮಾತ್ರ ನೋಡುತ್ತಿದ್ದೆವು. ಹಾಗಾಗಿ ಬರ್ತ್‌ಡೇ ಎಕ್ಸೈಟ್ ಎನಿಸುತ್ತಿತ್ತು. ದೊಡ್ಡವರಾಗುತ್ತಿದ್ದಂತೆ ಕೇಕ್ ಸುಲಭವಾಗಿ ಸಿಗಲು ಶುರುವಾಯಿತು. ಅರೇ ಬರ್ತ್‌ಡೇ ಕೇಕ್ ಎನ್ನುವುದೆಲ್ಲಾ ಹೋಯಿತು. ಈಗಲೂ ಬರ್ತ್‌ಡೇ ಕೇಕ್ ಕಟ್ ಮಾಡೋದು ಅಂದರೆ ನಾನು ಎಕ್ಸೈಟ್ ಆಗಲ್ಲ ಎಂದು ಭಾವನಾ ತಿಳಿಸಿದ್ದಾರೆ.
ಕೇರಳದ ತ್ರಿಶೂರ್‌ನಲ್ಲಿ ಹುಟ್ಟಿ ಬೆಳೆದ ಕಾರ್ತಿಕಾ ಮೆನನ್ ಬಳಿಕ ಭಾವನಾ ಎಂದು ಹೆಸರು ಬದಲಿಸಿಕೊಂಡಿದ್ದರು. ಸಹ ಛಾಯಾಗ್ರಾಹಕ ಸಿ. ಬಾಲಚಂದ್ರನ್ ಎಂಬುವವರ ಮಗಳು. ಹಾಗಾಗಿ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. 2002ರಲ್ಲಿ 'ನಮ್ಮಲ್' ಎಂಬ ಮಲಯಾಳಂ ಚಿತ್ರದಲ್ಲಿ ಭಾವನಾ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಮುಂದೆ ಸಾಲು ಸಾಲು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ಒಂದೆರಡು ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದರು.
'ಜಾಕಿ' ಸಿನಿಮಾ ಮೂಲಕ ನಟಿ ಭಾವನಾ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಮಲಯಾಳಂ ಬಿಟ್ಟರೆ ಕನ್ನಡದಲ್ಲೇ ಆಕೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ವಿಷ್ಣುವರ್ಧನ', 'ಯಾರೇ ಕೂಗಾಡಲಿ', 'ಟೋಪಿವಾಲ', 'ಚೌಕ', 'ಟಗರು', '99', 'ಭಜರಂಗಿ-2' ಹೀಗೆ ಹಲವು ಕನ್ನಡ ಸಿನಿಮಾಗಳಲ್ಲಿ ಭಾವನಾ ನಟಿಸಿ ಮೋಡಿ ಮಾಡಿದ್ದಾರೆ.


Click it and Unblock the Notifications











