For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಕುಮಾರಸ್ವಾಮಿ ಅಲ್ಲ, ಡಾರ್ಲಿಂಗ್ ಕೃಷ್ಣ ಹೊಸ ಚಿತ್ರದ ನಾಯಕಿ ಇವರು...

  |

  ಡಾರ್ಲಿಂಗ್ ಕೃಷ್ಣ ನಟನೆಯ ಹೊಸ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ನಾಗಶೇಖರ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಶ್ರೀಕೃಷ್ಣ ಅಟ್ ಜಿ ಮೇಲ್ ಡಾಟ್ ಕಾಮ್' ಚಿತ್ರದ ಮೂಲಕ ರಾಧಿಕಾ ಕುಮಾರಸ್ವಾಮಿ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅದೀಗ ಹುಸಿಯಾಗಿದೆ.

  ಇನ್ಮುಂದೆ ಸೇನೆಯ ಬಗ್ಗೆ ಸಿನಿಮಾ ಮಾಡೋದು ಅಷ್ಟು ಸುಲಭ ಇಲ್ಲ | Filmibeat Kannada

  'ಜಾಕಿ', 'ವಿಷ್ಣುವರ್ಧನ', 'ಟಗರು' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಂನ ನಟಿ ಭಾವನಾ ಮೆನನ್ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿಯಾಗುತ್ತಿರುವುದು ಖಚಿತವಾಗಿದೆ. ಭಾವನಾ ಮೆನನ್ ತಮ್ಮ ಚಿತ್ರದಲ್ಲಿ ನಾಯಕಿಯಾಗಲಿದ್ದಾರೆ ಎಂಬುದನ್ನು ನಾಗಶೇಖರ್ ದೃಢಪಡಿಸಿದ್ದಾರೆ.

  ಸೆಪ್ಟೆಂಬರ್‌ನಿಂದ ಚಿತ್ರೀಕರಣ

  ಸೆಪ್ಟೆಂಬರ್‌ನಿಂದ ಚಿತ್ರೀಕರಣ

  ಸೆಪ್ಟೆಂಬರ್ 1ರಿಂದ ಚಿತ್ರೀಕರಣ ಆರಂಭಿಸಲು ನಾಗಶೇಖರ್ ತೀರ್ಮಾನಿಸಿದ್ದಾರೆ. ಮೊದಲ ಹಂತದ ಚಿತ್ರೀಕರಣ 14 ದಿನಗಳವರೆಗೆ ನಡೆಯಲಿದೆ. ಆರಂಭದಲ್ಲಿ ರಾಧಿಕಾ ಕುಮಾರಸ್ವಾಮಿ ಹೆಸರು ಕೇಳಿಬಂದಿದ್ದು ನಿಜ. ಆದರೆ ಇದಕ್ಕೆ ನಾಯಕಿಯಾಗಿ ಭಾವನಾ ಮೆನನ್ ಆಯ್ಕೆಯಾಗಿದ್ದಾರೆ. ಇದು ಅಧಿಕೃತ ಎಂದು ತಿಳಿಸಿದ್ದಾರೆ.

  ಕನ್ನಡದ 'ಲವ್ ಮಾಕ್‌ಟೇಲ್'ನ ತೆಲುಗು ರೀಮೇಕ್‌ನಲ್ಲಿ ಖ್ಯಾತ ನಟಿ ನಾಯಕಿಕನ್ನಡದ 'ಲವ್ ಮಾಕ್‌ಟೇಲ್'ನ ತೆಲುಗು ರೀಮೇಕ್‌ನಲ್ಲಿ ಖ್ಯಾತ ನಟಿ ನಾಯಕಿ

  ತಾರಾಬಳಗ

  ತಾರಾಬಳಗ

  ಅರ್ಜುನ್ ಜನ್ಯ ಈ ಸಿನಿಮಾಕ್ಕೂ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಇರಲಿದೆ. ದತ್ತಣ್ಣ, ಸುಹಾಸಿನಿ, ಅರುಣ್ ಸಾಗರ್, ರಂಗಾಯಣ ರಘು ಮುಂತಾದವರು ತಾರಾಗಣದಲ್ಲಿದ್ದಾರೆ. ಪ್ರೀತಂ ಗುಬ್ಬಿ ಸಂಭಾಷಣೆ ಬರೆದಿದ್ದಾರೆ.

  ಲವ್ ಮಾಕ್‌ಟೇಲ್ ರೀಮೇಕ್

  ಲವ್ ಮಾಕ್‌ಟೇಲ್ ರೀಮೇಕ್

  ಇನ್ನೊಂದೆಡೆ ನಾಗಶೇಖರ್, ಡಾರ್ಲಿಂಗ್ ಕೃಷ್ಣ ನಿರ್ಮಾಣ, ನಿರ್ದೇಶನ ಮತ್ತು ನಟನೆಯ 'ಲವ್ ಮಾಕ್‌ಟೇಲ್' ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡುತ್ತಿದ್ದಾರೆ. ಲವ್ ಮಾಕ್‌ಟೇಲ್ ರೀಮೇಕ್‌ನಲ್ಲಿ ಸತ್ಯದೇವ್ ಮತ್ತು ತಮನ್ನಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಕನ್ನಡದ ನಟಿ ಕಾವ್ಯಾ ಶೆಟ್ಟಿ ಕೂಡ ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ 'ಚುಕ್ಕಲ ಪಲ್ಲಕಿಲೋ' ಎಂದು ಹೆಸರು ಇಡಲಾಗಿದೆ.

  ಡಾರ್ಲಿಂಗ್ ಕೃಷ್ಣಗೆ ನಾಗಶೇಖರ್ ನಿರ್ದೇಶನ: ಚಿತ್ರದ ನಾಯಕಿ ಮತ್ತು ಹೆಸರು ಬಹಿರಂಗಡಾರ್ಲಿಂಗ್ ಕೃಷ್ಣಗೆ ನಾಗಶೇಖರ್ ನಿರ್ದೇಶನ: ಚಿತ್ರದ ನಾಯಕಿ ಮತ್ತು ಹೆಸರು ಬಹಿರಂಗ

  ಲವ್ ಮಾಕ್‌ಟೇಲ್ 2 ಕಾರ್ಯ

  ಲವ್ ಮಾಕ್‌ಟೇಲ್ 2 ಕಾರ್ಯ

  ಡಾರ್ಲಿಂಗ್ ಕೃಷ್ಣ ಕೂಡ ತಮ್ಮ 'ಲವ್ ಮಾಕ್‌ಟೇಲ್-2'ರ ತಯಾರಿ ನಡೆಸುತ್ತಿದ್ದಾರೆ. ಇದು ಲವ್ ಮಾಕ್‌ಟೇಲ್ ಚಿತ್ರದ ಮುಂದುವರಿದ ಭಾಗವಾಗಿರಲಿದೆ. ಹೀಗಾಗಿ ಕೆಲವು ಪಾತ್ರಗಳು ಮತ್ತೆ ಕಾಣಿಸಿಕೊಳ್ಳಲಿವೆ. ಅದರ ಜತೆಗೆ ಕಥೆ ವಿಭಿನ್ನ ಹಾದಿಯಲ್ಲಿ ಸಾಗಲಿದ್ದು, ನಾಯಕಿಯ ಪಾತ್ರಕ್ಕೆ ಹೊಸ ನಟಿಯನ್ನು ಹುಡುಕಾಡಲು ಚಿತ್ರತಂಡ ಮುಂದಾಗಿತ್ತು.

  'ಲವ್ ಮಾಕ್ ಟೇಲ್' ತೆಲುಗು ರಿಮೇಕ್ ಗೆ ಟೈಟಲ್ ಫಿಕ್ಸ್: ಆದಿ-ನಿಧಿಮಾ ಪಾತ್ರದಲ್ಲಿ ಸ್ಟಾರ್ ಕಲಾವಿದರು'ಲವ್ ಮಾಕ್ ಟೇಲ್' ತೆಲುಗು ರಿಮೇಕ್ ಗೆ ಟೈಟಲ್ ಫಿಕ್ಸ್: ಆದಿ-ನಿಧಿಮಾ ಪಾತ್ರದಲ್ಲಿ ಸ್ಟಾರ್ ಕಲಾವಿದರು

  English summary
  Bhavana Menon to play lead role along with Darling Krishna in Nagashekar directed Srikrishnagmail.com film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X