ಆಪ್ತರ ಸಮ್ಮುಖದಲ್ಲಿ ಜಾಕಿ ಭಾವನಾ ಅದ್ಧೂರಿ ಆರತಕ್ಷತೆ

By Pavithra

Recommended Video

ಆಪ್ತರ ಸಮ್ಮುಖದಲ್ಲಿ ಜಾಕಿ ಭಾವನಾ ಅದ್ಧೂರಿ ಆರತಕ್ಷತೆ | Filmibeat Kannada

ಬಹುಭಾಷಾ ನಟಿ ಜಾಕಿ ಭಾವನಾ ಹಾಗೂ ನವೀನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹದಿನೈದು ದಿನಗಳು ಕಳೆದಿವೆ. ಕೇರಳದ ಶ್ರೀ ಕೃಷ್ಣ ದೇವಾಲಯದಲ್ಲಿ ಸರಳವಾಗಿ ಮದುವೆ ಮಾಡಿಕೊಂಡ ಈ ತಾರಾ ಜೋಡಿ ಕೇರಳದ ಚಿತ್ರರಂಗದ ಗಣ್ಯರಿಗೆ ಹಾಗೂ ಸ್ನೇಹಿತರಿಗಾಗಿ ಅದ್ಧೂರಿ ಆರತಕ್ಷತೆಯನ್ನ ಮಾಡಿಕೊಂಡಿತ್ತು.

ಎಲ್ಲರಿಗೂ ತಿಳಿದಿರುವಂತೆ ಭಾವನಾ ಕನ್ನಡಚಿತ್ರರಂಗದಲ್ಲಿಯೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿರುವ ನಟಿ. ಇಲ್ಲಿಯವರೆಗೂ ಭಾವನಾ ಅಭಿನಯಿಸಿರುವ ಎಲ್ಲಾ ಚಿತ್ರಗಳು ಹಿಟ್ ಆಗಿದೆ.

ನವೀನ್ ಸದ್ಯ ಬೆಂಗಳೂರಿನ ನಿವಾಸಿ ಆಗಿರುವುದರಿಂದ ಇಲ್ಲಿನ ಸ್ನೇಹಿತರು ಹಾಗೂ ಸಿನಿಮಾರಂಗದ ಗಣ್ಯರಿಗಾಗಿ ಅದ್ಧೂರಿಯಾಗಿ ಆಪ್ತರ ಸಮ್ಮುಖದಲ್ಲಿ ನಿನ್ನೆ (ಫೆ.4)ರಂದು ಆರತಕ್ಷತೆ ಮಾಡಿಕೊಂಡರು. ಹಾಗಾದರೆ ಭಾವನಾ ಹಾಗೂ ನವೀನ್ ಆರತಕ್ಷತೆಯಲ್ಲಿ ಯಾರೆಲ್ಲಾ ಭಾಗಿ ಆಗಿದ್ದರು? ಏನೆಲ್ಲಾ ವಿಶೇಷತೆಗಳಿತ್ತು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ

ಅದ್ಧೂರಿ ಆರತಕ್ಷತೆಯಲ್ಲಿ ಚಿತ್ರರಂಗ

ಅದ್ಧೂರಿ ಆರತಕ್ಷತೆಯಲ್ಲಿ ಚಿತ್ರರಂಗ

ನಟಿ ಜಾಕಿ ಭಾವನಾ ಹಾಗೂ ನವೀನ್ ಅವರ ಅದ್ಧೂರಿ ಆರತಕ್ಷತೆ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿದೆ. ಭಾವನ ಅಭಿನಯಿಸಿದ ಚಿತ್ರಗಳಲ್ಲಿ ಕೆಲಸ ಮಾಡಿದವರು ಹಾಗೂ ನವೀನ್ ಕುಟುಂಬಸ್ಥರು ಮತ್ತು ಸ್ನೇಹಿತರಷ್ಟೇ ಆರತಕ್ಷತೆಯಲ್ಲಿ ಭಾಗಿ ಆಗಿದ್ದಾರೆ.

ಆಯ್ದ ವ್ಯಕ್ತಿಗಳಷ್ಟೇ ಭಾಗಿ

ಆಯ್ದ ವ್ಯಕ್ತಿಗಳಷ್ಟೇ ಭಾಗಿ

ಆರತಕ್ಷತೆಯಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರೆಬಲ್ ಸ್ಟಾರ್ ಅಂಬರೀಶ್, ಪ್ರಿಯಾಮಣಿ, ಪಾರೂಲ್ ಯಾದವ್, ಮಾನ್ವಿತಾ ಹರೀಶ್ ಸೇರಿದಂತೆ ಕೆಲ ಆಯ್ದ ಸ್ಟಾರ್ ಗಳು ಮಾತ್ರ ಕಾಣಿಸಿಕೊಂಡಿದ್ದಾರೆ.

ಮದುವೆ ನಂತರ ಬಿಡುಗಡೆ ಆಗುತ್ತಿರುವ ಚಿತ್ರ

ಮದುವೆ ನಂತರ ಬಿಡುಗಡೆ ಆಗುತ್ತಿರುವ ಚಿತ್ರ

ಜಾಕಿ ಭಾವನಾ ಅಬಿನಯದ ಟಗರು ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಆರತಕ್ಷತೆಗೆ ಇಡೀ ಟಗರು ಸಿನಿಮಾತಂಡವನ್ನ ಆಹ್ವಾನ ಮಾಡಲಾಗಿತ್ತು. ಕಲಾವಿದರು ಸೇರಿದಂತೆ ಇಡೀ 'ಟಗರು' ತಂಡದ ತಂತ್ರಜ್ಞರು ಭಾವನಾ ಮತ್ತು ನವೀನ್ ಅವರಿಗೆ ಶುಭ ಹಾರೈಸಿದರು

ಬ್ಲೂ ಸೂಟ್ ನಲ್ಲಿ ಕಾಣಿಸಿಕೊಂಡ ನವೀನ್

ಬ್ಲೂ ಸೂಟ್ ನಲ್ಲಿ ಕಾಣಿಸಿಕೊಂಡ ನವೀನ್

ಅದ್ದೂರಿಯಾಗಿ ನಡೆದ ಆರತಕ್ಷತೆಯಲ್ಲಿ ನಟಿ ಭಾವನಾ ಪೀಚ್ ಗ್ರೀನ್ ಗೌನ್ ಹಾಕಿಕೊಂಡಿದ್ದರು. ಇನ್ನು ನವೀನ್ ಬ್ಲೂ ಸೂಟ್ ನಲ್ಲಿ ಕಾಣಿಸಿಕೊಂಡರು. ಒಟ್ಟಾರೆ ಸ್ಯಾಂಡಲ್ ವುಡ್ ನ ಸಾಕಷ್ಟು ಗಣ್ಯರು ಆರತಕ್ಷತೆಗೆ ಬಂದು ಇಬ್ಬರಿಗೂ ಹಾರೈಸಿದರು.

More from Filmibeat

English summary
Kannada and Malayalam actress jackie Bhavana and Naveen's reception took place yesterday (Feb. 4) in Bangalore, Most star artists from Sandalwood have come to the reception and wish the bride-groom.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X