"ಗಂಡಿಗಿಂತ ಹೆಣ್ಣಿಗೆ ಬಯಕೆ ಜಾಸ್ತಿ.. ಸಂಭೋಗ ಮಾಡಿದಾಕ್ಷಣ ಆಸೆ ಈಡೇರಿದಂತಲ್ಲ": ಭಾವನಾ

ಮದುವೆಯಾಗದೇ ಐವಿಎಫ್‌ನಿಂದ ತಾವು ಗರ್ಭಿಣಿ ಆಗಿರುವ ಸಂಗತಿಯನ್ನು ನಟಿ ಭಾವನಾ ರಾಮಣ್ಣ ಹಂಚಿಕೊಂಡಿದ್ದಾರೆ. ಈ ಬಗ್ಗೆ ಪರ- ವಿರೋಧ ಚರ್ಚೆ ನಡೀತಿದೆ. ಬಹುತೇಕರು ಆಕೆಯ ನಡೆಯನ್ನು ಸ್ವಾಗತಿಸಿದ್ದಾರೆ. ಕೆಲವರು ಮಾತ್ ಫೆಮಿನಿಸಂ, ಅದು, ಇದು ಅಂತೆಲ್ಲಾ ವ್ಯಂಗ್ಯವಾಡುತ್ತಿದ್ದಾರೆ. ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡಿ ತಮ್ಮ ನಿರ್ಧಾರದ ಬಗ್ಗೆ ಭಾವನಾ ರಾಮಣ್ಣ ಸ್ಪಷ್ಟನೆ ನೀಡಿದ್ದಾರೆ.

ನಾನು ಮದುವೆ ಎಂಬ ವ್ಯವಸ್ಥೆಯ ವಿರೋಧಿ ಅಲ್ಲ, ಅದರಲ್ಲಿ ನಂಬಿಕೆ ಅಲ್ಲ ಅಂತಲೂ ಅಲ್ಲ. ಇದು ನನ್ನ ನಿರ್ಧಾರ. ಕಲೆಯನ್ನು ಇಷ್ಟಪಟ್ಟಿರುವ ನನ್ನನ್ನು ಅದೇ ರೀತಿ ಒಪ್ಪುವವರು ಬೇಕು. ಅಂತಹ ಸಂಗಾತಿ ಸಿಕ್ಕರೆ ಮದುವೆ ಆಗುತ್ತೇನೆ. ನನಗೆ ತಾಯಿ ಆಗುವ ಆಸೆ ಇತ್ತು. ಹಾಗಾಗಿ ಐವಿಎಫ್‌ ಚಿಕಿತ್ಸೆ ಮೂಲಕ ಮಗು ಪಡೆಯಲು ಮುಂದಾಗಿದ್ದೇನೆ ಎಂದು ಭಾವನಾ ತಿಳಿಸಿದ್ದಾರೆ.

Bhavana Ramanna Embraces Motherhood via IVF Without Marriage Sparks Debate on Women s Autonomy

ನನ್ನ ಜೀವನದ ಈ ನಿರ್ಧಾರದ ಬಗ್ಗೆ ಯಾರ ಸರ್ಟಿಫಿಕೇಟ್ ಕೂಡ ನನಗೆ ಬೇಕಿಲ್ಲ. ನಡೆದ್ದದ್ದು ನಡೆಯಿತು. ಅದು ಹೀಗೆ ಮುಂದುವರೆದಿದೆ. ನಾನು ಯಾವುದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು 'ಅವನಿಯಾನ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟಿ ಭಾವನಾ ರಾಮಣ್ಣ ಮಾತನಾಡಿದ್ದಾರೆ. ದೇಹ ಬಯಸುವ ಸಂಭೋಗ, ರೊಮ್ಯಾನ್ಸ್, ಮಿಲನಕ್ರಿಯೆ ಎಲ್ಲವನ್ನು ತ್ಯಾಗ ಮಾಡಿ ಸ್ವಾವಲಂಬಿಯಾಗಿ ಬದುಕಬೇಕು ಅಂತೀರಾ? ಎನ್ನುವ ಪ್ರಶ್ನೆಗೆ ಯಾವುದನ್ನು ತ್ಯಾಗ ಮಾಡಿ ಬದುಕುವ ಅವಶ್ಯಕತೆ ಇಲ್ಲ. ನನ್ನ ಜೀವನದಲ್ಲಿ ಯಾವುದು ಮುಖ್ಯವೋ ಅದಕ್ಕೆ ಏನು ಬೇಕೋ ಆ ದಾರಿ ಆರಿಸಿಕೊಳ್ಳುವ ನಿರ್ಧಾರ ತಗೊಂಡಿದ್ದೀನಿ ಎಂದು ಭಾವನಾ ರಾಮಣ್ಣ ಹೇಳಿದ್ದಾರೆ.

"ಮದುವೆ ಆಗಿರುವ ಎಷ್ಟೋ ದಂಪತಿಗೆ ಪರಸ್ಪರ ಆಕರ್ಷಣೆ ಇರಲ್ಲ. ಅದೇ ಕಾರಣಕ್ಕೆ ಡಿವೋರ್ಸ್ ಪಡೆಯುತ್ತಿರುವವರು ಇದ್ದಾರೆ. ಇದೆಲ್ಲಾ ಸೈಕಲಾಜಿಕಲ್ ವಿಚಾರಗಳು. ಮದುವೆಯಾದ ಕೂಡಲೇ ಆಕರ್ಷಣೆ ಬರಬೇಕು ಅಂತಿಲ್ಲ. ಹೆಣ್ಣಾಗಿ ನನ್ನ ಆತ್ಮಗೌರವ ಉಳಿಸಿಕೊಂಡು, ನನ್ನ ತಾಯ್ತನದ ಹಂಬಲ ಈಡೇರಿಸಿಕೊಂಡು ಬದುಕುವ ಅವಕಾಶ ಕಾನೂನು ಮಾಡಿಕೊಟ್ಟಿದೆ. ಅದನ್ನು ನಾನು ಬಳಸಿಕೊಳ್ಳುತ್ತಿದ್ದೇನೆ" ಎಂದು ಭಾವನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೆಣ್ಣು ಕೂಡ ರೊಮ್ಯಾಂಟಿಕ್. ಅದನ್ನು ಇಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ. ನೀವು ಹೇಗೆ ಮಾತನಾಡುತ್ತೀರಾ ಎನ್ನುವುದು ಕೂಡ ರೊಮ್ಯಾನ್ಸ್ ಆಗಿರಬಹುದು. ಗುಲ್ಜರ್ ಸರ್ ಎಷ್ಟು ಚೆನ್ನಾಗಿ ರೊಮ್ಯಾನ್ಸ್ ಬಗ್ಗೆ ಬರೆಯುತ್ತಾರೆ. ಕಲೆ ಮಾನಸಿಕವಾಗಿ ನಿಮಗೆ ಇದನ್ನೆಲ್ಲಾ ಕೊಡುತ್ತದೆ. ಬರೀ ಸಂಭೋಗ ಮಾಡಿದಾಕ್ಷಣ ಎಲ್ಲಾ ದೈಹಿಕ ಬಯಕೆ ಈಡೇರಿಸಿಕೊಂಡಿದ್ದೀನಿ ಅಂತಲ್ಲ. ಒಳ್ಳೆ ಕಾದಂಬರಿ ಓದುವುದು, ಸಿನಿಮಾ ನೋಡುವುದು ಇದೆಲ್ಲವೂ ನಿಮ್ಮ ಮನಸ್ಸಿಗೆ ತೃಪ್ತಿ ನೀಡುವಂಥದ್ದು" ಎಂದು ಭಾವನಾ ವಿಶ್ಲೇಷಿಸಿದ್ದಾರೆ.

ಒಬ್ಬ ಪುರುಷನಿಗೆ ನಾಲ್ಕು ಗರ್ಲ್‌ಫ್ರೆಂಡ್ ಇರಬಹುದು, ಒಬ್ಬರನ್ನು ಮದುವೆಯಾಗಿ ಮತ್ತೊಬ್ಬರ ಜೊತೆ ರಿಲೇಷನ್‌ಶಿಪ್ ಇಟ್ಟುಕೊಳ್ಳಬಹುದು. ಅದನ್ನು ಯಾರು ಕೇಳಲ್ಲ. ಅದೇ ಹೆಣ್ಣು ಹಾಗೆ ಮಾಡಿದ್ರೆ ಒಪ್ಪುತ್ತೀವಾ ಎಂದು ನಟಿ ಭಾವನಾ ಪ್ರಶ್ನಿಸಿದ್ದಾರೆ. ಗಂಡಿಗೆ ಬಯಕೆ ಇರಬಹುದು, ಹೆಣ್ಣಿಗೆ ಇರಬಾರದು ಎನ್ನುವ ಮನೋಭಾವನೆ ಹೋಗಬೇಕು. ಪುರುಷರಂತೆ ಹೆಣ್ಣು ಕೂಡ ಉಪ್ಪು ಖಾರ ತಿನ್ನುತ್ತಾಳೆ. ಅವಳಲ್ಲಿ ಇನ್ನು ಹೆಚ್ಚು ಹಾರ್ಮೋನ್ ವೃದ್ಧಿ ಆಗುತ್ತದೆ. ಬೇಕಾದ ವಯಸ್ಸಲ್ಲಿ ಪುರುಷನಿಗಿಂತ ಆಕೆಗೆ ಹೆಚ್ಚು ಆ ಹಸಿವು ಇರುತ್ತದೆ. ಅದಕ್ಕೆ ಬಾಯ್ ಫ್ರೆಂಡ್ ಬೇಕು ಅಂತ ಹೋಗ್ತಾರೆ. ಅದನ್ನು ಯಾರ ಬಳಿ ಹೇಳಿಕೊಳ್ಳೋಕೆ ಆಗ್ತಿಲ್ಲ ಎಂದು ಭಾವನಾ ವಿವರಿಸಿದ್ದಾರೆ.

More from Filmibeat

Read more about: bhavana sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X