ಐವಿಎಫ್‌ನಿಂದ ನಟಿ ಭಾವನಾ ಗರ್ಭಿಣಿ; ಮದುವೆ ಆಗದೇ ಮಗು ಹೇಗೆ? ಖರ್ಚೆಷ್ಟು?

ಕನ್ನಡ ನಟಿ ಭಾವನಾ ರಾಮಣ್ಣ ದಿಢೀರನೆ ತಾವು ತಾಯಿಯಾಗುತ್ತಿರುವ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಮದುವೆ ಆಗದೇ ಆಕೆ ಗರ್ಭಿಣಿ ಆಗಿರುವುದು ಹೇಗೆ ಎಂದು ಕೆಲವರು ಅಚ್ಚರಿಗೊಂಡಿದ್ದಾರೆ. ಈ ಬಗ್ಗೆ ಸ್ವತಃ ಭಾವನಾ ತಾವು ಐವಿಎಫ್‌(IVF) ತಂತ್ರಜ್ಞಾನದಿಂದ ಮಗು ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸುದೀರ್ಘ ಪೋಸ್ಟ್ ಮಾಡಿದ್ದಾರೆ.

ಬಹಳ ವರ್ಷಗಳಿಂದ ಸಾಕಷ್ಟು ಜನ ಐವಿಎಫ್‌(IVF) ಚಿಕಿತ್ಸೆ ಮೂಲಕ ಮಕ್ಕಳನ್ನು ಪಡೆದಿದ್ದಾರೆ. ಪ್ರತಿವರ್ಷ ಜುಲೈ 25ರಂದು ಐವಿಎಫ್‌ ದಿನವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಮದುವೆಯಾಗಿ ವರ್ಷಗಳೇ ಕಳೆದರೂ ಸಂತಾನ ಭಾಗ್ಯ ಇಲ್ಲದ ದಂಪತಿ ಈ ಚಿಕಿತ್ಸೆಗೆ ಮುಂದಾಗುತ್ತಾರೆ. ಆ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಐವಿಎಫ್‌ನಿಂದ ಮಗು ಪಡೆಯುವ ಬಗ್ಗೆ ಕೆಲ ತಪ್ಪು ಕಲ್ಪನೆಗಳು ಇವೆ. ಆದರೆ ಒಂದಷ್ಟು ನಿಯಮಗಳನ್ನು ಅನುಸರಿಸಿ ಮಗು ಪಡೆಯಲು ಬಯಸುವವರು ಇದರ ಅನುಕೂಲ ಪಡೆದುಕೊಳ್ಳಬಹುದು.

Bhavana Ramanna Opts for IVF to Embrace Motherhood Without Marriage Breaks Stereotypes

ಸಹಜ ಪ್ರಕ್ರಿಯೆ ಮೂಲಕ ಗರ್ಭ ಧರಿಸಲು ಸಾಧ್ಯವಾಗದವರು ಇನ್‌ವಿಟ್ರೊ ಫರ್ಟಿಲೈಸೇಶನ್(IVF) ಚಿಕಿತ್ಸೆ ಪಡೆದು ಮಗುವನ್ನು ಪಡೆಯಬಹುದು. ದಂಪತಿಗಳು ಮಾತ್ರ ಮಕ್ಕಳಾಗದ ಸಮಯದಲ್ಲಿ ಈ ವಿಧಾನ ಅನುಸರಿಸುತ್ತಾರೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ ಮದುವೆಯಾಗದ ಒಂಟಿ ಮಹಿಳೆ ಕೂಡ ಈ ವಿಧಾನದ ಮೂಲಕ ಮಗು ಪಡೆಯುವ ಅವಕಾಶವಿದೆ. ಇತ್ತೀಚೆಗೆ ಇದು ಒಂದು ಟ್ರೆಂಡ್ ಆಗುತ್ತಿದೆ.

ಆಧುನಿಕ ಪ್ರಪಂಚದಲ್ಲಿ ಮದುವೆಯೆಂಬ ವ್ಯವಸ್ಥೆ ಬಗ್ಗೆ ಕೆಲವರು ನಂಬಿಕೆ ಕಳೆದುಕೊಂಡಿದ್ದಾರೆ. ಮದುವೆ ಅಂದರೆ ಕಮೀಟ್‌ಮೆಂಟ್, ಜವಾಬ್ದಾರಿ. ಅದೆಲ್ಲಾ ಬೇಡವೇ ಬೇಡ. ಒಂಟಿಯಾಗಿ ಇದ್ದರೆ ನೆಮ್ಮದಿಯಾಗಿ ಇರುತ್ತೇವೆ ಎಂದು ಕೆಲವರು ಭಾವಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮದುವೆ ಬೇಡ ಎನ್ನುವ ಯುವಕ, ಯುವತಿಯರು ಅದೇ ರೀತಿ ಮದುವೆ ಬಳಿಕ ಮಕ್ಕಳು ಬೇಡ ಎನ್ನುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ. ನಟಿ ಭಾವನಾ ಕೂಡ ತಮಗೆ ಮದುವೆ ಬೇಡ, ಆದರೆ ಮಕ್ಕಳು ಬೇಕು ಎಂದು ಬಹಳ ದಿನಗಳಿಂದ ಹೇಳುತ್ತಾ ಬರುತ್ತಿದ್ದರು. ಹೇಳಿದಂತೆಯೇ ಐವಿಎಫ್ ಸಹಾಯದಿಂದ ಈಗ ಅವಳಿ ಮಕ್ಕಳನ್ನು ಪಡೆಯಲು ಮುಂದಾಗಿದ್ದಾರೆ.

ಇನ್ನು ಸಂತಾನಹೀನತೆ ಮಾತ್ರವೇ ಮಕ್ಕಳಾಗದಿರಲು ಕಾರಣವಲ್ಲ. ಬೇರೆ ಬೇರೆ ಕಾರಣಗಳಿಂದಲೂ ದಂಪತಿ ಸಹಜವಾಗಿ ಮಕ್ಕಳು ಪಡೆಯಲು ಸಾಧ್ಯವಾಗದಿರಬಹುದು. ಆಗ ಐವಿಎಫ್ ಚಿಕಿತ್ಸೆ ಸಹಕಾರಿಯಾಗುತ್ತದೆ. ಮಹಿಳೆಯ ಗರ್ಭನಾಳ ಕಾರ್ಯ ನಿರ್ವಹಿಸಲು ವಿಫಲವಾದಾಗ, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಮ್ಮಿಯಾಗಿದ್ದಾಗ, ಮಹಿಳೆಯರಲ್ಲಿ ಅಂಡಾಣು ಸರಿಯಾಗಿ ಉತ್ಪತ್ತಿ ಆಗದ ಸಂದರ್ಭದಲ್ಲಿ ಐವಿಎಫ್ ಸಹಾಯದಿಂದ ದಂಪತಿ ಮಗು ಪಡೆಯಬಹುದು. ನಗರದಲ್ಲಿ ಈಗ ರಸ್ತೆ ರಸ್ತೆಗಳಲ್ಲಿ ಐವಿಎಫ್ ಚಿಕಿತ್ಸಾ ಕೇಂದ್ರಗಳಿವೆ. ಆದರೆ ಎಚ್ಚರಿಕೆಯಿಂದ ಒಳ್ಳೆ ಕಡೆಗಳಲ್ಲಿ ಚಿಕಿತ್ಸೆ ಪಡೆಯುವುದರಿಂದ ಮುಂದೆ ಸಮಸ್ಯೆ ಆಗುವುದನ್ನು ತಡೆಯಬಹುದು.

Bhavana Ramanna Opts for IVF to Embrace Motherhood Without Marriage Breaks Stereotypes

ಏನಿದು ಐವಿಎಫ್?

ಐವಿಎಫ್ ಅಂದರೆ ಪ್ರಯೋಗಾಲಯದಲ್ಲಿ ಅಂಡಾಣು ಮತ್ತು ವೀರ್ಯವನ್ನು ಸೇರಿಸಿ ಭ್ರೂಣವನ್ನು ಬೆಳೆಸಲಾಗುತ್ತದೆ. ಬಳಿಕ ಆ ಭ್ರೂಣವನ್ನು ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಮಹಿಳೆಯ ಅಂಡಾಶಯದಿಂದ ಮೊಟ್ಟೆಗಳನ್ನು ಹೊರ ತೆಗೆದು, ಪುರುಷನ ವೀರ್ಯವನ್ನು ಸೇರಿಸಲಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಪುರುಷ ಸಂಗಾತಿಯಿಂದ ವೀರ್ಯವನ್ನು ಸಂಗ್ರಹಿಸಲಾಗುತ್ತದೆ ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ದಾನಿ ವೀರ್ಯವನ್ನು ಕೃತಕ ಗರ್ಭಧಾರಣೆಗೆ ಬಳಸಲಾಗುತ್ತದೆ.

ಐವಿಎಫ್ ಚಿಕಿತ್ಸೆಗೆ ಕಾನೂನು

ಭಾರತದಲ್ಲಿ ಐವಿಎಫ್‌ಗೆ ಸಂಬಂಧಿಸಿದಂತೆ ಕೆಲ ಕಾನೂನುಗಳು ಮತ್ತು ಮಾರ್ಗಸೂಚಿಗಳಿವೆ. ಮುಖ್ಯವಾಗಿ, ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ನಿಯಂತ್ರಣ) ಕಾಯಿದೆ, 2021 (ART ಕಾಯಿದೆ) ಮತ್ತು ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ, 2021 ಗಳು IVF ಚಿಕಿತ್ಸೆಯನ್ನು ನಿಯಂತ್ರಿಸುತ್ತವೆ. IVF ಚಿಕಿತ್ಸೆಯ ನೈತಿಕ ಮತ್ತು ಸುರಕ್ಷಿತ ಅಭ್ಯಾಸಗಳನ್ನು ಖಚಿತಪಡಿಸಿಕೊಳ್ಳಲು ಈ ಕಾಯಿದೆಗಳು ಮಾಡಲಾಗಿದೆ. ಇದು ಚಿಕಿತ್ಸೆಯ ಸಮಯದಲ್ಲಿ ಕೆಲವು ವಯಸ್ಸಿನ ಮಿತಿಗಳು ಹಾಗೂ ಇತರ ನಿಯಮಗಳನ್ನು ಹೊಂದಿವೆ.

ಐವಿಎಫ್ ಚಿಕಿತ್ಸೆ ವೆಚ್ಚ

ಸಾಕಷ್ಟು ದಂಪತಿಗಳು ಮಗು ಮಾಡಿಕೊಳ್ಳಲು ಅಂತಿಮವಾಗಿ ಐವಿಎಫ್ ಚಿಕಿತ್ಸೆ ಮೊರೆ ಹೋಗುತ್ತಾರೆ. ಕೆಲವರು ಇದು ದುಬಾರಿ ಚಿಕಿತ್ಸೆ ಎಂದೇ ಭಾವಿಸಿದ್ದಾರೆ. ಆದರೆ ನಗರಗಳಲ್ಲಿ ಆಯಾ ಐವಿಎಫ್ ಕೇಂದ್ರಗಳಿಗೆ ತಕ್ಕಂತೆ ವೆಚ್ಚದಲ್ಲಿ ಬದಲಾವಣೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷ ಲಕ್ಷ ಖರ್ಚಾಗುತ್ತದೆ. ಹಾಗಾಗಿ ಬಡವರು ಈ ಚಿಕಿತ್ಸೆಯನ್ನು ಪಡೆಯುವುದು ಕಷ್ಟ ಎಂದುಕೊಂಡಿರುತ್ತಾರೆ. ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೂಡ ಇದನ್ನು ಪರಿಚಯಿಸಲಾಗುತ್ತಿದೆ.

ವೈದ್ಯರು ಏನಂತಾರೆ?

ಖ್ಯಾತ ಪ್ರಸೂತಿ ತಜ್ಞೆ ಹಾಗೂ ಸ್ತ್ರೀ ರೋಗ ತಜ್ಞೆ ಡಾ. ಕಾಮಿನಿ ರಾವ್ ಐವಿಎಫ್ ಚಿಕಿತ್ಸೆ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ. "ಮದುವೆ ಆಗದೇ ಇರುವ ಮಹಿಳೆಯರು ಕೂಡ ಐವಿಎಫ್ ಚಿಕಿತ್ಸೆ ಮೂಲಕ ಮಕ್ಕಳನ್ನು ಪಡೆಯಲು ಅವಕಾಶ ಇದೆ. ಸಾಕಷ್ಟು ಜನ ಇದೇ ರೀತಿ ಕೇಳಿಕೊಂಡು ನಮ್ಮ ಬಳಿ ಬರ್ತಾರೆ. ಮದುವೆ ಆಗದವರು ಬರ್ತಾನೆ, ಕಾನೂನಾತ್ಮಕವಾಗಿ ಕೂಡ ಇದಕ್ಕೆ ಅವಕಾಶವಿದೆ" ಎಂದು ಹೇಳುತ್ತಾರೆ.

ಸಾಕಷ್ಟು ಜನರಿಗೆ ಐವಿಎಫ್ ಚಿಕಿತ್ಸೆ ಬಗ್ಗೆ ಗೊತ್ತಿದೆ. ಮಾಧ್ಯಮಗಳ ಮೂಲಕ ಮತ್ತಷ್ಟು ಜನರಿಗೆ ಈ ಚಿಕಿತ್ಸೆಯ ಮಾಹಿತಿ ತಲುಪಬೇಕು. ಆಗ ಇನ್ನಷ್ಟು ಜನರು ಇದರ ಅನುಕೂಲ ಪಡೆಯುತ್ತಾರೆ. ಸರೋಗಸಿ ಬೇರೆ, ಐವಿಎಫ್‌ಗೂ ಬಹಳ ವ್ಯತ್ಯಾಸವಿದೆ. "ಸರೋಗಸಿ ವಿಧಾನಕ್ಕೆ ಬೇರೊಬ್ಬ ಮಹಿಳೆಯ ಗರ್ಭವನ್ನು ಬಳಸಿಕೊಳ್ಳಲಾಗುತ್ತದೆ. ಹಾಗಾಗಿ ಅದಕ್ಕೆ ಅಷ್ಟು ಸುಲಭವಾಗಿ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಐವಿಎಫ್ ವಿಧಾನದಲ್ಲೇ ಅದೇ ಮಹಿಳೆ ಗರ್ಭ ಧರಿಸುತ್ತಾರೆ. ಹಾಗಾಗಿ ಯಾವುದೇ ನಿಯಮಗಳು ಅಷ್ಟೇನು ಕಟ್ಟುನಿಟ್ಟಾಗಿ ಇಲ್ಲ" ಎಂದು ಡಾ. ಕಾಮಿನಿ ರಾವ್ ತಿಳಿಸಿದ್ದಾರೆ.

ಸಹಜ ಪ್ರಕ್ರಿಯೆಯಿಂದ ಗರ್ಭ ಧರಿಸಲು ಸಾಧ್ಯವಾಗದ ಎಲ್ಲರಿಗೂ ಐವಿಎಫ್ ಚಿಕಿತ್ಸೆ ಬೇಕು ಅಂತೇನಿಲ್ಲ. ಐಯುಐ(IUI) ಎಂದರೆ ಇಂಟ್ರಾಯುಟೆರಿನ್ ಇನ್ಸೆಮಿನೇಷನ್ (Intrauterine Insemination) ವಿಧಾನದ ಮೂಲಕ ಕೂಡ ಮಹಿಳೆ ಗರ್ಭ ಧರಿಸಿ ಮಗುವನ್ನು ಪಡೆಯಬಹುದು. ಈ ವಿಧಾನದಲ್ಲಿ ವೀರ್ಯವನ್ನು ಲ್ಯಾಬ್‌ನಲ್ಲಿ ಸಂಸ್ಕರಿಸಿ, ಟ್ಯೂಬ್ ಮೂಲಕ ಮಹಿಳೆಯ ಗರ್ಭಾಶಯಕ್ಕೆ ಸೇರಿಸಲಾಗುತ್ತದೆ. ಇದು ಐವಿಎಫ್‌ಗಿಂತ ಕಡಿಮೆ ವೆಚ್ಚದಾಯಕ. "ಕೆಳ ಮಧ್ಯಮ ವರ್ಗದವರು ಕೂಡ ಈ ಚಿಕಿತ್ಸೆಯ ಲಾಭ ಪಡೆಯಬಹುದು. ಅದಕ್ಕೆ ಲಕ್ಷ ಲಕ್ಷ ವೆಚ್ಚ ತಗುಲುತ್ತದೆ ಎನ್ನುವುದು ಸುಳ್ಳು. 20-30 ಸಾವಿರ ವೆಚ್ಚದಲ್ಲಿ ಕೂಡ ಸಾಧ್ಯ" ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಶೇ. 2%ರಷ್ಟು ಜನ ಐವಿಎಫ್ ಚಿಕಿತ್ಸೆ ಮೂಲಕ ಮಕ್ಕಳನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ. ಒಟ್ಟಾರೆ ನಟಿ ಭಾವನಾ ರಾಮಣ್ಣ ಹೀಗೆ ಐವಿಎಫ್ ಚಿಕಿತ್ಸೆ ಮೂಲಕ ಮಗು ಪಡೆಯಲು ಮುಂದಾಗಿರುವುದು ಸಾಕಷ್ಟು ಜನರಿಗೆ ಪ್ರೇರಣೆಯಾಗುವ ಸಾಧ್ಯತೆಯಿದೆ. ಇನ್ನು ಭಾವನಾ ಅವರು ಗರ್ಭಿಣಿ ಆಗಿರುವ ವಿಚಾರ ತಿಳಿಸಿ ಕೆಲ ತಾರೆಯರು ಕೂಡ ಅಭಿನಂದನೆ ತಿಳಿಸಿದ್ದಾರೆ.

ವಯಸ್ಸು 40 ದಾಟಿದರೂ ನಟಿ ಭಾವನಾ ರಾಮಣ್ಣ ಮದುವೆ ಯಾಕೆ ಆಗಿಲ್ಲ ಎನ್ನುವ ಪ್ರಶ್ನೆ ಕೇಳುತ್ತಿದ್ದರು. ನಾನು ಕೊಂಚ ಮುಂಗೋಪಿ. ನನ್ನ ಕೈಹಿಡಿಯುವವರ ಜೊತೆ ಹೊಂದಾಣಿಕೆ ಕಷ್ಟವಾಗಬಹುದು. ಹಾಗಾಗಿಯೇ ನನಗೆ ಮದುವೆ ಬೇಡ ಎನಿಸುತ್ತದೆ. ಆದರೆ ಮಗು ಬೇಕು ಎಂದಿದ್ದರು. ಇತ್ತೀಚೆಗೆ ತಾಯಿ ಆಗಬೇಕು ಎನ್ನುವ ಹಂಬಲ ನನ್ನ ಕಾಡುತ್ತಲೇ ಇತ್ತು. ಅದಕ್ಕಾಗಿ ಐವಿಎಫ್ ಮೂಲಕ ಗರ್ಭ ಧರಿಸಿದ್ದೇನೆ ಎಂದು ಭಾವನಾ ಬರೆದುಕೊಂಡಿದ್ದಾರೆ.

More from Filmibeat

English summary
Actress Bhavana Ramanna announces her pregnancy through IVF treatment, choosing motherhood without marriage.
Read more about: bhavana sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X