ಕು ಕು ಮೈನಾ, ಕಿಚಿ ಪಿಚಿ ಗುಬ್ಬಚ್ಚಿ, ಮಡಿಲು ಸೇರಿದ ಮಗಳ ಕುರಿತು ಚಂದ್ರಮುಖಿ ಪ್ರಾಣಸಖಿ 'ಭಾವನಾ'ತ್ಮಕ ಮಾತು
ಮದುವೆ ಮತ್ತು ತಾಯ್ತನದ ಸುಖ ಹೆಣ್ಣಿನ ಬದುಕಿನ ಬಹುದೊಡ್ಡ ಹಂತ ಎನ್ನುವುದು ಹಿಂದೆ ನಂಬಲಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಬಾಡಿಗೆ ತಾಯ್ತನದ ಮೂಲಕ ಅನೇಕರು ಮಕ್ಕಳನ್ನು ಪಡೆಯುತ್ತಿದ್ದಾರೆ. ಮತ್ತೂ ಕೆಲವರು ಐವಿಎಫ್ ತಂತ್ರಜ್ಞಾನದ ಸಹಾಯದಿಂದ ಗರ್ಭಿಣಿಯಾಗುತ್ತಿದ್ದಾರೆ. ಮಗುವನ್ನು ಪಡೆಯುತ್ತಿದ್ದಾರೆ. ಮದುವೆಯಾಗದೆಯೇ ತಾಯಿಯಾಗಿ ಸಂಭ್ರಮಿಸುತ್ತಿದ್ಧಾರೆ. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದು ಅನೇಕರು ತಂದೆಯ ಜವಾಬ್ಧಾರಿಗಳನ್ನು ಕೂಡ ನಿರ್ವಹಿಸುತ್ತಿದ್ದಾರೆ.
ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ಹೀಗೆ ಐವಿಎಫ್ ಮೂಲಕ ತಾಯಿಯಾದ ಹಲವರು ಇದ್ದಾರೆ. ಉದಾಹರಣೆಗೆ ಫರಾ ಖಾನ್.. ಶಿಲ್ಪಾ ಶೆಟ್ಟಿ.. ಮೋನಾ ಸಿಂಗ್. ಇಷ್ಟೇ ಯಾಕೆ.. ನಮ್ಮ ಕನ್ನಡದ ''ಚಂದ್ರಮುಖಿ.. ಪ್ರಾಣಸಖಿ '' ಭಾವನಾ ಕೂಡ ಇತ್ತೀಚೆಗೆ ತಮ್ಮ 41ನೇ ಹರೆಯದಲ್ಲಿ ತಾಯಿಯಾಗಿದ್ದು ಕೂಡ ಇದೇ ಐವಿಎಫ್ ಮೂಲಕವೇ.
'

ಇಂಥಾ ಭಾವನಾ ಸದ್ಯ ಮನೆಯಲ್ಲಿ ತಮ್ಮ ಮಗಳು ರುಕ್ಮಿಣಿಯ ಜೊತೆ ಕಾಲ ಕಳೆಯುತ್ತಿದ್ದಾರೆ. ಮತ್ತೊಂದು ಮಗು ಅಗಲಿದ ನೋವು ಮನದಲ್ಲಿದ್ದರೂ ಕೂಡ ಈ ಭೂಮಿಗೆ ಬಂದ ಇನ್ನೊಂದು ಮಗುವಿನ ನಗುವಿನಲ್ಲಿ ತಮ್ಮ ನೋವು ಪ್ರಯತ್ನ ಮಾಡುತ್ತಿದ್ದಾರೆ. ಮಗು ತಮ್ಮ ಮನೆಗೆ ಬಂದ ನಂತರ ತಮ್ಮ ಬದುಕಿನಲ್ಲಿ ಆದ ಬದಲಾವಣೆಗಳನ್ನು ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ಧಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಭಾವನಾ, ''ದೊಡ್ಡ ಮನೆ, ಪುಟ್ಟ ಕುಟುಂಬ.. ನಾನು ಮತ್ತು ನನ್ನ ತಂದೆ, ಬೆಳಗ್ಗೆ ಎದ್ದು ಮನೆಯಂಗಳದಲ್ಲಿ ಕಾಫಿ ಹೀರುತ್ತಾ ಕೂತರೆ, ಇಲ್ಲಿ ಹಕ್ಕಿಗಳದ್ದೇ ನಾದ ನಿನಾದ.. ಕು ಕು ಮೈನಾ, ಕಿಚಿ ಪಿಚಿ ಗುಬ್ಬಚ್ಚಿ, ನಿತ್ಯವೂ ಬರೀ ಹಕ್ಕಿಗಳದ್ದೇ ಕಲರವ''..ಎಂದು ಹೇಳಿದ್ದಾರೆ. ''ಹಕ್ಕಿ ಪಿಕ್ಕಿಗಳ ಹಾಡು ಪಾಡು ಕೇಳುತ್ತಿದ್ದ ಮನೆಯಲ್ಲೀಗ, ಹೊಸದೊಂದು ಪುಟ್ಟ ಹಕ್ಕಿಯ ಸರಿಗಮ.. ಮನೆಯ ಗೂಡಲ್ಲಿ ಚುಯ್ ಚುಯ್ ಸದ್ದು ಮಾಡುತ್ತಿರುವ ಈ ಪುಟ್ಟ ಹಕ್ಕಿಗೆ ಏನೆಂದು ಹೆಸರಿಡುವುದು..? ನಮ್ಮನ್ನು ನಯವಾಗಿ ಬಂಧಿಸಿದ ಸುಂದರ ಬಲೆ, ಇದು ಹೊಸ ಪ್ರೀತಿಯ ಅಲೆ.. ವಿನೂತನ ವಿಸ್ಮಯ''. ಎಂದು ಬರೆದುಕೊಂಡಿದ್ದಾರೆ.
ಮುಂದುವರೆದು ಈಗ ನಮ್ಮ ಗೂಡಿಗೆ ಬಂದ ಹೊಸ ಪುಟ್ಟ ಹಕ್ಕಿಯ ಚುಯ್ ಚುಯ್ ನಾದ
ಹಕ್ಕಿಗಳ ಹಾಡಿಗೆ ಹೊಸ ಸರಿಗಮ ಸೇರಿಸಿದ ಈ ಪುಟ್ಟ ಜೀವ, ನಮ್ಮ ಬದುಕಿಗೆ ಹೊಸ ಪ್ರೀತಿಯ ಅಲೆ ತಂದುಕೊಟ್ಟಿದೆ. ಈ ವಿನೂತನ ವಿಸ್ಮಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಕೂಡ ಭಾವನಾ ರಾಮಣ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಈ ಮೂಲಕ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಇನ್ನುಳಿದಂತೆ ಕೆಲ ದಿನಗಳ ಹಿಂದೆ ಆಸ್ಪತ್ರೆಯಿಂದ ಮನೆಗೆ ತಮ್ಮ ಮಗಳು ರುಕ್ಮಿಣಿ ಜೊತೆ ಮರಳಿದ್ದ ಭಾವನಾ, 'ಟೈಮ್ಸ್ ಆಫ್ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು. ಅವಳಿ ಮಕ್ಕಳಲ್ಲಿ ಒಂದು ಮಗು ಕಳೆದುಕೊಂಡ ನೋವನ್ನು ಹಂಚಿಕೊಂಡಿದ್ದರು. ಈ ಕುರಿತು ಮಾತನಾಡಿದ್ದ ಭಾವನಾ, ನಾನು ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದೆ. ಆದರೆ.. ದುರಾದೃಷ್ಟವಶಾತ್ ಒಂದು ಮಗು ಬದುಕುಳಿಯಲಿಲ್ಲ. ಇನ್ನೂ ಆ ನೋವನ್ನು ಮರೆಯಲು ಸಾಧ್ಯ ಇಲ್ಲ.. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವುದನ್ನು ನಾನು ಕಲಿಯುತ್ತಿದ್ದೇನೆ ಎಂದು ಹೇಳಿದ್ದರು.
ಈ ಸಂದರ್ಶನದಲ್ಲಿ ಒಂದು ಮಗುವನ್ನ ಕಳೆದುಕೊಂಡಿದ್ದಕ್ಕೆ ಅಳಬೇಕಾ.. ಇನ್ನೊಂದು ಮಗು ಆರೋಗ್ಯವಾಗಿ ಜನಿಸಿದ್ದಕ್ಕೆ ಖುಷಿ ಪಡಬೇಕಾ.. ಎನ್ನುವುದೇ ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದ ಭಾವನಾ ಮಡಿಲು ಸೇರದ ಇನ್ನೊಂದು ಮಗುವನ್ನು ನೆನೆದು ಭಾವುಕರಾಗಿದ್ದರು.


Click it and Unblock the Notifications











