»   » ‘ಭಾವನೆ’ಗಳಿಗೆ ಬರ ವಸ್ತ್ರ ಕ್ಷಾಮ!

‘ಭಾವನೆ’ಗಳಿಗೆ ಬರ ವಸ್ತ್ರ ಕ್ಷಾಮ!

Subscribe to Filmibeat Kannada

ಕಳೆದ ವಾರ ಬಿಡುಗಡೆಯಾದ ರಾಷ್ಟ್ರಗೀತೆ ನೋಡಿದವರೆಲ್ಲಾ ಸುಸ್ತಾದರು. ಪಡ್ಡೆ ಹುಡುಗರಂತೂ ಹುಚ್ಚೆದ್ದು ಕುಣಿದರು. ಇಷ್ಟು ದಿನ ತಮ್ಮ ಭಾವಾಭಿನಯದಿಂದ ಕನ್ನಡ ಚಿತ್ರರಸಿಕರ ಮನಗೆದ್ದಿದ್ದ ಭಾವನಾ ಏಕಾ ಏಕಿ ಬಿಚ್ಚಮ್ಮ ಆಗಿದ್ದರು. ಒಂದೇ ವಾರದಲ್ಲಿ ಡೇರ್‌ ಡೆವಿಲ್‌ ನಟಿ ಎಂಬ ಹಣೆಪಟ್ಟಿ ಕಟ್ಟಿಕೊಂಡರು.

ಚಂದ್ರಮುಖಿ, ಪ್ರಾಣಸಖಿ ಚಿತ್ರದಲ್ಲಿ ಭಾವಾಭಿನಯದ ಮೂಲಕ ತನ್ನ ನಟನಾ ಕೌಶಲ ತೆರೆದಿಟ್ಟಿದ್ದ ಈ ಹುಡುಗಿ ಇತ್ತೀಚಿನ ಲಂಕೇಶ ಚಿತ್ರದ ಮತ್ತೊಬ್ಬಳು ನಾಯಕಿ ಶೀತಲ್‌ ಬೇಡಿ, ಹಾಗೂ ರಾಷ್ಟ್ರಗೀತೆಯ ಸ್ವರ್ಣರೊಂದಿಗೆ ಸ್ಪರ್ಧೆಗೆ ನಿಂತಂತೆ ಕಾಣುತ್ತದೆ. ಈ ಸ್ಪರ್ಧೆಯಲ್ಲಿ ಭಾವನೆಗಳ ಬದಲು ಮೈ ತೆರೆದಿಡುವಂತಹ ಸ್ಥಿತಿ ಈಕೆಗೇಕೆ ಬಂತು? ರಾಷ್ಟ್ರಗೀತೆಯಲ್ಲಿ ರೌಡಿಯ ಪಾತ್ರದಲ್ಲಿ ಬೋಲ್ಡ್‌ ಆಗಿ ಅಭಿನಯಿಸಿರುವ ಭಾವನ, ಹಾಡುಗಳ ಸನ್ನಿವೇಶದಲ್ಲಿ ತನ್ನೆಲ್ಲಾ ಭಾವನೆಗಳನ್ನೂ ಅದುಮಿಟ್ಟು ಕಾಮಸೂತ್ರದ ಭಂಗಿಗಳಲ್ಲಿ ಮಿಂಚಿದ್ದಾರೆ. ಅದೇಕೋ ಭಾವನಾ ಇತ್ತೀಚೆಗೆ ನಟಿಸಿರುವ ಎಲ್ಲ ಚಿತ್ರಗಳೂ ಮಲ್ಟಿ ಹೀರೋಯಿನ್‌ ಫಿಲಂಗಳೇ. ಮುಂದೆ ತೆರೆಕಾಣಲಿರುವ ಕುರಿಗಳು ಸಾರ್‌ ಕುರಿಗಳು, ಎಲ್ಲರ ಮನೆ ದೋಸೇನೂ... ಚಿತ್ರಗಳಲ್ಲೂ ಮೂರ್ನಾಲ್ಕು ನಾಯಕಿಯರು.

ಭಾವನಾ ಪ್ರತಿಜ್ಞೆ : ಹೀಗಾಗಿ ಭಾವನಾ ಈಗ ಮೂರು ಬೋಲ್ಡ್‌ ನಿರ್ಧಾರ ಕೈಗೊಂಡಿದ್ದಾರಂತೆ.

  1. ಇನ್ನು ಮುಂದೆ ಮೂರ್ನಾಲ್ಕು ನಾಯಕಿಯರ ಚಿತ್ರದಲ್ಲಿ ನಟಿಸುವುದಿಲ್ಲ.
  2. ತೆಲುಗಿನಲ್ಲಿ ಬರುತ್ತಿರುವ ಅವಕಾಶ ಒಪ್ಪಿಕೊಳ್ಳುವುದು.
  3. ಇನ್ನು ಮುಂದೆ ಆಯ್ದ ಚಿತ್ರಗಳಲ್ಲಿ ಮಾತ್ರ ನಟಿಸುವುದು.
ಇದು ಸಾಧ್ಯವಾದಲ್ಲಿ, ಭಾವನಳಿಗೆ ಚೇತನ ಬಂದರೂ ಬರಬಹುದು. ಚಂದ್ರಮುಖಿ ಪ್ರಾಣಸಖಿ ಚಿತ್ರದಲ್ಲಿ ತೆಳ್ಳಗೆ ಇದ್ದ, ಭಾವನಾ ಈಗ ಮೈಕೈ ತುಂಬಿಕೊಂಡಿದ್ದಾರೆ. ದಷ್ಟ ಪುಷ್ಟವಾದ ತಮ್ಮ ಅಂಗ ಸೌಷ್ಟವವನ್ನು ಬೇವಾಚ್‌, ಬೋಲ್ಡ್‌ ಅಂಡ್‌ ಬ್ಯೂಟಿಫುಲ್‌ ಧಾರಾವಾಹಿಗಳ ಸರಣಿಯಲ್ಲಿ ಹರಿಬಿಟ್ಟು ಬೋಲ್ಡ್‌ ಗರ್ಲ್‌ ಎಂಬ ಖ್ಯಾತಿಗೂ ಪಾತ್ರವಾಗಿದ್ದಾರೆ.

ಬೋಲ್ಡ್‌ ಆಗಿರುವ ಈ ಹುಡಿಗಿಗೆ ಕ್ಲೀನ್‌ ಬೋಲ್ಡ್‌ ಆಗಿರುವ ತೆಲುಗು ಚಿತ್ರದ ನಿರ್ಮಾಪಕರು ಈಗ ಭಾವನಾ ಹಿಂದೆ ಬಿದ್ದಿದ್ದಾರೆ. ಈ ಮಧ್ಯೆ ಭಾವನಾ ಮಾಡಲಿಂಗ್‌ನಲ್ಲೂ ಮಗ್ನಾರಾಗಿದ್ದಾರೆ. ಕನ್ನಡ ಚಿತ್ರಗಳಲ್ಲಿ ಭಾವನಾಗೆ ಅವಕಾಶಗಳಿಗೆ ಆದರೆ, ಇಂಡಿಪೆಂಡೆಂಟ್‌ ಹೀರೋಯಿನ್‌ ಆಗಿ ತಮ್ಮ ಪ್ರತಿಭೆ ಪ್ರದರ್ಶಿಸುವಂತ ಅವಕಾಶಗಳು ಇಲ್ಲ. ಹೀಗಾಗಿ ಮಾಡಲಿಂಗ್‌ಗೆ ಈಕೆ ಶರಣಾಗಿದ್ದಾರಂತೆ. ಈ ಕಾರಣಕ್ಕಾಗೇ ತೆಲುಗು ಚಿತ್ರರಂಗ ಪ್ರವೇಶಿಸುವ ಇರಾದೆಯನ್ನೂ ವ್ಯಕ್ತಪಡಿಸಿದ್ದಾರೆ.

ಮೊನ್ನೆ ಚಲನಚಿತ್ರ ಪತ್ರಕರ್ತರೊಂದಿಗೆ ಉಭಯಕುಶಲೋಪರಿಯಲ್ಲಿ ತೊಡಗಿದ್ದ ಭಾವನಾ ಕೊನೆಯದಾಗಿ ಹೇಳಿದ್ದು, ರಾಷ್ಟ್ರಗೀತೆ ಚಿತ್ರವನ್ನು ನಾನಿನ್ನೂ ನೋಡಿಲ್ಲ. ನೀವೆಲ್ಲಾ ಹೇಳಿದಂತೆ ಆ ಪಾತ್ರ ಇದ್ದರೆ, ಪ್ರೇಕ್ಷಕರು ನನನ್ನು ಹಾಗೆ ನೋಡಲು ನಿರಾಕರಿಸಿದರೆ, ಪ್ರಾಮಿಸ್‌ ಇನ್ನು ಮುಂದೆ ಅಂತಹ ಪಾತ್ರ ಮಾಡೋಲ್ಲ.....

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada