ಸಿನಿಮಾ ನಿರ್ದೇಶಕನನ್ನು ಅಪಹರಿಸಿ ಹಲ್ಲೆ; 'ಭೀಮ' ಚಿತ್ರ ನಟಿ ಸೇರಿ 11 ಮಂದಿ ಬಂಧನ

ಬೆಂಗಳೂರಿನಲ್ಲಿ ಚಿತ್ರ ನಿರ್ದೇಶಕನನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿ ಹಣ ದೋಚಿದ್ದ ಪ್ರಕರಣದಲ್ಲಿ 'ಭೀಮ' ಚಿತ್ರ ನಟಿ ಸೇರಿ 11 ಮಂದಿ ಬಂಧನವಾಗಿದೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ್ದ 'ಭೀಮ' ಚಿತ್ರದ ಸಣ್ಣ ಪಾತ್ರದಲ್ಲಿ ಮಿಂಚಿದ್ದ ಐಶ್ವರ್ಯಾ ಪ್ರಕರಣದ ಪ್ರಮುಖ ಆರೋಪಿ ಆಗಿದ್ದಾರೆ. ಆಡುಗೋಡಿ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

'ಭರವಸೆಯ ಜೀವನ' ಎಂಬ ಶಾರ್ಟ್ ಮೂವಿ ಮಾಡಿದ್ದ ಅನೀಶ್ ಬಳಿಕ 'ಜೀವನದ ಭಾಷೆ' ಎಂಬ ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಕಾರಣಾಂತರಗಳಿಂದು ಮುಂಬೈಗೆ ಅನೀಶ್ ಶಿಫ್ಟ್ ಆಗಿದ್ದರು. ಆದರೆ ತಮ್ಮ ಕಾರು ಮಾರಾಟ ಮಾಡಲು ಮುಂದಾಗಿದ್ದರು. ಈ ವಿಚಾರವನ್ನು 'ಭೀಮ' ಚಿತ್ರದ ನಟಿ ಐಶ್ವರ್ಯಾಗೆ ತಿಳಿಸಿದ್ದರು. ಈ ವಿಚಾರವನ್ನು ಐಶ್ವರ್ಯಾ ಮೂಲಕ ಆರೋಪಿಗಳು ತಿಳಿದುಕೊಂಡಿದ್ದರು. ಕಾರು ಖರೀದಿಸುವುದಾಗಿ ಆಕೆಯ ಮೂಲಕವೇ ಅನೀಶ್ ಅವರನ್ನು ನಂಬಿಸಿ ಬೆಂಗಳೂರಿಗೆ ಕರೆಸಿದ್ದರು.

Bheema Actress Aishwarya Among 11 Arrested for Kidnapping Assault and Extortion of Director

ಅನೀಶ್ ಕಿಡ್ನ್ಯಾಪ್ ಪ್ಲ್ಯಾನ್ ಮಾಡಿದ್ದ ಗ್ಯಾಂಗ್ ಐಶ್ವರ್ಯಾ ಮೂಲಕ ಕರೆ ಮಾಡಿಸಿ ಆಡುಗೋಡಿ ವ್ಯಾಪ್ತಿಯ ಜಾಗವೊಂದಕ್ಕೆ ಕರೆಸಿಕೊಂಡಿದ್ದರು. ಅಲ್ಲಿಂದ ನಿರ್ದೇಶಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಬ್ಯಾರಹಳ್ಳಿ ಬಳಿಯ ಮನೆಯೊಂದರಲ್ಲಿ ಕೂಡಿ ಹಾಕಿದ್ದರು. ಕ್ರಿಕೆಟ್ ಸ್ಟಂಪ್, ಹಾಕಿ ಸ್ಟಿಕ್‌ನಿಂದ ಅನೀಶ್‌ಗೆ ಥಳಿಸಿದ್ದರು. ಆಶೀರ್ವಾದ್ ಎಂಬಾತನೇ ಈ ಕಿಡ್ನ್ಯಾಪ್, ದರೋಡೆ ಘಟನೆಯ ಮಾಸ್ಟರ್ ಮೈಂಡ್ ಎನ್ನುವುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.

ಅನೀಶ್‌ಗೆ ಹಲ್ಲೆ ಮಾಡಿದ್ದ ಗ್ಯಾಂಗ್ ಆತನ ಬಳಿಯಿದ್ದ ಹಣ, ಚಿನ್ನಾಭರಣ ದೋಚಿ ಬಳಿಕ ಮಧುಗಿರಿ ಬಳಿ ಇಳಿಸಿ ಹೊರಟು ಹೋಗಿದ್ದರು. ಅನೀಶ್ ನೀಡಿದ ದೂರು ಆಧರಿಸಿ ಆಡುಗೋಡಿ ಠಾಣೆ ಪೊಲೀಸರು 11 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಅನೀಶ್ ಜೊತೆ ಕೆಲ ಆರೋಪಿಗಳಿಗೆ ಮೊದಲೇ ಪರಿಚಯ ಇತ್ತು. 5 ಲಕ್ಷ ಹಣದ ವಿಚಾರಕ್ಕೆ ಅನೀಶ್ ಜೊತೆ ಕಿರಿಕ್ ಆಗಿತ್ತು. ಹಾಗಾಗಿ ಪ್ಲ್ಯಾನ್ ಮಾಡಿ ಕಿಡ್ನ್ಯಾಪ್ ಮಾಡಿ ದರೋಡೆ ಮಾಡಿರುವುದಾಗಿ ಹೇಳಲಾಗ್ತಿದೆ.

More from Filmibeat

English summary
Aadugodi police in Bengaluru arrest 11 people, including actress Aishwarya from Duniya Vijay’s film Bheema, in connection with the kidnapping, assault and robbery of director Anish over a Rs 5 lakh dispute.
Read more about: vijay case sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X