Bheema Day 1 collection; 'ಭೀಮ' ಮೊದಲ ದಿನ ಗಳಿಸಿದ್ದೆಷ್ಟು? 2ನೇ ದಿನ ಏನಾಯ್ತು?
ಕನ್ನಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲ್ಲ ಎನ್ನುವ ಆರೋಪವನ್ನು 'ಭೀಮ' ಸುಳ್ಳಾಗಿಸಿದ್ದಾನೆ. ದೊಡ್ಡ ಸಿನಿಮಾಗಳು ಬಂದರೆ ಕಂಡಿತ ಪ್ರೇಕ್ಷಕರು ಮುಗಿಬೀಳುತ್ತಾರೆ. ಅದು ಈ ಸಿನಿಮಾ ವಿಚಾರದಲ್ಲಿ ನಿಜವಾಗಿದೆ. ಹಾಗಾಗಿ ಆಗಾಗ್ಗೆ ಸ್ಟಾರ್‌ಗಳ ಸಿನಿಮಾಗಳು ಬರಬೇಕಿದೆ. ಈ ವಾರ ತೆರೆಕಂಡ 'ಭೀಮ' ಚಿತ್ರಕ್ಕೆ ಮೊದಲ ದಿನ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.
ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ಸಿನಿಮಾ 'ಭೀಮ' ಸಿನಿಮಾ ರಾಜ್ಯಾದ್ಯಂತ ಮೊದಲ ದಿನ ಭರ್ಜರಿ ಪ್ರದರ್ಶನ ಕಂಡಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಮಾಸ್ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದ್ದು ಈ ವರ್ಷದ ಮೊದಲ ದೊಡ್ಡ ಹಿಟ್ ಸಿನಿಮಾ ಆಗುತ್ತದೆ ಎನ್ನುವ ನಿರೀಕ್ಷೆಯಿದೆ. 'ಸಲಗ' ಸಿನಿಮಾ ಮಾಡಿ ಗೆದ್ದಿದ್ದ ವಿಜಯ್ 2ನೇ ಬಾರಿಯೂ ಗೆಲುವು ನಿರೀಕ್ಷೆ ಹುಟ್ಟಾಕ್ಕಿದ್ದಾರೆ.

ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣದ 'ಭೀಮ' ಚಿತ್ರದಲ್ಲಿ ಅನುಭವಿ ಕಲಾವಿದರ ಜೊತೆ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದೆ. ಮಾಸ್ತಿ ಸಂಭಾಷಣೆ, ಚರಣ್ ರಾಜ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ಒಂದಷ್ಟು ತಪ್ಪುಗಳ ನಡುವೆಯೂ ಮಾಸ್ ಪ್ರೇಕ್ಷಕರನ್ನು ಸಿನಿಮಾ ರಂಜಿಸ್ತಿದೆ. ಮತ್ತೆ ಚಿತ್ರಮಂದಿರಗಳಲ್ಲಿ ಶಿಳ್ಳೆ ಚಪ್ಪಾಳೆ ಸದ್ದು ಕೇಳುವಂತಾಗಿದೆ.
ಡ್ರಗ್ಸ್ ಮುಕ್ತ ಸಮಾಜದ ಸಂದೇಶ 'ಭೀಮ' ಚಿತ್ರದಲ್ಲಿದೆ. ನಗರದಲ್ಲಿ ಗಾಂಜಾ, ಡ್ರಗ್ಸ್ ಯಾವ ಮಟ್ಟದಲ್ಲಿ ಸರಬರಾಜು ಆಗುತ್ತಿದೆ, ಯುವ ಜನತೆ ನಶೆಯಲ್ಲಿ ಮುಳುಗಿ ಏನೆಲ್ಲಾ ಸಮಸ್ಯೆ ಎದುರಾಗುತ್ತಿದೆ. ಅದಕ್ಕೆ ಕಾರಣ ಯಾರು? ಏನು ಮಾಡಬೇಕು ಎನ್ನುವುದನ್ನೆಲ್ಲಾ 'ಭೀಮ' ಚಿತ್ರದಲ್ಲಿ ಚರ್ಚಿಸಲಾಗಿದೆ. ಮೊದಲ ಸಿನಿಮಾ ಸಿನಿಮಾ ನೋಡಿದ ಪ್ರೇಕ್ಷಕರು ಸಂಭ್ರಮದಿಂದ ಖುಷಿಯಾಗಿ ಹೊರ ಬಂದಿದ್ದಾರೆ.

ಚಿತ್ರಮಂದಿರಗಳಲ್ಲಿ 'ಭೀಮ'ನ ಕಾರುಬಾರು ಜೋರಾಗಿತ್ತು. ರಜಾ ದಿನ ಅಲ್ಲದೇ ವಾರದ ದಿನದಲ್ಲಿ(ಶುಕ್ರವಾರ) ಕೆಲವೆಡೆ ಶೋಗಳು ಹೌಸ್‌ಫುಲ್ ಆಗಿತ್ತು. ಸಂಜೆ ಮೇಲೆ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್‌ಗೂ ರೆಸ್ಪಾನ್ಸ್ ಚೆನ್ನಾಗಿತ್ತು. ಇದೆಲ್ಲದರ ನಡುವೆ ಸಿನಿಮಾ ಮೊದಲ ದಿನದ ಕಲೆಕ್ಷನ್ ಎಷ್ಟು ಎನ್ನುವ ಚರ್ಚೆ ಶುರುವಾಗಿದೆ.
ಈ ವರ್ಷ ಕನ್ನಡದ ಯಾವುದೇ ಸಿನಿಮಾ ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಶೇಕ್ ಮಾಡಲಿಲ್ಲ. ಇದ್ದಿದ್ದರಲ್ಲಿ 'ಉಪಾಧ್ಯಕ್ಷ', 'ಯುವ' ಸೇರಿ ಒಂದೆರಡು ಸಿನಿಮಾ ಸದ್ದು ಮಾಡಿದ್ದವು. ಇದೀಗ 'ಭೀಮ' ಓಪನಿಂಗ್ ಚಿತ್ರರಂಗಕ್ಕೆ ಹೊಸ ಹುರುಪು ತಂದಿದೆ. sacnilk ವೆಬ್‌ಸೈಟ್ ವರದಿ ಪ್ರಕಾರ 'ಭೀಮ' ಸಿನಿಮಾ ಮೊದಲ ದಿನ 3.5 ಕೋಟಿ ರೂ. ಗಳಿಕೆ ಕಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಕೂಡ ಶುಕ್ರವಾರ ಇದು ಕಮ್ಮಿ ಏನಲ್ಲ.
'ಭೀಮ' ಸಿನಿಮಾ ನೋಡಲು ಪ್ರೇಕ್ಷಕರಲ್ಲಿ ಭಾರೀ ಹುರುಪು ಕಂಡುಬಂದಿದ್ದು ಸುಳ್ಳಲ್ಲ. ಹೊಸಪೇಟೆಯಲ್ಲಿ ಫ್ಯಾನ್ಸ್ ಶೋ ಇದೆ ಎಂದು ಹೇಳಲಾಗಿತ್ತು. ಆದರೆ ಚಿತ್ರತಂಡ ಬೆಳಗ್ಗೆ 10 ಗಂಟೆಯ ನಂತರವೇ ಸಿನಿಮಾ ಪ್ರದರ್ಶನಕ್ಕೆ ಮುಂದಾಗಿತ್ತು. ಬೆಳಗ್ಗೆ ಶೋ ಹಾಕಲಿಲ್ಲ ಎಂದು ಅಭಿಮಾನಿಗಳು ಥಿಯೇಟರ್ ಗೇಟ್ ಬೀಗ ಮುರಿದು ಒಳನುಗ್ಗಿದ ಘಟನೆಯೂ ನಡೆಯಿತು.
ನಿನ್ನೆ(ಆಗಸ್ಟ್ 9) ಮಧ್ಯಾಹ್ನದ ಮೇಲೆ ಬುಕ್ ಮೈ ಶೋನಲ್ಲಿ ಬುಕ್ಕಿಂಗ್ ಚೆನ್ನಾಗಿ ಆಗಿತ್ತು. ಆದರೆ ಶನಿವಾರ ಅಂತಹ ಟ್ರೆಂಡ್ ಕಾಣುತ್ತಿಲ್ಲ. ಬುಕ್‌ಮೈ ಇಂದು ಮಧ್ಯಾಹ್ನದ ಮೇಲೆ 'ಭೀಮ' ಚಿತ್ರಕ್ಕೆ ರೆಸ್ಪಾನ್ಸ್ ಹೇಗಿರುತ್ತದೆ ಕಾದು ನೋಡಬೇಕಿದೆ. ಭಾನುವಾರ ದೊಡ್ಡಮಟ್ಟದ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ.


Click it and Unblock the Notifications











