Duniya Vijay: ಸ್ಯಾಂಡಲ್‌ವುಡ್ 'ಭೀಮ' ದುನಿಯಾ ವಿಜಯ್ 50 ನೇ ಹುಟ್ಟುಹಬ್ಬ

ಕನ್ನಡ ಚಿತ್ರರಂಗದಲ್ಲಿ ಯಾವುದೇ ಗಾಡ್‌ಫಾದರ್ ಬೆಂಬಲ ಇಲ್ಲದೇ ಸ್ವಂತ ಬಲದಿಂದ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಾ ಇಂದು ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟ ಎನಿಸಿಕೊಂಡಿರುವುದು ದುನಿಯಾ ವಿಜಯ್. ಖಳನಾಯಕ, ಫೈಟರ್, ಪೋಷಕ ಪಾತ್ರಗಳನ್ನು ಮಾಡುತ್ತಾ ಇಂದು ಸಾವಿರಾರು ಜನರಿಗೆ ಕೆಲಸ ನೀಡುವಂತೆ ಬೆಳೆದಿದ್ದಾರೆ ವಿಜಯ್. ತನ್ನ ಜೊತೆಗೆ ತನ್ನವರನ್ನೂ ಬೆಳೆಸುತ್ತಿರುವ ಈ ನಟನಿಗೆ ಇಂದು 50 ನೇ ಹುಟ್ಟುಹಬ್ಬದ ಸಂಭ್ರಮ.

ನಟ ದುನಿಯಾ ವಿಜಯ್ 50 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಂದೆ- ತಾಯಿ ಮೇಲೆ ವಿಶೇಷ ಪ್ರೀತಿ ಇರಿಸಿಕೊಂಡಿರುವ ನಟ ದುನಿಯಾ ವಿಜಯ್, ಅವರ ಸಮಾಧಿ ಬಳಿಯೇ ಕೇಕ್ ಕತ್ತರಿಸಿ ಜನವರಿ 20 ರಂದು ತಮ್ಮ ಬರ್ತ್‌ಡೇ ಸೆಲಬ್ರೆಟ್ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರ ನಟನೆ ಮತ್ತು ನಿರ್ದೇಶನದ ಬಹುನಿರೀಕ್ಷಿತ 'ಭೀಮ' ಸಿನಿಮಾದ ಟೀಸರ್ ಕೂಡ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

Bheema Teaser: Actor Duniya Vijay Celebrates his 50th Birthday with Fans

ತಂದೆ - ತಾಯಿ ಸಮಾಧಿ ಬಳಿ ಸ್ಯಾಂಡಲ್‌ವುಡ್ ಸಲಗನ ಬರ್ತ್‌ಡೇ

ದುನಿಯಾ ವಿಜಯ್ ಜನವರಿ 20 ರಂದು ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಎಲ್ಲರನ್ನೂ ತಮ್ಮ ಹುಟ್ಟೂರಿಗೆ ಆಹ್ವಾನಿಸಿದ್ದಾರೆ. ಇದರ ಜೊತೆಗೆ ತಮ್ಮ ಬರ್ತ್‌ಡೇ ಅನ್ನು ತಂದೆ- ತಾಯಿ ಸಮಾಧಿ ಬಳಿ ಆಚರಿಸಿದ್ದಾರೆ. ವಿಜಯ್ ಅವರ ತಂದೆ-ತಾಯಿ ಸಮಾಧಿಗೆ ಹೂವಿನ ಅಲಂಕಾರ ಮಾಡಲಾಗಿದೆ. ಎಲ್ಲಾ ಕೆಲಸಗಳನ್ನು ಮುಂದೆ ನಿಂತು ಮಾಡಿದ್ದಾರೆ ವಿಜಯ್ ಎರಡನೇ ಪತ್ನಿ ಕೀರ್ತಿ ಪಟ್ಟಾಡಿ ಅವರು.

ನಟ ವಿಜಯ್ ಅವರು ತಮ್ಮ ತಂದೆ ತಾಯಿ ಇಬ್ಬರಿಗೂ ಗುಡಿ ಕಟ್ಟಿಸಿದ್ದಾರೆ. ದೇವರಂತೆಯೇ ನೋಡುವ ಅವರಿಗೆ ಅವರ ಪತ್ನಿ ಕೀರ್ತಿ ಪಟ್ಟಾಡಿ ಸಾಥ್ ನೀಡಿದ್ದಾರೆ. ಹುಟ್ಟುಹಬ್ಬ ಆಚರಣೆ ಹಿನ್ನೆಲೆ ಕೀರ್ತಿ ಪಟ್ಟಾಡಿ ನಿನ್ನೆ ರಾತ್ರಿಯೇ ಎರಡು ಗುಡಿಗಳನ್ನು ಹೂಗಳಿಂಗ ಅಲಂಕಾರ ಮಾಡಿಸಿದ್ದರು. ಬಳಿಕ ದುನಿಯಾ ವಿಜಯ್ ತಂದೆ ತಾಯಿ ಆಶೀರ್ವಾದ ಪಡೆದಿದ್ದಾರೆ.

Bheema Teaser: Actor Duniya Vijay Celebrates his 50th Birthday with Fans

ಕೇಕ್ ಕಟ್ ಮಾಡಿ ವಿಜಯ್ ಹೇಳಿದ್ದೇನು?

ಬರ್ತ್‌ಡೇ ಕೇಕ್ ಕಟ್ ಮಾಡಿ ಮಾತನಾಡಿರುವ ದುನಿಯಾ ವಿಜಯ್ ತಾವು ಬಡ ಖೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿಸಿದರ ಬಗ್ಗೆ ಮಾತನಾಡಿದ್ದಾರೆ. "ಬಡವರು ಗೊತ್ತಿಲ್ಲದೇ ತಪ್ಪು ಮಾಡಿರುತ್ತಾರೆ... ಆದರೆ ಅವರಿಗೆ ಆ ದಂಡ ಕಟ್ಟಲು ಕೂಡ ದುಡ್ಡಿರಲ್ಲ. ಕೆಲವೊಮ್ಮೆ ಗಂಡ ಮಾಡಿದ ತಪ್ಪಿಗೂ ಕೂಡ ಹೆಂಡತಿಯನ್ನು ಒಳಗೆ ಹಾಕಿರುತ್ತಾರೆ. ಬಡವ ತಪ್ಪು ಮಾಡಿದ್ದಾನೆ ಅಂದರೆ ಕೆಲವೊಮ್ಮೆ ಅಮಾಯಕರೇ ಇರುತ್ತಾರೆ. ಕೆಟ್ಟ ಕೆಲಸ ಮಾಡುವವರು ಹೊರಗೆ ಆರಾಮಾಗಿ ರಾಜರಂತೆ ಇದ್ದಾರೆ. ಇವರು ಮಾತ್ರ ಗೊತ್ತಿಲ್ಲದೇ ಅನ್ನಕ್ಕೂ, ಬಡತನಕ್ಕೋ ತಪ್ಪು ಮಾಡಿರುತ್ತಾರೆ. ಕೆಲವೊಮ್ಮೆ ತಪ್ಪು ನಡೆದ ಜಾಗದಲ್ಲಿ ಇದ್ದ ಎಂದೂ ಅರೆಸ್ಟ್ ಆಗಿರುತ್ತಾರೆ. ಅವರಿಗೆ ಆದಷ್ಟು ಸಹಾಯ ಮಾಡಬೇಕು ಅಷ್ಟೇ" ಎಂದು ಹೇಳಿದ್ದಾರೆ.

ಕುಂಬಾರನಹಳ್ಳಿಯಲ್ಲಿ 'ಭೀಮ'ನ ಬರ್ತ್‌ಡೇ

ಇನ್ನು, ನಟ ದುನಿಯಾ ವಿಜಯ್ ತಮ್ಮ ಹುಟ್ಟುರಾದ ಕುಂಬಾರನಹಳ್ಳಿಯಲ್ಲಿ ಅಭಿಮಾನಿಗಳ ಜೊತೆಗೆ ವಿಶೇಷವಾಗಿ ಬರ್ತ್‌ಡೇ ಸೆಲಬ್ರೆಡ್ ಮಾಡಲಿದ್ದಾರೆ. ಜೊತೆಗೆ ಈ ಹಿಂದೆ ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಕೂಡ ಮಾಡಿಕೊಂಡಿದ್ದರು. "ದಯವಿಟ್ಟು ಕೈ ಮುಗಿದು ಕೇಳಿಕೊಳ್ಳುತ್ತೇನೆ ಯಾವ ಅಭಿಮಾನಿಗಳು ಸಹ ಈ ಬಾರಿ ನಡೆದುಕೊಂಡು ಬರಬೇಡಿ, ಯಾರು ಕೇಕ್ ಮತ್ತು ಹೂವಿನ ಹಾರ ತರಬೇಡಿ . ನನಗೆ ನಿಮ್ಮ ಜೊತೆಗೆ ಕುಳಿತು ಪ್ರೀತಿಯಿಂದ ಊಟ ಮಾಡುವ ಆಸೆಯಿದೆ" ಎಂದಿದ್ದರು. ಇಮದೂ ಕೂಡ ಮತ್ತೆ ಅವರೊಂದಿಗೆ ಊಟ ಮಾಡುವ ಆಸೆಯನ್ನು ಹೇಳಿಕೊಂಡಿದ್ದಾರೆ.

More from Filmibeat

English summary
Actor Duniya Vijay celebrates his 50th birthday with fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X