"ನಾನು ನನ್ನ ಗಂಡನ ಪಾದಪೂಜೆ ಮಾಡ್ತೀನಿ.. ಇದನ್ನು ಯಾರೇ ತಪ್ಪು ಅಂದ್ರು ಒಪ್ಪಲ್ಲ"

ಆಷಾಢದ ಕೊನೆಯ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಈ ದಿನ ಮಹಿಳೆಯರು ತಮ್ಮ ಪತಿ ಮತ್ತು ಸಹೋದರರ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಇನ್ನು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಂಕರ್ಯ ನಡೆದವು. ಇನ್ನು ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಕೂಡ ಪತಿ ನಿತಿನ್ ರಾಜು ಪಾದಪೂಜೆ ಮಾಡಿದ್ದಾರೆ.

ಭೀಮನ ಅಮಾವಾಸ್ಯೆಯಂದು ಪತಿಯ ಪಾದಪೂಜೆ ಮಾಡಿದ ಕುರಿತು ನಟಿ ಪ್ರಣೀತಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಪತಿಯ ಪಾದಪೂಜೆ ಬಗ್ಗೆ ಟೀಕಿಸುವವರಿಗೂ ತಿರುಗೇಟು ನೀಡಿದ್ದಾರೆ. ಯಾಕಂದರೆ ಕಳೆದ ಬಾರಿ ಆಕೆ ಪತಿಯ ಪಾದ ಪೂಜೆ ಮಾಡಿದ್ದ ಫೋಟೊ ಹಂಚಿಕೊಂಡಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗಿತ್ತು. ಇದೇ ಕಾರಣಕ್ಕೆ ಆ ವಿಚಾರವನ್ನು ನೆನಪಿಸಿ ನಾನು ಯಾವುದೇ ಟೀಕೆಗಳಿಗೂ ಹೆದರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

Pranitha -Subhash -Bheemana- Amavasya

2 ವರ್ಷಗಳ ಹಿಂದೆ ಪ್ರಣೀತಾ ಉದ್ಯಮಿ ನಿತಿನ್ ರಾಜು ಕೈ ಹಿಡಿದಿದ್ದರು. ಕೋವಿಡ್ ಸಮಯವಾದ್ದರಿಂದ ಕೆಲವೇ ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆದಿತ್ತು. ಆದರೆ ಯಾಕೋ ಆಕೆ ಮದುವೆ ವಿಚಾರವನ್ನು ರಹಸ್ಯವಾಗಿ ಇಡಲು ಪ್ರಯತ್ನಿಸಿದ್ದರು. ನಂತರ ಆ ವಿಚಾರ ಬಹಿರಂಗವಾಗಿತ್ತು.

ಕಳೆದ ವರ್ಷ ಸಾಕಷ್ಟು ಟೀಕೆ

ಪ್ರಣೀತಾ ಸುಭಾಷ್ ಕಳೆದ ವರ್ಷ ಭೀಮನ ಅಮವಾಸೆ ದಿನ ಪತಿಯ ಪಾದಪೂಜೆ ಮಾಡಿದ್ದ ಫೋಟೊ ಹಂಚಿಕೊಂಡಿದ್ದರು. ಇದಕ್ಕೆ ಕೆಲವರು ಟೀಕಿಸಿದ್ದರು. "ಇಂತಹ ಗುಲಾಮಗಿರಿ ಬೇಡ" ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು "ಮಹಿಳೆಯರು ಕೇವಲ ಸಂಸ್ಕೃತಿ ಮತ್ತು ಸಂಪ್ರದಾಯದ ಹೆಸರಿನಲ್ಲಿ ಮೂರ್ಖರಾಗುತ್ತಾರೆ, ಇದು ಆಳವಾದ ಪಿತೃಪ್ರಧಾನ ಸಮಾಜದ ತಾರತಮ್ಯವಾಗಿದೆ. ಮಹಿಳೆ ತನ್ನ ಹಕ್ಕು ಮತ್ತು ಗೌರವಕ್ಕೆ ನಿಲ್ಲಬೇಕು" ಎಂದು ಕಾಮೆಂಟ್ ಮಾಡಿದ್ದರು. ಇಂತಹ ಸಾಕಷ್ಟು ಕಾಮೆಂಟ್‌ಗಳು ಬಂದಿತ್ತು. ಕೆಲವರು ಪ್ರಣೀತಾ ನಡೆಯನ್ನು ಮೆಚ್ಚಿಕೊಂಡಿದ್ದರು.

ಟೀಕೆಗಳಿಗೆ ಜಗ್ಗದ ಪ್ರಣೀತಾ

ಕಳೆದ ಬಾರಿ ಭೀಮನ ಅಮಾವಾಸ್ಯೆ ಪೋಸ್ಟ್‌ಗೆ ಅಷ್ಟೆಲ್ಲಾ ಟೀಕೆ ವ್ಯಕ್ತವಾಗಿದ್ದಕ್ಕೆ ಈ ವರ್ಷ ಪತಿಯ ಪಾದಪೂಜೆ ಮಾಡಿ ಪ್ರಣೀತಾ ಪೋಸ್ಟ್ ಮಾಡದೇ ಸುಮ್ಮನಾಗಲಿಲ್ಲ. ಈ ಬಾರಿಯೂ ಪತಿಯ ಪಾದಪೂಜೆ ಮಾಡಿರುವ ಫೋಟೊ ಹಂಚಿಕೊಂಡಿದ್ದಾರೆ. ಜೊತೆಗೆ ಕಳೆಯ ವರ್ಷದ ಟೀಕೆಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿ ಯಾವುದೇ ಕಾರಣಕ್ಕೂ ನಮ್ಮ ಆಚರಣೆಯನ್ನು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಆಚರಣೆಗೆ ಮಹತ್ವ ಇದೆ

"ಭೀಮನ ಅಮವಾಸ್ಯೆ ಪ್ರಯುಕ್ತ ಬೆಳಗ್ಗೆ ಪತಿಯ ಪಾದಪೂಜೆ ಮಾಡಿದೆ. ನಿಮಗೆ, ಇದು ಪಿತೃಪ್ರಭುತ್ವದ ಪ್ರದರ್ಶನ ಎನಿಸಬಹುದು. (ಕಳೆದ ವರ್ಷದ ಚರ್ಚೆಗೆ ಸಂಬಂಧಿಸಿ), ಆದರೆ ನನಗೆ ಇದು ಹೆಚ್ಚಿನ ಮಹತ್ವ ಎನಿಸಿದೆ. ಸನಾತನಧರ್ಮದಲ್ಲಿ, ಹೆಚ್ಚಿನ ಆಚರಣೆಗಳು ಏಕೆ ಮಹತ್ವದ್ದಾಗಿದೆ ಎಂಬುದ್ದಕ್ಕೆ ಒಂದೊಂದು ಕಥೆಯಿದೆ. ಹಿಂದೂ ಆಚರಣೆಗಳು ಪಿತೃಪ್ರಧಾನವೆಂದು ವಾದಿಸುವುದು ಸಂಪೂರ್ಣವಾಗಿ ಆಧಾರರಹಿತವಾಗಿದೆ. ಏಕೆಂದರೆ ಇದು ಸ್ತ್ರೀ ದೇವತೆಗಳನ್ನು ಸಮಾನವಾಗಿ ಪೂಜಿಸುವ ಕೆಲವು ನಂಬಿಕೆಗಳಲ್ಲಿ ಒಂದಾಗಿದೆ" ಎಂದು ಬರೆದಿದ್ದಾರೆ.

Pranitha -Subhash -Bheemana- Amavasya

ಮತ್ತೆ ಸಿನಿಮಾಗಳಲ್ಲಿ ಬ್ಯುಸಿ

ಮದುವೆಯಾಗಿ ತಾಯಿಯಾದ ಬಳಿಕ ಕೂಡ ನಟಿ ಪ್ರಣೀತಾ ಸಿನಿಮಾಗಳಲ್ಲಿ ಮುಂದುವರೆದಿದ್ದಾರೆ. ಕಳೆದ ವರ್ಷ ಪ್ರಣೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳ ಲಾಲನೆ ಪಾಲನೆ ಜೊತೆಗೆ ಮತ್ತೆ ನಿಧಾನವಾಗಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಮಲಯಾಳಂ ಚಿತ್ರವೊಂದಕ್ಕೆ ಆಕೆ ಬಣ್ಣ ಹಚ್ಚಿದ್ದಾರೆ. ಇದು ಮಾಲಿವುಡ್ ನಟ ದಿಲೀಪ್ ನಟನೆಯ 148ನೇ ಸಿನಿಮಾ. ಈ ಚಿತ್ರದಲ್ಲಿ ನಾಯಕಿಯಾಗಿ ಪ್ರಣೀತಾ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಆಕೆಯ ಚೊಚ್ಚಲ ಮಲಯಾಳಂ ಸಿನಿಮಾ ಅನ್ನೋದು ವಿಶೇಷ. ಇನ್ನು ಮತ್ತೆ ದೇಹದ ತೂಕ ಇಳಿಸಿ ಪ್ರಣೀತಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ.

More from Filmibeat

English summary
Bheemana Amavasya, actress Pranitha Subhash Performs Pooja at Her Husband's Feet. She Also Post specila post in Social media accounts. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X