ಭೀಮನ ಅಮಾವಾಸ್ಯೆ: ಪತಿಯ ಪೂಜೆ ಮಾಡಿದ ಪ್ರಿಯಾಂಕಾ ಉಪೇಂದ್ರ
ಭೀಮನ ಅಮಾವಾಸ್ಯೆ (ಜುಲೈ 23).....ಮಹಿಳೆಯರ ಪಾಲಿಗೆ ಅತ್ಯಂತ ಪವಿತ್ರ ಹಬ್ಬ. ಮಡದಿಯು, ತನ್ನ ಪತಿಯ ಆಯುಷ್ಯ ಹೆಚ್ಚಲಿ, ಆತನಿಗೆ ದೇವರು ಆಯುರಾರೋಗ್ಯ ದಯಪಾಲಿಸಲಿ ಎಂದು ಭಕ್ತಿಯಿಂದ ಬೇಡಿ, ಪತಿಯನ್ನು ಪೂಜೆ ಮಾಡುವ ಈ ಹಬ್ಬ. ಈ ಹಬ್ಬವನ್ನ ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಸಂಪ್ರದಾಯವಾಗಿ ಆಚರಿಸಲಾಗಿದೆ.
ನಟಿ ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಪತಿ ಉಪೇಂದ್ರ ಅವರ ಜೊತೆ ಸೇರಿ ಭೀಮನ ಅಮಾವಾಸ್ಯೆಯ ವ್ರತ ಆಚರಿಸಿದ್ದಾರೆ. ದೇವರ ಗುಡಿಯಲ್ಲಿ ಕುಳಿತು ಪ್ರಿಯಾಂಕಾ ಉಪೇಂದ್ರ ತಮ್ಮ ಪತಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಪೂಜೆ ಮಾಡಿದ್ದಾರೆ.
ಭೀಮನ ಅಮಾವಾಸ್ಯೆ: ತಿಳಿಯಬೇಕಾದ 10 ಸಂಗತಿ

ಭೀಮನ ಅಮಾವಾಸ್ಯೆ ವಿಶೇಷವಾಗಿ ಪತಿಗೆ ಪೂಜೆ ಮಾಡುತ್ತಿರುವ ಫೋಟೋವನ್ನ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದ್ದು, ಉಪ್ಪಿ ಹಾಗೂ ಪ್ರಿಯಾಂಕಾ ಅವರ ಅಭಿಮಾನಿಗಳು ಸ್ಯಾಂಡಲ್ ವುಡ್ ನ ಮಾದರಿ ಜೋಡಿಗೆ ಶುಭ ಕೋರಿದ್ದಾರೆ.
ಆಷಾಢ ಏಕಾದಶಿ ದಿನ ಉಪವಾಸ ಏಕೆ ಮಾಡಬೇಕು?
More from Filmibeat
English summary
Kannada Actress Priyanka Upendra Has Taken His Facebook and Twitter Account to Share A Photos of Bheemana Amavasya Celebration in Her Home.


Click it and Unblock the Notifications











