For Quick Alerts
  ALLOW NOTIFICATIONS  
  For Daily Alerts

  ಎಲ್ಲಿಗೆ ಬಂತು 'ಭೀಮಸೇನ ನಳಮಹಾರಾಜ' ಸಿನಿಮಾ

  By Naveen
  |
  ಭೀಮಸೇನ ನಳಮಹಾರಾಜ ಏನ್ ಮಾಡ್ತಿದ್ದಾನೆ..? | Filmibeat Kannada

  'ಭೀಮಸೇನ ನಳಮಹಾರಾಜ' ಸಿನಿಮಾ ಸೆಟ್ಟೇರಿ ಅನೇಕ ತಿಂಗಳುಗಳು ಕಳೆದಿದೆ. ಆದರೆ, ಚಿತ್ರದ ಬಗ್ಗೆ ಹೆಚ್ಚು ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಸಿನಿಮಾ ಯಾವ ಹಂತದಲ್ಲಿ ಇದೆ ಎಂಬುದು ಅನೇಕರಿಗೆ ತಿಳಿದಿರಲಿಲ್ಲ.

  ಅಂದಹಾಗೆ, ಈಗ 'ಭೀಮಸೇನ ನಳಮಹಾರಾಜ' ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಜೊತೆ ಜೊತೆಗೆ ಟೀಸರ್ ರಿಲೀಸ್ ಮಾಡುವ ಪ್ಲಾನ್ ಮಾಡಿರುವ ಚಿತ್ರತಂಡ ಅದರ ತಯಾರಿಯಲ್ಲಿಯೂ ಇದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆಯಂತೆ.

  ಬಿಗ್ ಸ್ಕ್ರೀನ್ ಮೇಲೆ ಬೇಬಿ ಡಾಲ್ ಆದ್ಯಾ ತುಂಟಾಟ ಶುರು! ಬಿಗ್ ಸ್ಕ್ರೀನ್ ಮೇಲೆ ಬೇಬಿ ಡಾಲ್ ಆದ್ಯಾ ತುಂಟಾಟ ಶುರು!

  ಇನ್ನು,'ಭೀಮಸೇನ ನಳಮಹಾರಾಜ'ದ ನಾಯಕ ಅಡುಗೆ ಮಾಡುವ ಬಗ್ಗೆ ಕ್ರೇಜ್ ಹೊಂದಿರುತ್ತಾನೆ. ಅದೇ ರೀತಿ ಸಿನಿಮಾ ಆರು ಅಂಶಗಳನ್ನು ಇಟ್ಟುಕೊಂಡು ಮಾಡಲಾಗದೆ. ಸಿಹಿ, ಕಹಿ, ಹುಳಿ, ಉಪ್ಪು, ಖಾರ ಮತ್ತು ಒಗರು ಸೇರಿದಂತೆ ಒಟ್ಟು ಆರು ರಸಗಳನ್ನು ಕುರಿತಾದ ಚಿತ್ರದ ಕಥೆ ಇದಾಗಿದೆ.

  'ಕಿರಿಕ್ ಪಾರ್ಟಿ' ಖ್ಯಾತಿಯ ಅರವಿಂದ್ ಅಯ್ಯರ್ ಚಿತ್ರದ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ. ಅರವಿಂದ್ ಜೊತೆಯಾಗಿ ಪ್ರಿಯಾಂಕ ತಿಮ್ಮೇಶ್ ಹಾಗೂ ಆರೋಹಿ ನಾರಾಯಣ್ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಕಾರ್ತಿಕ್ ಸರಗೂರು ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನ ಹಾಗೂ ಹೇಮಂತ್ ಕುಮಾರ್ ಸಿನಿಮಾ ಬಂಡವಾಳ ಹಾಕಿದ್ದಾರೆ.

  ಉಳಿದಂತೆ, 'ಭೀಮಸೇನ ನಳಮಹಾರಾಜ' ಸಿನಿಮಾದಲ್ಲಿ 'ಡ್ರಾಮಾ ಜೂನಿಯರ್ಸ್' ಖ್ಯಾತಿಯ ಚಿತ್ರಾಲಿ ಹಾಗೂ ಸರಿಗಮಪ ಕಾರ್ಯಕ್ರಮ ಆದ್ಯಾ ನಟಿಸುತ್ತಿದ್ದಾರೆ.

  English summary
  Kannada actor Aravind Iyer's 'Bheemasena Nala Maharaja' movie teaser will be releasing on the varamahalakshmi festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X