ಭಕ್ಷ್ಯ-ಭೋಜನ ಬಡಿಸಲು ಸಜ್ಜಾದ 'ಭೀಮಸೇನ ನಳಮಹರಾಜ': ಟೀಸರ್ ರಿಲೀಸ್
ಗಮನ ಸೆಳೆದಿರುವ ಕನ್ನಡ ಸಿನಿಮಾ 'ಭೀಮಸೇನ ನಳಮಹರಾಜ' ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಸಿನಿಮಾ ಬಗ್ಗೆ ಹೆಚ್ಚೇನು ಬಿಟ್ಟುಕೊಡದ ಟೀಸರ್, ಸಿನಿಮಾದ ಪೋಸ್ಟರ್‌ನ ಮುಂದುವರಿಕೆಯಂತಿದೆ.
ವ್ಯಕ್ತಿಯೊಬ್ಬ ಪಂಚೆ ಕಟ್ಟಿ ಅಡುಗೆ ಮಾಡುವುದರಲ್ಲಿ ನಿರತರಾಗಿರುವ ಪೋಸ್ಟರ್ ಅನ್ನು 'ಭೀಮಸೇನ ನಳಮಹರಾಜ' ಚಿತ್ರತಂಡ ಈ ಮೊದಲು ಹಂಚಿಕೊಂಡಿತ್ತು, ಟೀಸರ್‌ನಲ್ಲಿ ಅದೇ ಒಂದು ದೃಶ್ಯ ಮಾತ್ರವೇ ಇದೆ.
ಅರವಿಂದ ಅಯ್ಯರ್ ನಟನೆಯ 'ಭೀಮಸೇನ ನಳಮಹರಾಜ' ಸಿನಿಮಾ ತನ್ನ ಭಿನ್ನ ಪೋಸ್ಟರ್, ಪ್ರತಿಭಾವಂತ ತಂಡದಿಂದ ಸಿನಿಪ್ರೇಮಿಗಳ ಗಮನ ಸೆಳೆದಿದೆ.

ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ
ಭೀಮಸೇನ ನಳಮಹರಾಜ ಸಿನಿಮಾವು ಚಿತ್ರಮಂದಿರದ ಬದಲಾಗಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಅಮೆಜಾನ್ ಪ್ರೈಂ ನಲ್ಲಿ ಅಕ್ಟೋಬರ್ 29 ರಂದು ಸಿನಿಮಾವು ವೀಕ್ಷಣೆಗೆ ದೊರಕಲಿದೆ.

ಅಡುಗೆ, ಸ್ವಾದವೇ ಕತೆಯ ಪ್ರಧಾನ ಅಂಶ
ಭೀಮಸೇನ ನಳಮಹರಾಜ ಸಿನಿಮಾವು ಕೌಟುಂಬಿಕ ಕತೆ ಹೊಂದಿದೆ ಎನ್ನಲಾಗುತ್ತಿದ್ದು, ತಂದೆ-ಮಗಳ ಬಾಂದವ್ಯದ ಕತೆಯನ್ನು ಸಿನಿಮಾ ಹೊಂದಿದೆ. ಕತೆಯ ಪ್ರಧಾನ ಭಾಗ ಅಡುಗೆ ಮತ್ತು ಸ್ವಾದದ ಕುರಿತಾಗಿರುವುದು ಸಿನಿಮಾದ ಹೆಸರು ಮತ್ತು ಪೋಸ್ಟರ್‌ನಿಂದ ತಿಳಿದು ಬರುತ್ತಿದೆ.

ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ರಾವ್ ನಿರ್ಮಾಪಕರು
ಸಿನಿಮಾವನ್ನು ಕಾರ್ತಿಕ್ ಸರಗೂರು ನಿರ್ದೇಶಿಸಿದ್ದಾರೆ, ಸಿನಿಮಾಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಟ ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಅವರುಗಳು ಬಂಡವಾಳ ಹೂಡಿದ್ದಾರೆ.
Recommended Video

ಅರವಿಂದ ಅಯ್ಯರ್ ನಾಯಕ
ಭೀಮಸೇನ ನಳಮಹಾರಾಜ ಸಿನಿಮಾದ ನಾಯಕನಾಗಿ ಅರವಿಂದ ಅಯ್ಯರ್ ನಟಿಸಿದ್ದಾರೆ, ಸಿನಿಮಾದ ನಾಯಕಿ ಅರೋಹಿ ನಾರಾಯಣ್, ಜೊತೆಗೆ ಅಚ್ಯುತ್ ಕುಮಾರ್, ಪ್ರಿಯಾಂಕ್ ತಿಮ್ಮೇಶ್, ವಿಜಯ್ ಚೆಂಡೂರ್ ಇದ್ದಾರೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.


Click it and Unblock the Notifications











