ಜೂನ್ 12ಕ್ಕೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಆರಂಭ
Recommended Video
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವರು' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದು, ಇತ್ತೀಚಿಗಷ್ಟೆ ಈ ಸಿನಿಮಾ ಅಧಿಕೃತವಾಗಿ ಸೆಟ್ಟೇರಿತ್ತು. ಅದಕ್ಕೂ ಮುಂಚೆ ತಮಿಳಿನಲ್ಲಿ ಕಾರ್ತಿ ಜೊತೆ ನಟಿಸುತ್ತಿರುವ ಸಿನಿಮಾನೂ ಆರಂಭವಾಗಿತ್ತು.
ಅಲ್ಲು ಅರ್ಜುನ್ ಚಿತ್ರದಲ್ಲೂ ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರೆ. ಇದೀಗ, ಇನ್ನೊಂದು ಸಿನಿಮಾ ಅಧಿಕೃತವಾಗಿ ಮುಹೂರ್ತ ಮಾಡಿಕೊಳ್ಳಲಿದೆ. ಹೌದು, ನಿತೀನ್ ಜೊತೆ ನಟಿಸುತ್ತಿರುವ ಭೀಷ್ಮ ಸಿನಿಮಾ ಜೂನ್ 12 ರಂದು ಪೂಜೆ ಮಾಡಲಿದೆ.
ವೆಂಕಿ ಕುಡುಮುಲಾ ನಿರ್ದೇಶನದಲ್ಲಿ ಬರ್ತಿರುವ ಈ ಚಿತ್ರವನ್ನ ಸೂರ್ಯದೇವರ ನಾಗವಂಶಿ ನಿರ್ಮಿಸುತ್ತಿದ್ದಾರೆ. ಅಂದ್ಹಾಗೆ, ರಶ್ಮಿಕಾ ಅವರನ್ನ ತೆಲುಗು ಸಿನಿಮಾ ಇಂಡಸ್ಟ್ರಿಗೆ 'ಚಲೋ' ಚಿತ್ರದ ಮೂಲಕ ಪರಿಚಯಿಸಿದ್ದ ಖ್ಯಾತಿ ವೆಂಕಿ ಕುಡುಮುಲಾ ಅವರಿಗೆ ಸಲ್ಲುತ್ತೆ.

ಭೀಷ್ಮ ಸಿನಿಮಾ ಆರಂಭವಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಶ್ಮಿಕಾ, ಸಿನಿಮಾ ಸೆಟ್ ಗೆ ಹೋಗಲು ಥ್ರಿಲ್ ಆಗಿದ್ದಾರೆ. ಈ ಮೂಲಕ ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ನಟಿಸಬೇಕಾದ ಸವಾಲು ರಶ್ಮಿಕಾ ಮುಂದಿದೆ. ಅದನ್ನ ಹೇಗೆ ನಿಭಾಯಿಸುತ್ತಾರೋ ಕಾದುನೋಡಬೇಕಿದೆ.


Click it and Unblock the Notifications











