For Quick Alerts
  ALLOW NOTIFICATIONS  
  For Daily Alerts

  ಕೆಂಡದ ಸೆರಗಿನಲ್ಲಿ ಭೂಮಿ ಶೆಟ್ಟಿ: ವಿಭಿನ್ನ ಪಾತ್ರದಲ್ಲಿ ಕರಾವಳಿ ಹುಡುಗಿ

  |

  ಕಿರುತೆರೆ ಮೂಲಕ ನಟನೆ ಆರಂಭಿಸಿದ ಭೂಮಿ ಶೆಟ್ಟಿ ಸದ್ಯ ಬೆಳ್ಳಿ ತೆರೆಯಲ್ಲೂ ಮಿಂಚುತ್ತಿದ್ದಾರೆ. ಸದ್ಯ ಬ್ಯಾಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿ ಇರುವ ಭೂಮಿ ಶೆಟ್ಟಿ ತಮಗೆ ಸರಿಹೊಂದುವ ಪಾತ್ರಗಳನ್ನಷ್ಟೇ ಆಯ್ಕೆ ಮಾಡುತ್ತಿದ್ದಾರೆ. ಆದರೆ ಭೂಮಿ ಶೆಟ್ಟಿ ತಾವು ನಿರ್ವಹಿಸಿರುವ ಪಾತ್ರಕ್ಕೆ ನೂರಕ್ಕೆ ನೂರು ಜೀವ ತುಂಬುತ್ತಾರೆ.

  ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರಾವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿರಿಸಿದ ಭೂಮಿ ಶೆಟ್ಟಿ, ಬಿಗ್‌ ಬಾಸ್‌ ಕನ್ನಡ 7ರ ಸ್ಫರ್ಧಿಯಾಗಿದ್ದರು. ಬಿಗ್‌ ಬಾಸ್‌ ಬಳಿಕ ಭೂಮಿ ಶೆಟ್ಟಿ ಖ್ಯಾತಿ ಹೆಚ್ಚಿದ್ದು, ಬಳಿಕ ಕನ್ನಡದ ಜೊತೆಗೆ ಇತರ ಭಾಷೆಗಳ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿದ್ದರು.

  ಓಡೋಡಿ ಬಂದು ತಬ್ಬಿಕೊಂಡ ರಕ್ಷಿತ್‌: ಕಣ್ಣೀರಿಟ್ಟ ರಿಷಬ್ ಶೆಟ್ಟಿಓಡೋಡಿ ಬಂದು ತಬ್ಬಿಕೊಂಡ ರಕ್ಷಿತ್‌: ಕಣ್ಣೀರಿಟ್ಟ ರಿಷಬ್ ಶೆಟ್ಟಿ

  ಬೆಳ್ಳಿ ತೆರೆಯಲ್ಲೂ ಪ್ರಯಾಣ ಆರಂಭಿಸಿದ ಭೂಮಿ ಶೆಟ್ಟಿ ಕನ್ನಡದಲ್ಲಿ ತರೆಕಂಡ ಇಶಮ್‌ ಖಾನ್‌ ಹಾಗೂ ಹಸೀನ್‌ ಖಾನ್‌ ನಿರ್ದೇಶನದ 'ಇಕ್ಕಟ್‌' ಚಿತ್ರದಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಭೂಮಿ ಶೆಟ್ಟಿ ಮತ್ತೊಂದು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಕಾದಂಬರಿ ಆಧರಿತ ಚಿತ್ರದ ನಾಯಕಿಯಾಗಿ ಭೂಮಿ ಶೆಟ್ಟಿ ಕಾಣಿಕೊಳ್ಳುತ್ತಿದ್ದು, ಚಾಲೆಂಜಿಂಗ್‌ ಆದ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

  ಲೇಖಕ ರಾಕೇಶ್‌ ನಾಯಕ್‌ ಬರೆದ ಕಾದಂಬರಿ ಆಧಾರಿತ 'ಕೆಂಡದ ಸೆರಗು' ಚಿತ್ರದಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಭೂಮಿ ಶೆಟ್ಟಿ ನಾಯಕಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರ, ತಮ್ಮ ಚೊಚ್ಚಲ ಕೃತಿಯಲ್ಲೇ 2020ರ ಸಾಲಿನ ಪ್ರಶಸ್ತಿ ಪಡೆದ ಲೇಖಕ ರಾಕಿ ಸೋಮಲಿ 'ಕೆಂಡದ ಸೆರಗು' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ರಾಕಿ ಸೋಮಲಿ ಕೆಂಡದ ಸೆರಗು ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನಾಗುತ್ತಿದ್ದಾರೆ. ರಾಕಿ ಸೋಮಾಲಿ ತಮ್ಮ ಬರಹಗಳ ಮೂಲಕವೇ ಖ್ಯಾತಿ ಪಡೆದಿದ್ದಾರೆ.

  ಅಂಬಾಸಿಡರ್ ಕಾರಿಗೆ 'ಹೆಡ್‌ಬುಷ್' ಪೋಸ್ಟರ್ ಅಂಟಿಸಿ ಪ್ರಚಾರಕ್ಕೆ ಬಿಟ್ಟ ಡಾಲಿ: ಎಲ್ಲೆಲ್ಲಿ ಓಡುತ್ತೆ?ಅಂಬಾಸಿಡರ್ ಕಾರಿಗೆ 'ಹೆಡ್‌ಬುಷ್' ಪೋಸ್ಟರ್ ಅಂಟಿಸಿ ಪ್ರಚಾರಕ್ಕೆ ಬಿಟ್ಟ ಡಾಲಿ: ಎಲ್ಲೆಲ್ಲಿ ಓಡುತ್ತೆ?

  ಇನ್ನು 'ಕೆಂಡದ ಸೆರಗು' ಚಿತ್ರದ ಕೆಲಸಗಳು ಈಗಾಗಲೇ ಪ್ರಾರಂಭಾಗಿದ್ದು, ಚಿತ್ರದ ಮೋಷನ್ ಪೋಸ್ಟರ್‌ಗಳು ರಿಲೀಸ್‌ ಆಗಿದೆ. ಮೋಷನ್‌ ಪೋಸ್ಟರ್‌ನಲ್ಲಿ ನಟಿ ಭೂಮಿ ಶೆಟ್ಟಿ ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಭೂಮಿ ಶೆಟ್ಟಿ ಕ್ರೀಡಾಪಟು ಪಾತ್ರದಲ್ಲಿ ನಟಿಸಿದ್ದಾರೆ ಎನ್ನುವುದು ಮೋಷನ್‌ ಪೋಸ್ಟರ್‌ ಮೂಲಕ ತಿಳಿದು ಬಂದಿದೆ. ಈ ಹಿಂದಿನ ಸಿನಿಮಾ ಅಥವಾ ಪಾತ್ರಗಳಿಗಿಂತ ಭೂಮಿ ಶೆಟ್ಟಿ ಈ ಬಾರಿ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  'ಕೆಂಡದ ಸೆರಗು' ಚಿತ್ರದಲ್ಲಿ ಭೂಮಿ ಶೆಟ್ಟಿ ತುಂಬಾ ವಿಭಿನ್ನ, ಜವಾಬ್ದಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಪಾತ್ರಕ್ಕಾಗಿ ಭೂಮಿ ಶೆಟ್ಟಿ ಅಧಿಕ ಶ್ರಮ ವಹಿಸಿದ್ದಾರೆ. ಇದು ಭೂಮಿ ಶೆಟ್ಟಿ ಅವರ ವೃತ್ತಿ ಬದುಕಿಗೆ ಹೊಸ ಮೈಲುಗಲ್ಲು ಆಗುವ ಸಾಧ್ಯತೆ ಹೆಚ್ಚಿದೆ.

  ದೊಡ್ಮನೆ ಹುಡ್ಗ ಚಿತ್ರಕ್ಕೆ 6 ವರ್ಷಗಳ ಸಂಭ್ರಮ; ಅಬ್ಬಬ್ಬಾ ಈ ಚಿತ್ರ ಮಾಡಿದ್ದ ದಾಖಲೆ ಒಂದೆರಡಲ್ಲ!ದೊಡ್ಮನೆ ಹುಡ್ಗ ಚಿತ್ರಕ್ಕೆ 6 ವರ್ಷಗಳ ಸಂಭ್ರಮ; ಅಬ್ಬಬ್ಬಾ ಈ ಚಿತ್ರ ಮಾಡಿದ್ದ ದಾಖಲೆ ಒಂದೆರಡಲ್ಲ!

  ಚಿತ್ರದ ಶೀರ್ಷಿಕೆಯೇ ಹೇಳುವಂತೆ ಕೆಂಡದ ಸೆರಗು ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದೆ. ಮಹಿಳೆಯ ಮೇಲೆ ಆಗುತ್ತಿರುವ ಶೋಷಣೆಯನ್ನು ಮಹಿಳೆಯರು ಸಮಾಜವನ್ನು ಎದುರಿಸಬೇಕಾದ ರೀತಿ ಹಾಗೂ ಮಹಿಳಾ ಹಕ್ಕುಗಳ ಮೇಲೆ ಚಿತ್ರದ ಕತೆ ಸುತ್ತಲಿದ್ದು, ಒಂದು ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡುವ ಪ್ರಯತ್ನವನ್ನು ಚಿತ್ರತಂಡ ಮಾಡುತ್ತಿದೆ.

  ಇನ್ನು ಕೆಂಡದ ಸೆರಗು ಚಿತ್ರಕ್ಕೆ ಕೊಟ್ರೇಶ್ ಗೌಡ ಜೆ.ಎಸ್.ಎಸ್.ಕಂಬೈನ್ಸ್ ಅಡಿಯಲ್ಲಿ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಯಶ್ ಶೆಟ್ಟಿ, ವರ್ಧನ್, ಶೋಭಿತ, ಪ್ರತಿಮಾ, ಮೋಹನ್, ಅರ್ಚನ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  English summary
  Bigg boss season 7 contestant Bhoomi Shetty starrer Kendada Seragu movie Motion Poster Release.
  Saturday, October 1, 2022, 11:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X