ನಾಳೆ ತೆರೆಗೆ ಬರ್ತಿದೆ 'ಭೂತಃಕಾಲ' ಸಿನಿಮಾ
'ಗುಮ್ಮ ಬರುವನಮ್ಮಾ...' ಹಾಡಿನ ಮೂಲಕ ಈಗಾಗಲೇ ಸುದ್ದಿ ಮಾಡಿರುವ 'ಭೂತಃಕಾಲ' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಸ್ಯಾಂಡಲ್ ವುಡ್ ಕಲಾವಿದರು ಮೆಚ್ಚಿದ ಈ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ.
ಭೂತಃಕಾಲ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದು, ಸಚಿನ್ ಬಾದ ಅವರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಆನಂದ್ ಗಣೇಶ್, ರಕ್ಷಿತಾ ಬಂಗೇರಾ ಹಾಗೂ ಅನನ್ಯ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ ಆಡಿಯೋ ಸಂಸ್ಥೆ ಆಡಿಯೋ ಹಕ್ಕು ಖರೀದಿಸಿದೆ. ಹಂಸ ಶ್ರೀಕಾಂತ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.
ಟೆನ್ನಿಸ್ ಕೃಷ್ಣ, ವಿಶ್ವ, ಹರೀಶ್ ರಾವ್, ರಮೇಶ್ ನಾಯಕ್, ಶ್ರೀನಿವಾಸ್ ಪ್ರಭು, ಅರುಣ್ ಹೀಗೆ ಸಾಕಷ್ಟು ಹೆಸರು ಮಾಡಿರುವ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಪ್ರಮೋದ್ ಸೂರ್ಯ ಸಂಗೀತ ನೀಡಿದ್ದು, ಚಿತ್ರದಲ್ಲಿ ಆರು ಹಾಡುಗಳಿವೆ. ವಿಜಯಪ್ರಕಾಶ್, ಅನನ್ಯ ಭಟ್, ಅನುರಾಧ ಭಟ್, ಕಪಿಲ್ ನಾಯರ್ ಹಾಡಿಗೆ ಧ್ವನಿ ನೀಡಿದ್ದಾರೆ. ನಾಳೆ ಮೇನಕಾ ಚಿತ್ರಮಂದಿರ ಸೇರಿದಂತೆ ರಾಜ್ಯಾದಂತ್ಯ ಚಿತ್ರ ಬಿಡುಗಡೆಯಾಗುತ್ತಿದೆ.


Click it and Unblock the Notifications











