ಚೇತನ್-ಭುವನ್ ಗೌಡ ನಡುವೆ ವೈಮನಸ್ಸು ಇಲ್ಲ.! ಎಲ್ಲವೂ ಸುಳ್ಳು ಸುದ್ದಿ.!

'ಬಹದ್ದೂರ್' ಹಾಗೂ 'ಭರ್ಜರಿ' ಅಂತಹ ಹಿಟ್ ಸಿನಿಮಾಗಳನ್ನು ಕೊಟ್ಟ ಚೇತನ್ ಕುಮಾರ್ ಇದೀಗ ರೋರಿಂಗ್ ಸ್ಟಾರ್ ಶ್ರೀಮುರಳಿಗಾಗಿ 'ಭರಾಟೆ' ಚಿತ್ರ ಮಾಡುತ್ತಿದ್ದಾರೆ.

ಇತ್ತ ಛಾಯಾಗ್ರಾಹಕ ಭುವನ್ ಗೌಡ ತನ್ನದೇ ಆದ ಛಾಪು ಮೂಡಿಸಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ಕ್ಯಾಮರಾ ಮೂಲಕ ಕೈಚಳಕ ತೋರುವ ಭುವನ್ ಗೌಡಗೆ ಇತ್ತೀಚೆಗೆ ಗಾಂಧಿನಗರದಲ್ಲಿ ಡಿಮ್ಯಾಂಡ್ ಕೂಡ ಜಾಸ್ತಿ ಆಗಿದೆ.

'ಕೆ.ಜಿ.ಎಫ್' ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿರುವ ಭುವನ್ ಗೌಡ 'ಭರಾಟೆ' ಚಿತ್ರಕ್ಕೂ ಛಾಯಾಗ್ರಾಹಕರಾಗಿ ಆಯ್ಕೆ ಆಗಿದ್ದರು. 'ಭರಾಟೆ' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿರುವಾಗಲೇ, ಚಿತ್ರದಿಂದ ಭುವನ್ ಗೌಡ ಹೊರಗೆ ಬಂದಿದ್ದಾರೆ ಎಂದು ಸುದ್ದಿ ಆಗಿದೆ. ಅದಕ್ಕೆ ಕಾರಣ ನಿರ್ದೇಶಕ ಚೇತನ್ ಜೊತೆಗಿನ ಮುನಿಸು ಎಂಬ ಗುಸುಗುಸು ಹಬ್ಬಿದೆ.

ಈ ಗಾಸಿಪ್ ಬಗ್ಗೆ ಸ್ವತಃ ನಿರ್ದೇಶಕ ಚೇತನ್ ಕುಮಾರ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದೆ ಓದಿರಿ...

ವೈಮನಸ್ಸು ಇಲ್ಲ.!

ವೈಮನಸ್ಸು ಇಲ್ಲ.!

''ಭುವನ್ ಗೌಡ ಹಾಗೂ ನಾನು ತುಂಬಾ ಕ್ಲೋಸ್ ಫ್ರೆಂಡ್ಸ್. ನಮ್ಮಿಬ್ಬರ ನಡುವೆ ವೈಮನಸ್ಸು ಇಲ್ಲ. ಭುವನ್ ಗೌಡಗೆ ಬೇರೆ ಕಮ್ಮಿಟ್ಮೆಂಟ್ ಇದ್ದ ಕಾರಣ 'ಭರಾಟೆ' ಚಿತ್ರದಿಂದ ಹೊರಗೆ ಬಂದಿದ್ದಾರೆ'' ಅಂತಾರೆ ನಿರ್ದೇಶಕ ಚೇತನ್.

'ಕೆ.ಜಿ.ಎಫ್' ಡಿ.ಐ ಕೆಲಸ ಪೆಂಡಿಂಗ್.!

'ಕೆ.ಜಿ.ಎಫ್' ಡಿ.ಐ ಕೆಲಸ ಪೆಂಡಿಂಗ್.!

ಎರಡು ವರ್ಷಗಳಿಂದ 'ಕೆ.ಜಿ.ಎಫ್' ಚಿತ್ರಕ್ಕಾಗಿ ಭುವನ್ ಗೌಡ ದುಡಿದಿದ್ದಾರೆ. 'ಕೆ.ಜಿ.ಎಫ್' ಚಿತ್ರದ ಡಿ.ಐ ಕೆಲಸ ಇನ್ನೂ ಕಂಪ್ಲೀಟ್ ಆಗಿಲ್ಲ. ಡಿ.ಐ ಸರಿಯಾಗಿ ಆಗಬೇಕು ಅಂದ್ರೆ ಕ್ಯಾಮರಾಮ್ಯಾನ್ ಇರಲೇಬೇಕು. ಕೆ.ಜಿ.ಎಫ್ ಬಿಗ್ ಬಜೆಟ್ ಸಿನಿಮಾ ಬೇರೆ. ಹೀಗಾಗಿ, ಯಾವುದೇ ತೊಂದರೆ ಆಗುವುದು ಬೇಡ ಅಂತ ಭುವನ್ ಗೌಡ ರನ್ನ ಕಳುಹಿಸಿಕೊಟ್ವಿ ಅಂತಾರೆ ನಿರ್ದೇಶಕ ಚೇತನ್.

ಗಲಾಟೆ ಇಲ್ಲ

ಗಲಾಟೆ ಇಲ್ಲ

''ಭುವನ್ ಗೌಡ ಹಾಗೂ ನಾನು ಚಿತ್ರರಂಗದಲ್ಲಿ ತುಂಬಾ ಕಷ್ಟ ಪಟ್ಟಿದ್ದೀವಿ. ನಮ್ಮಿಬ್ಬರ ನಡುವೆ ಯಾವ ಗಲಾಟೆಯೂ ಆಗಿಲ್ಲ. ಇವೆಲ್ಲ ಸುಳ್ಳು ಸುದ್ದಿ'' ಎಂದು ಸ್ಪಷ್ಟ ಪಡಿಸುತ್ತಾರೆ ನಿರ್ದೇಶಕ ಚೇತನ್.

ಭುವನ್ ಜಾಗಕ್ಕೆ 'ದಿ ವಿಲನ್' ಕ್ಯಾಮರಾಮ್ಯಾನ್

ಭುವನ್ ಜಾಗಕ್ಕೆ 'ದಿ ವಿಲನ್' ಕ್ಯಾಮರಾಮ್ಯಾನ್

'ಭರಾಟೆ' ಚಿತ್ರತಂಡಕ್ಕೆ ಸದ್ಯ 'ದಿ ವಿಲನ್' ಕ್ಯಾಮರಾಮ್ಯಾನ್ ಗಿರೀಶ್.ಆರ್.ಗೌಡ ಎಂಟ್ರಿಕೊಟ್ಟಿದ್ದಾರೆ. ಡಬಲ್ ಯೂನಿಟ್ ಚಿತ್ರೀಕರಣ ನಡೆಯುವಾಗ, ಭುವನ್ ಗೌಡ ಕೂಡ ನಮ್ಮ ತಂಡ ಸೇರಿಕೊಳ್ಳುತ್ತಾರೆ ಅಂತಾರೆ ಡೈರೆಕ್ಟರ್ ಚೇತನ್.

More from Filmibeat

English summary
Bhuvan Gowda out, 'The Villain' Cinematographer Girish Gowda enters to Srimurali starrer 'Bharaate' set.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X