For Quick Alerts
  ALLOW NOTIFICATIONS  
  For Daily Alerts

  ಭುವನ್, ಹರ್ಷಿಕಾ ಪೂಣಚ್ಚ ವತಿಯಿಂದ ಆಕ್ಸಿಜನ್, ಫ್ರೀ ಆಟೋ ವ್ಯವಸ್ಥೆ

  |

  ಕೊರೊನಾ ವೈರಸ್ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರ ಸಹಾಯಕ್ಕೆ ನಿಂತಿರುವ ನಟ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಮತ್ತೊಂದು ಮಹತ್ವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

  ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ, ಆರ್ಥಿಕ ಸಂಕಷ್ಟದಿಂದ ರೇಷನ್ ಇಲ್ಲದೇ ಒದ್ದಾಡುತ್ತಿರುವವರಿಗಾಗಿ ಭುವನ್ ಪೊನ್ನಣ್ಣ ಫೌಂಡೇಶನ್ ಮೂಲಕ ಉಚಿತ ಆಕ್ಸಿಜನ್ ಮತ್ತು ಆಟೋ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ರೇಷನ್, ಔಷಧಿಗಳನ್ನು ಸಹ ಒದಗಿಸಲಾಗುತ್ತದೆ.

  ಈ ಅಭಿಯಾನಕ್ಕೆ ಕರ್ನಾಟಕ ಆರೋಗ್ಯ ಸಚಿವ ಡಾ ಸುಧಾಕರ್ ಚಾಲನೆ ನೀಡಿ ಭುವನ್-ಹರ್ಷಿಕಾ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

  ತುರ್ತು ಪರಿಸ್ಥಿತಿಯಲ್ಲಿ ಸಾರಿಗೆ ಅಥವಾ ಆಂಬುಲೆನ್ಸ್ ಸಿಗದೇ ಕಷ್ಟಪಡುತ್ತಿರುವ ಜನರಿಗೆ ನೆರವಾಗಲು ನಾಲ್ಕೈದು ಆಟೋಗಳು ನಗರದಲ್ಲಿ ಕೆಲಸ ಮಾಡಲಿದೆ. ಇದರ ಜೊತೆಗೆ ಆಕ್ಸಿಜನ್ ಸಿಗದೆ ಸಾವು-ಬದುಕಿಗಾಗಿ ಕಷ್ಟಪಡುವವರಿಗಾಗಿ ಆಕ್ಸಿಜನ್ ಬಸ್ ವ್ಯವಸ್ಥೆ ಮಾಡಲಾಗಿದೆ.

  ಇದಕ್ಕೂ ಮುಂಚೆ ಭುವನ್ ಪೊನ್ನಣ್ಣ ಹೆಲ್ಫ್‌ಲೈನ್ ಆರಂಭಿಸಿದ್ದರು. ಸಹಾಯ ಬೇಕು ಅಂದ್ರೆ ಕಾಲ್ ಮಾಡಿ ಎಂದು ಖಾಸಗಿ ನಂಬರ್ ಕೊಟ್ಟಿದ್ದರು. ಇದರಿಂದ ದಿನಕ್ಕೆ 3-4 ಸಾವಿರ ಕಾಲ್ ಬರಲು ಶುರುವಾಯ್ತು. ನಂತರ, ಅದಕ್ಕಾಗಿ ತಂಡವೊಂದನ್ನು ರಚಿಸಿ ಅನೇಕರಿಗೆ ಸಹಾಯ ಮಾಡಿದ್ದಾರೆ.

  ಇದೀಗ, ಉಚಿತ ಆಟೋ, ಆಕ್ಸಿಜನ್ ಬಸ್ ವ್ಯವಸ್ಥೆ ಮಾಡಿ ಜನರಿಗೆ ಮತ್ತಷ್ಟು ಅನುಕೂಲ ಮಾಡಿದ್ದಾರೆ ಭುವನ್ ಪೊನ್ನಣ್ಣ.

  ಅಂದ್ಹಾಗೆ, ಭುವನ್ ಮತ್ತು ಹರ್ಷಿಕಾ ಕೊರೊನಾ ಸಂದರ್ಭದಲ್ಲಿ ಮಾತ್ರವಲ್ಲ, ಇದಕ್ಕೂ ಮುಂಚೆ ಪ್ರವಾಹ ಉಂಟಾದ ವೇಳೆಯಲ್ಲೂ ಹಲವರು ರೀತಿ ನೆರವು ನೀಡಿದ್ದರು. ಖುದ್ದು ಕೊಡಗು, ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿ ಅಲ್ಲಿನ ಜನರಿಗೆ ಸಹಾಯ ಮಾಡಿದ್ದರು.

  English summary
  Bigg Boss kannada fame Bhuvan Ponnanna and harshika poonacha has starts Free Oxygen and Auto service.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X