ಚೆನ್ನೈನ ಬೀದಿ ಬೀದಿ ಅಲೆಯುತ್ತಿದ್ದ ಹುಚ್ಚ ವೆಂಕಟ್ ಸಿಕ್ಕಿದ್ದಾರೆ

Recommended Video

ತಮಿಳುನಾಡಿನಲ್ಲಿ ಅಲೆದಾಡುತ್ತಿರುವ ಹುಚ್ಚ ವೆಂಕಟ್..? | Huccha Venkat | FILMIBEAT KANNADA

ಕೊಳಕು ಬಟ್ಟೆ, ಕಾಲಲ್ಲಿ ಚಪ್ಪಲಿ ಇಲ್ಲ, ತಾನೆಲ್ಲಿದ್ದೀನಿ ಎನ್ನುವ ಅರಿವೆ ಇಲ್ಲದೆ ಚೆನ್ನೈನ ಬೀದಿ ಬೀದಿ ಅಲೆಯುತ್ತಿದ್ದಾರೆ ಹುಚ್ಚ ವೆಂಕಟ್. ಒಂದು ಸಮಯದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿ ಖ್ಯಾತಿಗಳಿಸಿ ನಂತರ ಚುನಾವಣೆಯಲ್ಲೂ ಸ್ಪರ್ಧಿಸಿ ಸದಾ ಪ್ರಚಾರದಲ್ಲಿರುದ್ದ ಹುಚ್ಚ ವೆಂಕಟ್ ಈಗ ಎಲ್ಲಿದ್ದಾರೆ ಏನ್ಮಾಡುತ್ತಿದ್ದಾರೆ ಎನ್ನುವುದು ಗೊತ್ತಿರಲಿಲ್ಲ.

ಆಗಾಗ ಕಿರಿಕ್ ಮಾಡಿಕೊಂಡು ಬೆಂಗಳೂರಿನ ಬೀದಿಗಳಯಲ್ಲಿ ಹೊಡೆದಾಟಕ್ಕೆ ಇಳಿಯುತ್ತಿದ್ದ ಹುಚ್ಚ ವೆಂಕಟ್ ಸದಾ ಸುದ್ದಿಯಲ್ಲಿ ಇರುತ್ತಿದ್ದರು. ಹೇಗೊ ತಮ್ಮ ಜೀವನವನ್ನು ಸಾಗಿಸಿಕೊಂಡು ಹೋಗುತ್ತಿದ್ದ ಹುಚ್ಚು ವೆಂಕಟ್ ಕಳೆದ ಕೆಲವು ತಿಂಗಳಿಂದ ಸದ್ದು ಸುದ್ದಿ ಇರಲಿಲ್ಲ.

ರಾಂಧವ ಚಿತ್ರತಂಡದ ಕಣ್ಣಿಗೆ ಬಿದ್ದ ವೆಂಕಟ್

ರಾಂಧವ ಚಿತ್ರತಂಡದ ಕಣ್ಣಿಗೆ ಬಿದ್ದ ವೆಂಕಟ್

ಆದ್ರೀಗ ಮಾಸಿದ ಬಟ್ಟೆ, ಚಪ್ಪಲಿ ಇಲ್ಲದೆ ಓಡಾಡುತ್ತಿರುವ ಹುಚ್ಚವೆಂಕಟ್ ರಾಂಧವ ಚಿತ್ರತಂಡದ ಕಣ್ಣಿಗೆ ಬಿದ್ದಿದ್ದಾರೆ. ಯುಎಫ್ ಓ ಕ್ಯೂಬ್ ಅಪ್ ಲೌಡ್ ವಿಚಾರವಾಗಿ ಚೆನ್ನೈಗೆ ತೆರೆಳಿದ್ದ 'ರಾಂಧವ' ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಿಗೆ ವೆಂಕಟ್ ಕಾಣಿಸಿಕೊಂಡಿದ್ದಾರೆ. ಹುಚ್ಚವೆಂಕಟ್ ರನ್ನು ಮಾತನಾಡಿಸಲು ಹೋದರೆ ಯಾವುದೆ ಪ್ರತಿಕ್ರಿಯೆ ನೀಡದೆ ಪರಿಚಯ ಇಲ್ಲದ ಹಾಗೆ ಹೋಗಿದ್ದಾರೆ.

ವಿಡಿಯೋ ಮಾಡಿದ್ದ ಚಿತ್ರತಂಡ

ವಿಡಿಯೋ ಮಾಡಿದ್ದ ಚಿತ್ರತಂಡ

ರಾಂಧವ ಚಿತ್ರದ ನಿರ್ದೇಶಕ ಸುನೀಲ್ ಆಚಾರ್ಯ ಮತ್ತು ಸ್ನೇಹತರು ಚೆನ್ನೈನಲ್ಲಿ ಅಲೆದಾಡುತ್ತಿರುವ ಹುಚ್ಚ ವೆಂಕಟ್ ವಿಡಿಯೋ ಮಾಡಿ ನಟ ಭುವನ್ ಪೊನ್ನಣ್ಣಗೆ ಕಳುಹಿಸಿಕೊಟ್ಟಿದ್ದಾರೆ. ಈ ವಿಡಿಯೋ ನೋಡಿದ ಭುವನ್ ಮನ ಕರಗಿ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಶೇರ್ ಮಾಡಿ "ದಯವಿಟ್ಟು ಕುಟುಂಬದವರಿಗೆ ವಿಷಯ ಮುಟ್ಟಲಿ ಅವರನ್ನು ಕರೆತರುವ ಪ್ರಯತ್ನ ಮಾಡಲಿ" ಎಂದು ಮನವಿ ಮಾಡಿಕೊಂಡಿದ್ದರು.

ರಾಂಧವ ಟೀಂಗೆ ಸಿಕ್ಕಿದ್ದಾರೆ ವೆಂಕಟ್

ರಾಂಧವ ಟೀಂಗೆ ಸಿಕ್ಕಿದ್ದಾರೆ ವೆಂಕಟ್

ರಾಂಧವ ಚಿತ್ರತಂಡ ಕೊನೆಗು ಹುಚ್ಚವೆಂಕಟ್ ಅನ್ನು ರಕ್ಷಿಸಿ ಅವರು ಕರೆದುಕೊಂಡು ಹೋಗಿದ್ದಾರೆ. ಚೆನ್ನೈನ ವಡಪಲನಿಯಲ್ಲಿ ಅಲೆದಾಡುತ್ತಿದ್ದ ಹುಚ್ಚವೆಂಕಟ್ ರನ್ನ ಕರೆದುಕೊಂಡು ಹೋಗಿ, ಸಧ್ಯಕ್ಕೆ ವಸತಿ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ನೋಡಿದ್ರೆ ಗುರ್ ಎನ್ನುತ್ತಿದ್ದ ಹುಚ್ಚ ವೆಂಕಟ್ ರನ್ನು ಚಿತ್ರತಂಡ ಭಯದಿಂದನೆ ಮಾತನಾಡಿಸಿ ಕರೆದುಕೊಂಡು ಹೋಗಿ ಊಟ ಕೊಡಿಸಿದ್ದಾರೆ.

ಚೆನ್ನೈನಿಂದ ಕರೆತರಲು ಮನವಿ

ಚೆನ್ನೈನಿಂದ ಕರೆತರಲು ಮನವಿ

ಭುವನ್ ಮಾಡಿಕೊಂಡಿದ್ದ ಮನವಿಯಂತೆ ಚಿತ್ರತಂಡ ಹುಚ್ಚ ವೆಂಕಟ್ ಅನ್ನು ಹುಡುಕಿ ಅವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸದ್ಯ ಚೆನ್ನೈನಲ್ಲಿರುವ ಹುಚ್ಚ ವೆಂಕಟ್ ಅನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ತಜ್ಞರ ಬಳಿ ತೋರಿಸಬೇಕು, ಯಾರಾದರು ಸಹಾಯ ಮಾಡಿ ಎಂದು ವೆಂಕಟ್ ಹುಡುಕಿದವರು ಕೇಳಿಕೊಳ್ಳುತ್ತಿದ್ದಾರೆ. ಹುಚ್ಚ ವೆಂಕಟ್ ಹೀಗೆ ಅಲೆದಾಡುವುದು ಹೊಸದೇನಲ್ಲ ಆದ್ರೆ ಚೆನ್ನೈನಲ್ಲಿ ಈ ರೀತಿ ಕಾಣಿಸಿಕೊಂಡಿರುವುದು ಇದೆ ಮೊದಲು.

More from Filmibeat

English summary
Bhuvan Ponnanna Starrer Randhawa film team has got a Huccha Venkat. Huccha Venkat is Wandering the streets of Chennai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X