»   » 'ಬಿಗ್ ಬಾಸ್' ನಂತರ ಭುವನ್ ರಿಜೆಕ್ಟ್ ಮಾಡಿದ ಕಥೆಗಳೆಷ್ಟು?

'ಬಿಗ್ ಬಾಸ್' ನಂತರ ಭುವನ್ ರಿಜೆಕ್ಟ್ ಮಾಡಿದ ಕಥೆಗಳೆಷ್ಟು?

Posted By:
Subscribe to Filmibeat Kannada
Bhuvan ponnanna upcomming `Randhawa' movie poster and teaser is out | Filmibeat Kannada

'ಬಿಗ್ ಬಾಸ್ ಕನ್ನಡ-4' ನಂತರ ನಟ ಭುವನ್ ಪೊನ್ನಣ್ಣ ಯಾವ ಸಿನಿಮಾ ಮಾಡ್ತಿದ್ದಾರೆ. ಎಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಆದ್ರೆ, ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಬಂದ ಆಫರ್ ಗಳನ್ನೆಲ್ಲಾ ರಿಜೆಕ್ಟ್ ಮಾಡುತ್ತಿದ್ದ ಭುವನ್ ಈಗೊಂದು ಹೊಸ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಈ ಚಿತ್ರದ ಹೆಸರು 'ರಾಂಧವ'. 'ರಾಂಧವ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ಕೂಡ ಬಿಡುಗಡೆಯಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ಈ ಸಿನಿಮಾ 2017 ರಿಂದ 1887 ರ ಕಾಲಘಟ್ಟಕ್ಕೆ ಪ್ರೇಕ್ಷಕರನ್ನ ಕರೆದುಕೊಂಡು ಹೋಗಲಿದೆ.

Bhuvan Ponnanna starrer Randhawa teaser launched

ಈ ಚಿತ್ರಕ್ಕೆ ಸುನೀಲ್‌ ಎಸ್‌. ಆಚಾರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದು ಮೂರು ತಲೆಮಾರುಗಳ ಕಥೆಯಾಗಿದ್ದು, ಆಕ್ಷನ್, ಥ್ರಿಲ್ಲರ್‌, ಸಸ್ಪೆನ್ಸ್ ಹಾಗೂ ಪ್ರೇಮಕಥೆ ಎಲ್ಲವೂ ಈ ಚಿತ್ರದಲ್ಲಿದೆ. ಶೇ.20ರಷ್ಟು ಕಂಪ್ಯೂಟರ್ ಗ್ರಾಫಿಕ್ಸ್‌ ಬಳಸಲಾಗುತ್ತಿದೆಯಂತೆ.

ಅಂದ್ಹಾಗೆ, 'ಬಿಗ್‌ ಬಾಸ್‌' ಮನೆಯಿಂದ ಹೊರಬಂದ ಬಳಿಕ ಭುವನ್ ಒಟ್ಟು 11 ಲವ್‌ ಸ್ಟೋರಿಗಳನ್ನು ಕೇಳಿದ್ದಾರಂತೆ. ಎಲ್ಲವೂ ಒಂದೇ ರೀತಿ ಇದ್ದಿದ್ದರಿಂದ ತಿರಸ್ಕರಿಸಿ, ಈ ಚಿತ್ರದ ಕಥೆ ವಿಭಿನ್ನ ಅನಿಸಿದ್ದರಿಂದ ನಟಿಸಲು ಒಪ್ಪಿಕೊಂಡಿದ್ದಾರಂತೆ.

ಚಿತ್ರದಲ್ಲಿ ಭುವನ್ ಗೆ ಇಬ್ಬರು ನಾಯಕಿಯರು ಇರಲಿದ್ದಾರೆ. ಒಬ್ಬರು ಶ್ರೀಯಾ ಅಂಚನ್ ನೃತ್ಯಗಾರ್ತಿಯಾಗಿ ನಟಿಸಲಿದ್ದಾರೆ. ಇನ್ನೊಬ್ಬ ನಾಯಕಿ ಇನ್ನೂ ಅಂತಿಮವಾಗಿಲ್ಲ. ಇನ್ನುಳಿದಂತೆ ಜಹಾಂಗೀರ್, ಲಕ್ಷೀ ಹೆಗಡೆ, ಪ್ರದೀಪ್, ದಯಾನಂದ, ಕುರಿಪ್ರತಾಪ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಗಾಯಕನಾಗಿ ಗುರ್ತಿಸಿಕೊಂಡಿರುವ ಶಶಾಂಕ್ ಶೇಷಗಿರಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ರಾಜಶಿವಶಂಕರ ಛಾಯಾಗ್ರಹಣ ರಾಂಧವನಿಗಿದೆ.

English summary
Bhuvan Ponnanna of 'Bigg Boss Kannada' fame starrer Kannada Film 'Randhawa' poster and teaser is out. The Movie directed by Sunil.S.Acharya

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada