ಟೀಸರ್: ಚಿತ್ರದುರ್ಗ ಕೋಟೆ ಕಥೆ ಹೇಳಿದ 'ಬಿಚ್ಚುಗತ್ತಿ'
'ಬಿಚ್ಚುಗತ್ತಿ' ಸಿನಿಮಾದ ಟೀಸರ್ ಇಂದು (ಜನವರಿ 25) ಬಿಡುಗಡೆಯಾಗಿದೆ. ಸಿನಿಮಾದ ಮೊದಲ ವಿಡಿಯೋ ತುಣುಕನ್ನು ಚಿತ್ರವನ್ನು ಹಂಚಿಕೊಂಡಿದ್ದು, ಗಮನ ಸೆಳೆದಿದೆ.
ಟೀಸರ್ ಮೇಕಿಂಗ್ ತುಂಬ ಚೆನ್ನಾಗಿದೆ. ಕ್ವಾಲಿಟಿಯಲ್ಲಿ ಯಾವುದೇ ರಾಜಿ ಇಲ್ಲದೆ ಅದ್ಭುತವಾಗಿ ದೃಶ್ಯಗಳನ್ನು ತೋರಿಸಿದ್ದಾರೆ. ಶರತ್ ಲೋಹಿತಾಶ್ವ ಧ್ವನಿಯ ಮೂಲಕ ಟೀಸರ್ ನಿರೂಪಣೆ ಸಾಗಿದೆ. ಟೀಸರ್ ನಲ್ಲಿ ಹುಲಿಯ ಗ್ರಾಫಿಕ್ಸ್ ಚೆನ್ನಾಗಿದೆ. 1 ನಿಮಿಷ 21 ಸೆಕೆಂಡ್ ಟೀಸರ್ ಕುತೂಹಲ ಹುಟ್ಟಿಸುತ್ತದೆ.
ಕೋಟೆ ನಾಡು ಚಿತ್ರದುರ್ಗದ ಇತಿಹಾಸವನ್ನು ಸಿನಿಮಾ ಹೇಳುತ್ತಿದೆ. ಡಾ ಬಿ ಎಲ್ ಬಿಲ್ ವೇಣು ಕಾದಂಬರಿ ಆಧಾರಿತ ಸಿನಿಮಾ ಇದಾಗಿದೆ. ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿದ್ದಾರೆ. ಬಹಳ ವರ್ಷಗಳ ನಂತರ ಮತ್ತೆ ಹಂಸಲೇಖ ಕಮ್ ಬ್ಯಾಕ್ ಮಾಡಿದ್ದಾರೆ.

ಡಿಂಗ್ರಿ ನಾಗರಾಜ್ ಪುತ್ರ ರಾಜ್ ವರ್ಧನ್ ಸಿನಿಮಾದ ನಾಯಕನಾಗಿದ್ದಾರೆ. ಅವರ ನಟನೆ ಗಮನ ಸೆಳೆದಿದೆ. ಹರಿಪ್ರಿಯಾ ಕೂಡ ಕುತೂಹಲ ಮೂಡುವಂತೆ ಮಾಡಿದ್ದಾರೆ. ಶರತ್ ಲೋಹಿತಾಶ್ವ, ಶಿವರಾಂ, ಶ್ರೀನಿವಾಸ ಮೂರ್ತಿ ಬಾಹುಬಲಿ ಖ್ಯಾತಿಯ ಪ್ರಭಾಕರ್ ಚಿತ್ರದಲ್ಲಿ ನಟಿಸಿದ್ದಾರೆ.
ಹರಿ ಸಂತೋಷ್ ಚಿತ್ರದ ನಿರ್ದೇಶನ ಮಾಡಿದ್ದಾರೆ. ಎರಡು ಭಾಗಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಗುರು ಪ್ರಶಾಂತ್ ಕ್ಯಾಮರಾ ವರ್ಕ್, ಭರತ್ ರಾಜ್ ಸಂಕಲನ ಮಾಡಿದ್ದಾರೆ.


Click it and Unblock the Notifications











