ಬೆಂಗಳೂರು ಫಿಲ್ಮ್ ಫೆಸ್ಟಿವಲ್‌ನಲ್ಲಿ ಸ್ಪರ್ಧೆಗಿಳಿದಿರುವ ಎಲ್ಲಾ ಚಿತ್ರಗಳ ಪಟ್ಟಿ ಇಲ್ಲಿದೆ; ಯಾವ ಚಿತ್ರ ಗೆಲ್ಲಲಿದೆ?

ಸಿನಿ ರಸಿಕರ ನೆಚ್ಚಿನ ಬೆಂಗಳೂರು ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನ 14ನೇ ಆವೃತ್ತಿ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಹಣ ಬಿಡುಗಡೆಯಾಗದೇ ಇದ್ದ ಕಾರಣ ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ಕಾರ್ಯಕ್ರಮ ಆರಂಭವಾಗುವುದು ಅನುಮಾನ ಎನ್ನಲಾಗಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಈ ಕಾರ್ಯಕ್ರಮಕ್ಕೆ ಹಣ ಬಿಡುಗಡೆಗೊಳಿಸಿದ್ದು, ಚಿತ್ರೋತ್ಸವವನ್ನು ಯಾವ ದಿನದಿಂದ ಯಾವ ದಿನದವರೆಗೆ ನಡೆಸಬೇಕು ಎಂಬುದನ್ನು ನಿಗದಿಪಡಿಸಲಾಗಿದೆ.

ಇದೇ ಮಾರ್ಚ್ 23ರಂದು ಸಂಜೆ ವಿಧಾನಸೌಧದ ಪೂರ್ವದ್ವಾರ ಮೆಟ್ಟಿಲುಗಳ ಮೇಲೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದ ಮೂಲಕ ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇನ್ನು ಈ ಬಾರಿಯ ಚಿತ್ರೋತ್ಸವದಲ್ಲಿ ಮೂರು ವಿಭಾಗಗಳಲ್ಲಿ ಚಿತ್ರಗಳನ್ನು ಪ್ರದರ್ಶಿಸಲಾಗಲಿದ್ದು, ಪ್ರತಿ ವಿಭಾಗದಲ್ಲಿಯೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಎಂಬ ಮೂರು ಪ್ರಶಸ್ತಿಗಳನ್ನು ನೀಡಲಾಗಲಿದೆ.

BIFFES 2023: List of Selected Movies for Bengaluru International Film Festival

ಕನ್ನಡ ಚಲನಚಿತ್ರಗಳು, ಭಾರತದ ಚಲನಚಿತ್ರಗಳು ಹಾಗೂ ಏಷಿಯನ್ ಚಲನಚಿತ್ರಗಳು ಎಂಬ ಮೂರು ವಿಭಾಗಗಳನ್ನು ಮಾಡಲಾಗಿದ್ದು, ಈ ವಿಭಾಗಗಳಲ್ಲಿ ಯಾವ ಯಾವ ಚಿತ್ರಗಳು ಭಾಗವಹಿಸಲಿವೆ ಎಂಬ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ..

ಕನ್ನಡ ವಿಭಾಗದಲ್ಲಿ ಭಾಗವಹಿಸಲಿರುವ ಚಿತ್ರಗಳು: 19.20.21, ಗಂಧದಗುಡಿ, ಗುರು ಶಿಷ್ಯರು, ಹದಿನೇಳೆಂಟು, ಕನಕ ಮಾರ್ಗ, ಕೊರಮ್ಮ, ಕುಬುಸ, ಮೇಡ್ ಇನ್ ಬೆಂಗಳೂರು, ನಾಲ್ಕೆ, ನಾನು ಕುಸುಮ, ಆರ್ಕೆಸ್ಟ್ರಾ ಮೈಸೂರು, ಫೋಟೊ, ಸ್ವಚ್ಛ ಕರ್ನಾಟಕ ಹಾಗೂ ವಿಜಯಾನಂದ.

BIFFES 2023: List of Selected Movies for Bengaluru International Film Festival

ಭಾರತದ ಚಿತ್ರಗಳ ವಿಭಾಗದಲ್ಲಿ ಸ್ಪರ್ಧೆಗಳಿಯಲಿರುವ ಚಿತ್ರಗಳು: ಮುಡುಗ ಭಾಷೆಯ ಆದಿವಾಸಿ, ಕನ್ನಡದ ಆರಾರಿರೋ, ಅನ್ನ, ಬೆಂಗಾಲಿಯ ಅಪರಾಜಿತೋ, ಸಂತಾಲಿಯ ಧಾತ್ರಿ ಲಾಟರ್ ರೆ ಹೋರೊ, ತಮಿಳಿನ ಗಾರ್ಗಿ, ಮಲಯಾಳಂನ ಜನ ಗಣ ಮನ, ಕನ್ನಡದ ಕೋಳಿ ಎಸ್ರು, ಕೊಡವ ಭಾಷೆಯ ಕೌಡಿಕಲಿ, ಕನ್ನಡದ ಮಾವು ಬೇವು, ಮಲಯಾಳಂನ ಪಲ್ಲೊಟ್ಟಿ ನೈಂಟೀಸ್ ಕಿಡ್ಸ್, ಬೋಡೊ ಭಾಷೆಯ ಸೈಫುಂಗ್, ಮಲಯಾಳಂನ ಸೌದಿ ವೆಳ್ಳಾಕ ಹಾಗೂ ಕನ್ನಡದ ತನುಜಾ ಚಿತ್ರಗಳು.

ಏಷಿಯನ್ ವಿಭಾಗದಲ್ಲಿ ಭಾಗವಹಿಸಲಿರುವ ಚಿತ್ರಗಳು: ಇಂಡೋನೇಷಿಯಾದ ಬಿಫೋರ್ ನವ್ ದೆನ್, ಇರಾನ್‌ನ ಬಿ ಮದರ್, ಇಸ್ರೇಲ್‌ನ ಹಬ್ಸೊರ ಅಲ್ ಪಿ ಯೆಹುದ, ಭಾರತದ ಇನ್, ಫಿಲಿಫೈನ್ಸ್‌ನ ಲಿಯೊನರ್ ವಿಲ್ ನೆವೆರ್ ಡೈ, ಜಪಾನ್‌ನ ಲವ್ ಲೈಫ್, ಶ್ರೀಲಂಕಾದ ಮುನ್ನೆಲ್, ಬಾಂಗ್ಲಾದೇಶದ ನಕ್ಷಿಕಥರ್ ಗೊಲ್ಪೊ, ಬಾಂಗ್ಲಾದೇಶದ ಪಾತಾಳ್‌ಘರ್, ಭಾರತದ ಸಿಂಗಲ್ ಮ್ಯಾನ್, ಭಾರತದ ಸ್ತಳಂ, ಭಾರತದ ವಾಲ್ವಿ, ಭಾರತದ ವಿರಾಟಪುರ ವೈರಾಗಿ ಹಾಗೂ ಇರಾನ್‌ನ ಜಂಗ್ ಎ ಜಹಾನಿ ಸೆವೊಮ್.

ಹೀಗೆ ಈ ಮೇಲ್ಕಂಡ ಮೂರು ವಿಭಾಗಗಳಲ್ಲಿಯೂ ತಲಾ 14 ಚಿತ್ರಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ ಯಾವ ಚಿತ್ರಗಳು ಗೆಲ್ಲಲಿವೆ ಎಂಬ ಕುತೂಹಲ ಮೂಡಿದೆ ಹಾಗೂ ಚರ್ಚೆಗಳೂ ಸಹ ಏರ್ಪಟ್ಟಿದೆ.

More from Filmibeat

English summary
BIFFES 2023: List of Selected Movies for Bengaluru International Film Festival. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X