Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದಕ್ಷಿಣ ನಟಿಯರ ಬಗ್ಗೆ 'ಕೀಳಾಗಿ' ಮಾತನಾಡಿದ 'ಬಿಗ್ ಬಾಸ್' ಸ್ಪರ್ಧಿ.!
Recommended Video

ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ದಕ್ಷಿಣದ ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹಲವು ನಟಿಯರಿದ್ದಾರೆ. ತಮ್ಮ ಅಭಿನಯ ಮೂಲಕ ಅಭಿಮಾನ ಗಳಿಸಿರುವ ನಾಯಕಿಯರಿದ್ದಾರೆ.
ಹೀಗಿರುವಾಗ, ಬಿಗ್ ಬಾಸ್ ಸ್ಪರ್ಧಿಯೊಬ್ಬರು ದಕ್ಷಿಣದ ನಟಿಯರ ಬಗ್ಗೆ ಹೀನಾಯವಾಗಿ ಮಾತಾನಾಡಿದ್ದಾರೆ. ಈ ಮೂಲಕ ಸೌತ್ ಇಂಡಸ್ಟ್ರಿಯನ್ನ ಅವಮಾನಿಸಿದ್ದಾರೆ.
ಅಷ್ಟಕ್ಕೂ, ದಕ್ಷಿಣ ನಾಯಕಿಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಆ ನಟಿ ಯಾರು? ಯಾಕೆ ಆ ನಟಿ ಹಾಗೆ ಮಾತನಾಡಿದ್ರು ಎಂದು ತಿಳಿದುಕೊಳ್ಳಲು ಮುಂದೆ ಓದಿ......

'ಬಿಗ್ ಬಾಸ್'ನಲ್ಲಿ ಕೆಟ್ಟ ಕಾಮೆಂಟ್ ಮಾಡಿದ ನಟಿ
ಬಿಗ್ ಬಾಸ್ ಹಿಂದಿಯ 11ನೇ ಅವೃತ್ತಿಯಲ್ಲಿ ಸ್ಪರ್ಧಿಯಾಗಿರುವ ಹೀನಾ ಖಾನ್ ಸೌತ್ ಹೀರೋಯಿನ್ ಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಇತರೆ ಸ್ಪರ್ಧಿಗಳ ಜೊತೆ ಮಾತನಾಡುವಾಗ ತಮ್ಮ ಬಗ್ಗೆ ಬಡಾಯಿ ಕೊಚ್ಚಿಕೊಂಡು, ಸೌತ್ ಸಿನಿಮಾಗಳ ಬಗ್ಗೆ ಅಪಮಾನ ಮಾಡಿದ್ದಾರೆ.

ಹೀನಾ ನೀಡಿದ ಹೀನಾಯ ಹೇಳಿಕೆ?
‘ದಪ್ಪಗಿರುವ ನಾಯಕಿಯರನ್ನ ದಕ್ಷಿಣ ಇಂಡಸ್ಟ್ರಿಯವರು ಹೆಚ್ಚು ಇಷ್ಟಪಡುತ್ತಾರೆ. ಹೀರೋಯಿನ್ ಸೀರೆ ಧರಿಸಿದಾಗ ಗುಂಡಾಗಿ ಕಾಣಬೇಕೆಂದು ಅಲ್ಲಿನ ನಿರ್ದೇಶಕರು ಹೇಳುತ್ತಾರೆ. ಇನ್ನು ಹೀರೋಯಿನ್ ಗಳು ಕೂಡ ಎಕ್ಸ್‌ಪೋಸಿಂಗ್ ಮಾಡಿ ಪ್ರೇಕ್ಷಕರನ್ನು ಆಕರ್ಷಿಸುತ್ತಾರೆ. ಯಾರು ಎಕ್ಸ್ ಪೋಸಿಂಗ್ ಮಾಡ್ತರೋ ಅಂಥವರನ್ನ ಜನ ಇಷ್ಟಪಡುತ್ತಾರೆ'' ಎಂದು ಹೇಳಿಕೆ ನೀಡಿದ್ದಾರೆ.

ಸ್ಟಾರ್ ನಟರ ಅಭಿಮಾನಿಗಳ ಬಗ್ಗೆ ಕಾಮೆಂಟ್
ದಕ್ಷಿಣ ಭಾರತದ ಸಿನಿಮಾದವರನ್ನು ಮಾತ್ರವಲ್ಲ, ಅಭಿಮಾನಿಗಳ ಬಗ್ಗೆಯೂ ಹಿನಾ ಕೀಳಾಗಿ ಮಾತನಾಡಿದ್ದಾರೆ. ‘'ಮಹೇಶ್ ಬಾಬು ಮತ್ತು ವಿಕ್ಟರಿ ವೆಂಕಟೇಶ್ ಅವರ ಅಭಿಮಾನಿಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ. ಭಾಷೆ ಗೊತ್ತಿಲ್ಲದ ನಾಯಕಿಯರು ಡೈಲಾಗ್ ಹೇಳುವ ಬದಲು, ನಟಿಸುವಾಗ ಒನ್ ಟು ತ್ರಿ ಫೋರ್ ಎಂದು ಹೇಳುತ್ತಾರೆ. ಆಮೇಲೆ ಅದಕ್ಕೆ ಡಬ್ಬಿಂಗ್ ಮಾಡಲಾಗುತ್ತೆ'' ಎಂದು ಕಾಲೆಳೆದಿದ್ದಾರೆ.

ದಕ್ಷಿಣದಿಂದ ಆಫರ್ ಬಂದಿತ್ತಂತೆ.!
ಇಷ್ಟೆಲ್ಲಾ ಮಾತನಾಡಿರೋ ಹೀನಾ ಖಾನ್ ಗೆ ದಕ್ಷಿಣದಿಂದ ಎರಡು ಸಿನಿಮಾ ಆಫರ್ ಬಂದಿತ್ತಂತೆ. ಆದ್ರೆ, ಒಪ್ಪಿಕೊಳ್ಳಲಿಲ್ಲವೆಂದು ಇತರೆ ಸ್ಪರ್ಧಿಗಳ ಬಳಿ ಬಡಾಯಿ ಕೊಚ್ಚಿಕೊಂಡಿದ್ದಾರೆ. ''ನನಗೆ ಎರಡು ಸಿನಿಮಾ ಆಫರ್ ಬಂದಿತ್ತು. ದಪ್ಪ ಆಗಬೇಕು ಎಂದು ನಿರ್ದೇಶಕರು ಹೇಳಿದರು. ಅದೇ ಕಾರಣಕ್ಕೆ ನಾನು ಒಪ್ಪಿಕೊಳ್ಳಲಿಲ್ಲ''- ಹೀನಾ ಖಾನ್, ಕಿರುತೆರೆ ನಟಿ

ಯಾರು ಈ ಹೀನಾ ಖಾನ್
ಬಾಲಿವುಡ್ ನ 'ಯೇ ರಿಷ್ಟಾ ಕ್ಯಾ ಕೆಹಲಾತಾ ಹೈ' ಧಾರಾವಾಹಿ ಹಾಗೂ ಹಲವು ಟಿವಿ ಶೋಗಳಲ್ಲಿ ಭಾಗವಹಿಸಿರುವ ಹೀನಾ ಖಾನ್ ಯಾವುದೇ ಸಿನಿಮಾ ಮಾಡಿಲ್ಲ. ಈಗ ಬಿಗ್ ಬಾಸ್ 11ನೇ ಆವೃತ್ತಿಯಲ್ಲಿ ಪಾಲ್ಗೊಂಡಿದ್ದಾರೆ.