ಎಲ್.ಕೆ.ಅಡ್ವಾಣಿ ಅವರನ್ನು ಭೇಟಿ ಮಾಡಿದ ಲಾರ್ಡ್ ಪ್ರಥಮ್
'ಬಿಗ್ ಬಾಸ್' ಪ್ರಥಮ್ ಮದುವೆ ಸುದ್ದಿ ಬಳಿಕ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಸದ್ಯ ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರನ್ನು ಪ್ರಥಮ್ ಭೇಟಿ ಮಾಡಿದ್ದಾರೆ.
ಪ್ರಥಮ್ ರಾಜಕೀಯಕ್ಕೆ ಬರುವ ಬಗ್ಗೆ ಕೆಲ ದಿನದ ಹಿಂದೆ ತಾನೇ ಹೇಳಿದ್ದರು. ಆದರೆ ಇದು ಯಾವುದೇ ರಾಜಕೀಯಕ್ಕೆ ಸಂಭಂದಿಸಿದ ಬೇಟಿ ಆಗಿಲ್ಲ. ನಿನ್ನೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ಹನುಮಾನ್ ತ್ರೀ ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಗೆ ಅಡ್ವಾಣಿ ಚಾಲನೆ ನೀಡಿದರು. ಈ ವೇಳೆ ಪ್ರಥಮ್ ಅಡ್ವಾಣಿ ಅವರನ್ನು ಬೇಟಿ ಮಾಡಿದ್ದಾರೆ.

ಪ್ರಥಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಡ್ವಾಣಿ ಜೊತೆಗಿನ ಫೋಟೋವನ್ನು ಹಾಕಿದ್ದಾರೆ. ವಿಶೇಷ ಅಂದರೆ ಇದೇ ಸಮಯದಲ್ಲಿ ಪ್ರಥಮ್ ಹೊಸ ಚಿತ್ರ 'ಬಿಲ್ಡಪ್' ಸಿನಿಮಾಗೆ ಅಡ್ವಾಣಿ ಕ್ಲಾಪ್ ಮಾಡಿದ್ದಾರೆ. ಇನ್ನು ''ನನ್ನ ಜೀವನದಲ್ಲಿ ನಾನ್ ಸಾಯೋದ್ರೊಳಗೆ ಒಮ್ಮೆ ಇವರನ್ನ ನೋಡ್ಬೇಕು ಅನ್ಕೊಂಡಿದ್ದೆ! ನನ್ನ ಸಿನಿಮಾದ ಕ್ಲಾಪ್ ಬೋರ್ಡ್ ಇವರಿಗೆ ಕೊಟ್ಟು ಆಶೀರ್ವಾದ ತಗೊಂಡು ಬಂದೆ.'' ಎಂದು ಪ್ರಥಮ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.


Click it and Unblock the Notifications











