For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಶೃತಿ ಪ್ರಕಾಶ್ ಈಗ ಸ್ಯಾಂಡಲ್ ವುಡ್ ನಾಯಕಿ

  By Pavithra
  |
  ಬಿಗ್ ಬಾಸ್ ಶೃತಿ ಪ್ರಕಾಶ್ ಈಗ ನಾಯಕಿ | FIlmibeat Kannada

  ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ತನ್ನ ಧ್ವನಿಯಿಂದಲೇ ಮೋಡಿ ಮಾಡಿದ್ದ ಗಾಯಕಿ ಹಾಗೂ ಮಾಡೆಲ್ ಶೃತಿ ಪ್ರಕಾಶ್. ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಅದೆಷ್ಟೋ ಕನ್ನಡ ನಿರ್ದೇಶಕರು ಈಕೆಯನ್ನ ಸಿನಿಮಾ ನಾಯಕಿಯನ್ನಾಗಿ ಮಾಡಿಕೊಳ್ಳಬೇಕೆಂದು ಯೋಚನೆ ಮಾಡಿದ್ದರು. ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಶೃತಿ ಅವರ ಕೈನಲ್ಲಿ ಯಾವುದೇ ಸಿನಿಮಾಗಳು ಇರಲಿಲ್ಲ.

  ಅಭಿನಯ ಹಾಗೂ ಗಾಯನದಲ್ಲಿ ಒಳ್ಳೆ ಹೆಸರು ಮಾಡಬೇಕು ಎನ್ನುವ ಹಂಬಲವನ್ನು ಹೊಂದಿದ್ದ ಶೃತಿ ಪ್ರಕಾಶ್ ಅವರಿಗೆ ಈಗ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ. ಆದರೆ ಶೃತಿ ಉತ್ತಮ ಸಿನಿಮಾಗಾಗಿ ಕಾದಿದ್ದು ಈಗ ಒಂದು ಒಳ್ಳೆ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

  ಇಂದು ಬೆಂಕಿಗೆ ಆಹುತಿಯಾದ 'ಬಿಗ್ ಬಾಸ್' ಮನೆ ಅಂದು ಹೇಗಿತ್ತು ನೆನಪಿದ್ಯಾ.? ಇಂದು ಬೆಂಕಿಗೆ ಆಹುತಿಯಾದ 'ಬಿಗ್ ಬಾಸ್' ಮನೆ ಅಂದು ಹೇಗಿತ್ತು ನೆನಪಿದ್ಯಾ.?

  'ಚಮಕ್' ಸಿನಿಮಾದಲ್ಲಿ ಸುನಿ ಜೊತೆಯಾಗಿ ಕೆಲಸ ಮಾಡಿದ್ದ ರಾಜ್ ಸೂರ್ಯ ನಿರ್ದೇಶನದ ಚೊಚ್ಚಲ ಸಿನಿಮಾಗೆ ಶೃತಿ ಪ್ರಕಾಶ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.ಹಾಗಾದರೆ ಶೃತಿ ಅಭಿನಯಿಸುತ್ತಿರುವ ಪಾತ್ರ ಯಾವುದು? ಶೃತಿ ಜೊತೆ ನಾಯಕನಾಗಿ ಯಾರು ಆಕ್ಟ್ ಮಾಡುತ್ತಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಮುಂದೆ ಓದಿ

  ಶೃತಿ ಪ್ರಕಾಶ್ ಈಗ ನಾಯಕಿ

  ಶೃತಿ ಪ್ರಕಾಶ್ ಈಗ ನಾಯಕಿ

  ಬಿಗ್ ಬಾಸ್ ನ ಸ್ಪರ್ಧಿ ಶೃತಿ ಪ್ರಕಾಶ್ ನಾಯಕಿಯಾಗಿ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತಮ್ಮ ಸೌಂದರ್ಯ ಹಾಗೂ ಸುಂದರವಾದ ಧ್ವನಿಯಿಂದ ಮನೆ ಮಾತಾಗಿದ್ದ ಶೃತಿ ಇನ್ನು ಕೆಲವೇ ದಿನಗಳಲ್ಲಿ ಬೆಳ್ಳಿ ತೆರೆ ಮೇಲೆ ಮಿಂಚಲಿದ್ದಾರೆ.

  ಲಂಬೋದರನಿಗೆ ಶೃತಿ ನಾಯಕಿ

  ಲಂಬೋದರನಿಗೆ ಶೃತಿ ನಾಯಕಿ

  'ಲಂಡನ್ ನಲ್ಲಿ ಲಂಬೋದರ' ಚಿತ್ರದಲ್ಲಿ ನವ ನಾಯಕ ಸಂತೋಷ್ ಜೊತೆ ಶೃತಿ ಹೀರೋಯಿನ್ ಆಗಿ ಆಕ್ಟ್ ಮಾಡುತ್ತಿದ್ದಾರೆ. ರಾಜ್ ಸೂರ್ಯ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ರಾಜ್ ಸೂರ್ಯ ಚಮಕ್ ಹಾಗೂ ಇನ್ನು ಅನೇಕ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಮೈ ಮಾಸ್ಟರ್ ಮೂವಿಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಲಿದೆ.

  ಹೊಸ ಗೆಟಪ್ ನಲ್ಲಿ ಶೃತಿ ಪ್ರಕಾಶ್

  ಹೊಸ ಗೆಟಪ್ ನಲ್ಲಿ ಶೃತಿ ಪ್ರಕಾಶ್

  ಗಾಯಕಿ ಹಾಗೂ ನಟಿ ಶೃತಿ ಪ್ರಕಾಶ್ 'ಲಂಡನ್ ನಲ್ಲಿ ಲಂಬೋದರ' ಚಿತ್ರದಲ್ಲಿ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇಷ್ಟು ದಿನ ನೋಡಿದ ಶೃತಿ ಅವರಿಗೂ ಸಿನಿಮಾದಲ್ಲಿ ನೋಡುವ ಶೃತಿ ಪ್ರಕಾಶ್ ಅವರಿಗೂ ಸಾಕಷ್ಟು ವ್ಯತ್ಯಾಸ ಇರಲಿದ್ಯಂತೆ.

  ಕಾಮಿಡಿ ಎಂಟರ್ಟೈನ್ಮೆಂಟ್ ಸಿನಿಮಾ

  ಕಾಮಿಡಿ ಎಂಟರ್ಟೈನ್ಮೆಂಟ್ ಸಿನಿಮಾ

  ಲಂಡನ್ ನಲ್ಲಿ ಲಂಬೋದರ ಚಿತ್ರದಲ್ಲಿ ಶೂಟಿಂಗ್ ಮಾರ್ಚ್ ನಲ್ಲಿ ಆರಂಭ ಆಗಲಿದೆ. ಕಾಮಿಡಿ ಫ್ಯಾಮಿಲಿ ಡ್ರಾಮಾ ಕಥೆಯನ್ನ ಹೊತ್ತು ತರುತ್ತಿರುವ ನಿರ್ದೇಶಕರು ಬೆಂಗಳೂರು ಹಾಗೂ ಲಂಡನ್ ನಲ್ಲಿ ಚಿತ್ರೀಕರಣ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ. ಪ್ರಣವ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

  English summary
  Kannada Big Boss contestant Singer Shruthi Prakash is acting in Kannada movie. Shruti Prakash has been chosen as the heroine of the 'London Nalli Lambodara' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X