Big Breaking: ನಿಖಿಲ್ ಮದುವೆ ಫಿಕ್ಸ್.. ಗೌಡರ ಮನೆ ಸೊಸೆಯಾಗ್ತಾರೆ ಬೆಂಗಳೂರಿನ ಹುಡುಗಿ!
Recommended Video
ನಟ ನಿಖಿಲ್ ಕುಮಾರ್ ಮದುವೆ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚಿಗಷ್ಟೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದ ನಿಖಿಲ್ ಕುಮಾರ್ ''ಶೀಘ್ರದಲ್ಲೇ ನಾನು ಮದುವೆಯಾಗುವ ಹುಡುಗಿ ಯಾರು ಎಂದು ತಿಳಿಸುವೆ'' ಎಂದಿದ್ದರು.
ಇದೀಗ ನಿಖಿಲ್ ಕುಮಾರ್ ಮದುವೆ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ಕ್ಕೆ ಆಪ್ತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆ ಸೊಸೆಯ ಬಗ್ಗೆ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.
ನಟಿ ರಚಿತಾ ರಾಮ್ ಹಾಗೂ ನಿಖಿಲ್ ಕುಮಾರ್ ನಡುವೆ ಪ್ರೀತಿ ಪ್ರೇಮ ನಡೆಯುತ್ತಿದೆ, ಇಬ್ಬರು ಮದುವೆಯಾಗುತ್ತಾರೆ ಎನ್ನುವ ಮಾತಿತ್ತು. ಆದರೆ, ನಿಖಿಲ್ ಮದುವೆ ಆಗುತ್ತಿರುವ ಹುಡುಗಿ ಬುಲ್ ಬುಲ್ ಬೆಡಗಿ ಅಲ್ಲ. ನಿಖಿಲ್ ಮದುವೆಯಾಗುವ ಹುಡುಗಿ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರಕ್ಕೆ ಸಂಬಂಧಪಟ್ಟವರಲ್ಲ.

ಸಿನಿಮಾ ಅಥವಾ ರಾಜಕೀಯ ಕ್ಷೇತ್ರದವರಲ್ಲ
ಒಂದು ಕಡೆ ನಿಖಿಲ್ ಕುಮಾರ್ ಕುಟುಂಬ ರಾಜಕೀಯದ ದೊಡ್ಡ ಹಿನ್ನಲೆ ಇದೆ. ಮತ್ತೊಂದು ಕಡೆ ನಿಖಿಲ್ ಸಿನಿಮಾ ನಟನಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರು ಮದುವೆಯಾಗುವ ಹುಡುಗಿ ಸಿನಿಮಾ ಅಥವಾ ರಾಜಕೀಯ ಕುಟುಂಬದವರಾಗಿರಬಹುದು ಎಂಬ ಸುದ್ದಿ ಇತ್ತು. ಆದರೆ, ಜಾಗ್ವರ್ ಹುಡುಗನ ಜೀವನಕ್ಕೆ ಕಾಲಿಡುತ್ತಿರುವ ಹುಡುಗಿ ಬೆಂಗಳೂರಿನ ಉದ್ಯಮಿಯೊಬ್ಬರ ಮಗಳು.

ಉದ್ಯಮಿಯೊಬ್ಬರ ದ್ವಿತೀಯ ಪುತ್ರಿ
ನಿಖಿಲ್ ಕುಮಾರ್ ಭಾವಿ ಮಾವ ಸಿನಿಮಾ ಅಥವಾ ರಾಜಕೀಯ ಕ್ಷೇತ್ರದಲ್ಲಿ ಇಲ್ಲ. ಅವರೊಬ್ಬ ಉದ್ಯಮಿ ಆಗಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರು ಮಕ್ಕಳ ಪೈಕಿ ಮೊದಲ ಮಗಳಿಗೆ ಮದುವೆ ಆಗಿದೆ. ಇದೀಗ ಎರಡನೇ ಮಗಳ ಮದುವೆ ತಯಾರಿಯಲ್ಲಿ ಆ ಕುಟುಂಬ ನಿರತವಾಗಿದೆ. ಏಪ್ರಿಲ್ ತಿಂಗಳಿನಲ್ಲಿ ವಿವಾಹ ಕಾರ್ಯಕ್ರಮ ನಿಗದಿಯಾಗಿದೆ.

ಎರಡು ಕುಟುಂಬಗಳ ನಡುವೆ ಮಾತುಕತೆಯಾಗಿದೆ
ನಿಖಿಲ್ ಕುಮಾರ್ ಕುಮಾರ್ ಜನವರಿ 22 ರಂದು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ಈ ದಿನವೇ ಎರಡು ಕುಟುಂಬಗಳ ನಡುವೆ ಮದುವೆ ಮಾತುಕತೆ ನಡೆದಿದೆ. ಹುಡುಗಿ ಮನೆಗೆ ನಿಖಿಲ್ ಕುಟುಂಬ ಭೇಟಿ ನೀಡಿದೆ. ಎರಡು ಕುಟುಂಬಗಳಿಗೆ ಪರಸ್ಪರ ಒಪ್ಪಿಗೆಯಾಗಿ, ಮದುವೆ ದಿನಾಂಕವನ್ನೂ ನಿಗದಿ ಮಾಡಿದ್ದಾರೆ. ಬೆಂಗಳೂರಿನಲ್ಲಿಯೇ ಮದುವೆ ನಡೆಯಲಿದೆ.

ನಿಖಿಲ್ ಹೇಳಿದ್ದ ಮಾತು
''ನಾನು ಮದುವೆ ಆಗುವ ಹುಡುಗಿ ಯಾರು ಅಂತ ಶೀಘ್ರದಲ್ಲಿ ಹೇಳುವೆ. ನಾನು ಮದುವೆ ಆಗುವ ಹುಡುಗಿಗೂ ಚಿತ್ರರಂಗಕ್ಕೂ ಸಂಬಂಧ ಇಲ್ಲ. ಆಕೆ ತುಂಬಾ ಸಿಂಪಲ್. ನಮ್ಮ ಸಂಸ್ಕೃತಿ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ'' ನನ್ನ ಮದುವೆ ಬಗ್ಗೆ ಅಪ್ಪ-ಅಮ್ಮ ಡಿಸೈಡ್ ಮಾಡುತ್ತಾರೆ. ಅಪ್ಪ-ಅಮ್ಮ ಏನು ಹೇಳ್ತಾರೋ, ಅದೇ ಫೈನಲ್'' ಎಂದು ಇತ್ತೀಚಿಗಷ್ಟೆ ನಿಖಿಲ್ ಹೇಳಿಕೆ ನೀಡಿದ್ದರು.


Click it and Unblock the Notifications











