ಜೇಮ್ಸ್ v/s RRR: ಹಿಂದೆ ಸರಿಯೋರು ಯಾರು?
ಸದ್ಯ ರಿಲೀಸ್ ದಿನಾಂಕದ ಮೂಲಕ ಸಾಕಷ್ಟು ಸುದ್ದಿ ಮಾಡುತ್ತಿರುವ ಸಿನಿಮಾ ಅಂದ್ರೆ ಅದು RRR. ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದಲ್ಲಿ 'ಆರ್‌ಆರ್‌ಆರ್' ಸಿನಿಮಾ ರೆಡಿಯಾಗಿದೆ. ಈ ಚಿತ್ರದಲ್ಲಿ ತೆಲುಗಿನ ಸೂಪರ್ ಸ್ಟಾರ್‌ಗಳಾದ ಜ್ಯೂ. ಎನ್‌ಟಿಆರ್ ಮತ್ತು ರಾಮ್ ಚರಣ್ ಇಬ್ಬರ ಕಾಂಬಿನೇಷನ್ ಇದೆ. ಈಗಾಗಲೇ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಜನರ ಕುತೂಹಲ ಹೆಚ್ಚಿಸಿದೆ.
Recommended Video
ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷದ ಆರಂಭದಲ್ಲಿ, ಜನವರಿ 7ರಂದೇ RRR ತೆರೆಗೆ ಬರಬೇಕಿತ್ತು. ಆದರೆ ಎಲ್ಲರಿಗೂ ಗೊತ್ತಿರುವ ಹಾಗೆ ಕೊರೋನಾ ಕಾರಣಕ್ಕೆ ಅದು ಸಾಧ್ಯ ಆಗಿಲ್ಲ. ಈ ಚಿತ್ರತಂಡ ಎರಡು ಹೊಸ ರಿಲೀಸ್ ದಿನಾಂಕಗಳನ್ನು ಪ್ರಕಟ ಮಾಡಿದೆ.
RRR ಚಿತ್ರ ಇದೇ ವರ್ಷ ಮಾರ್ಚ್ 18 ಅಥವಾ ಏಪ್ರಿಲ್ 28ಕ್ಕೆ ತೆರೆಗೆ ಬರಲಿದೆ. ಆದರೆ ಟಾಲಿವುಡ್ ಮೂಲಗಳ ಪ್ರಕಾರ RRR ಚಿತ್ರವನ್ನು ಮಾರ್ಚ್ 18ಕ್ಕೆ ರಿಲೀಸ್ ಮಾಡುವ ಎಲ್ಲಾ ತಯಾರಿ ನಡೆಸಲಾಗಿದೆ ಅಂತೆ. ಈ ಚಿತ್ರ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯೋ ನಿರೀಕ್ಷೆ ಹೆಚ್ಚಿದೆ. ಆದರೆ ಮಾರ್ಚ್ 18ಕ್ಕೆ RRR ರಿಲೀಸ್ ಅದ್ರೆ ಕರ್ನಾಟಕದಲ್ಲಿ ಮಾತ್ರ ಆರ್‌ಆರ್‌ಆರ್ ಚಿತ್ರಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಇದಕ್ಕೆ ಕಾರಣ ಜೇಮ್ಸ್ ಸಿನಿಮಾ. ಜೇಮ್ಸ್ ಸಿನಿಮಾ ನೋಡಲು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮಾತ್ರ ಅಲ್ಲ ಇಡೀ ಕರುನಾಡು ತುದಿಗಾಲಲ್ಲಿ ನಿಂತು ಕಾಯುತ್ತಿದೆ. ಎಲ್ಲವೂ ಜೇಮ್ಸ್ ಸಿನಿಮಾ ತಂಡ ಅಂದುಕೊಂಡ ಹಾಗೆ ಆದರೆ, ಜೇಮ್ಸ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟು ಹಬ್ಬಕ್ಕೆ ತೆರೆಗೆ ಬರಲಿದೆ. ಅಂದರೆ ಮಾರ್ಚ್ 17ಕ್ಕೆ ಚಿತ್ರ ರಿಲೀಸ್ ಆಗುವುದು ಪಕ್ಕಾ. ಈ ವಿಚಾರವನ್ನು ಈಗಾಗಲೇ ನಿರ್ದೇಶಕ ಚೇತನ್ ಅವರು 'ಫಿಲ್ಮಿಬೀಟ್ ಕನ್ನಡ' ಜೊತೆಗೆ ಹಂಚಿಕೊಂಡಿದ್ದಾರೆ.
ಈಗಾಗಲೇ ಜೇಮ್ಸ್ ಸಿನಿಮಾದ ಶೂಟಿಂಗ್ ಮುಗಿದ್ದಿದ್ದು, ಬಹತೇಕ ಪೋಸ್ಟ್ ಪ್ರೊಡಕ್ಷ್ನ್ ಕೆಲಸಗಳು ಕೂಡ ಮುಕ್ತಾಯ ಹಂತದಲ್ಲಿ ಇವೆ. ಡಬ್ಬಿಂಗ್ ಕೂಡ ಬಹುತೇಕ ಮುಗಿದು ಬಿಟ್ಟಿದೆ. ಚಿತ್ರದ ಎಲ್ಲಾ ಕೆಲಸಗಳನ್ನು ಸಿನಿಮಾ ತಂಡ ನಿಗದಿತ ಸಮಯಕ್ಕೆ ಮಾಡಿ ಮುಗಿಸಿದರೆ, ಅಪ್ಪು ಬರ್ತ್ ಡೇ ದಿನದಂದೇ ಜೇಮ್ಸ್ ರಿಲೀಸ್ ಆಗುವುದು ಪಕ್ಕಾ. ಹೀಗಾದರೆ 'ಆರ್‌ಆರ್‌ಆರ್' ಸಿನಿಮಾಕ್ಕೆ ಜೇಮ್ಸ್ ಸಿನಿಮಾ ಠಕ್ಕರ್ ಕೊಡುವ ಸಾಧ್ಯತೆ ಇದೆ.
ಆರ್‌ಆರ್‌ಆರ್ ಕುರಿತಂತೆ ಈಗಾಗಲೇ ವಿಶ್ವದಾದ್ಯಂತ ಸಾಕಷ್ಟು ಹೈಪ್ ಕ್ರಿಯೇಟ್ ಆಗಿದೆ. ಹೊಸ ವರ್ಷದ ವೇಳೆಗೆ ಸಿನಿಮಾ ರಿಲೀಸ್ ಗೆ ಚಿತ್ರ ತಂಡ ಸಾಕಷ್ಟು ಪ್ಲಾನ್ ಮಾಡಿತ್ತು. ಆದರೆ ಈಗ ಅನಿವಾರ್ಯವಾಗಿ ಹೊಸ ಪ್ಲ್ಯಾನ್ ಮಾಡಿದೆ. RRR ಚಿತ್ರದ ಈ ಹೊಸ ಪ್ಲ್ಯಾನ್ RRR ಗೆ ಮುಳುವಾಗುವ ಸಾಧ್ಯತೆಯನ್ನೂ ಕೂಡ ತಳ್ಳಿ ಹಾಕುವ ಹಾಗಿಲ್ಲ.


Click it and Unblock the Notifications











