ಈ ವಾರ ಯಾವೆಲ್ಲಾ ಸಿನಿಮಾಗಳು ಬಿಡುಗಡೆ ಆಗ್ತಿದೆ; ನಿಮ್ಮ ಆಯ್ಕೆ ಯಾವುದು?

ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ಡಿಸೆಂಬರ್ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಹೊತ್ತು ಬರ್ತಿದೆ. ಸ್ಯಾಂಡಲ್‌ವುಡ್‌ನಿಂದ ಹಾಲಿವುಡ್‌ವರೆಗೆ ಇಂಟ್ರೆಸ್ಟಿಂಗ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ತಿಂಗಳ ಮೊದಲ ವಾರ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಮುಂದೆ 'ಡೆವಿಲ್', 'ಅವತಾರ್- 3', 'ಮಾರ್ಕ್', '45', 'ವೃಷಭ' ಹೀಗೆ ಬಹುನಿರೀಕ್ಷಿತ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿವೆ.

'ಕಾಂತಾರ- 1' ಬಳಿಯ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಆ ಬರವನ್ನು ಈ ವಾರ ತೆಲುಗು, ಹಿಂದಿ ಸಿನಿಮಾಗಳು ನಿವಾರಿಸುತ್ತಿವೆ. ನವೆಂಬರ್ ಚಿತ್ರರಂಗದಲ್ಲಿ ಅನ್‌ಸೀಸನ್ ಎನ್ನಲಾಗುತ್ತಿದೆ. ಹಾಗಾಗಿ ಹೆಚ್ಚು ಸಿನಿಮಾಗಳು ಬರಲಿಲ್ಲ. ಡಿಸೆಂಬರ್‌ ಮೊದಲ ವಾರ ಬಿಗ್‌ ಬಜೆಟ್ ಸಿನಿಮಾಗಳು ಬಂದು ಗೆದ್ದಿರುವ ಉದಾಹರಣೆಗಳಿವೆ. 3 ವರ್ಷಗಳ ಹಿಂದೆ 'ಅಖಂಡ' ಸಿನಿಮಾ ಬಂದು ಗೆದ್ದಿತ್ತು. ಕಳೆದ ವರ್ಷ 'ಪುಷ್ಪ'- 2 ಸಿನಿಮಾ ತೆರೆಗಪ್ಪಳಿಸಿದ್ದು ಗೊತ್ತೇಯಿದೆ.

Big December Releases From Akhand-2 to Dhurandhar Major Movies Hitting Screens This Weekend

ಅಖಂಡ- 2

ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ- 2' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ವಾರ ತೆರೆಗೆ ಬರ್ತಿದೆ. ಬೋಯಪಾಟಿ ಶ್ರೀನು ನಿರ್ದೇಶನದ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗಲಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ಬಂದು ಹಿಟ್ ಆಗಿದೆ. ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದ ಚಿತ್ರದ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್ ಭಾಗಿ ಆಗಿ ಟ್ರೈಲರ್ ಅನಾವರಣ ಮಾಡಿದ್ದರು.

ದ್ವಿಪಾತ್ರದಲ್ಲಿ ಬಾಲಯ್ಯ ಅಬ್ಬರಿಸಿದ್ದಾರೆ. 3 ವರ್ಷಗಳ ಹಿಂದೆ ಉತ್ತರ ಭಾರತದಲ್ಲಿ 'ಅಖಂಡ' ಸಿನಿಮಾ ಸಖತ್ ಸದ್ದು ಮಾಡಿತ್ತು. ಹಾಗಾಗಿ ಆ ಭಾಗದಲ್ಲಿ ಹೆಚ್ಚು ಪ್ರಚಾರ ಮಾಡಿ ಸಿನಿಮಾ ಬಿಡುಗಡೆ ಮಾಡಲಾಗ್ತಿದೆ. ಕುಂಭಮೇಳದಲ್ಲಿ ಕೂಡ 'ಅಖಂಡ-2' ಚಿತ್ರದ ಚಿತ್ರೀಕರಣ ನಡೆದಿತ್ತು. 'ಜೈ ಅಖಂಡ' ಹೆಸರಿನಲ್ಲಿ ಚಿತ್ರದ 3ನೇ ಭಾಗ ಬರುತ್ತದೆ ಎನ್ನಲಾಗ್ತಿದೆ. ನೆಟ್‌ಫ್ಲಿಕ್ಸ್ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ.

ಧುರಂಧರ್

ಆದಿತ್ಯಾ ಧರ್ ನಿರ್ದೇಶನದ ಬಾಲಿವುಡ್ ಸಿನಿಮಾ 'ಧುರಂಧರ್' ಇದೇ ಶುಕ್ರವಾರ ಪ್ರೇಕ್ಷಕರ ಮುಂದೆ ಬರ್ತಿದೆ. ರಣ್‌ವೀರ್ ಸಿಂಗ್, ಸಂಜಯ್ ದತ್, ಮಾಧವನ್, ಅರ್ಜುನ್ ರಾಮ್‌ಪಾಲ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಬಹಳ ಅದ್ಧೂರಿಯಾಗಿ ಈ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ಮಾಣವಾಗಿದೆ. ಕರಾವಳಿ ದೈವಗಳ ಬಗ್ಗೆ ಅವಮಾನ ಮಾಡಿ ನಟ ರಣ್‌ವೀರ್ ಸಿಂಗ್ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಇದು 'ಧುರಂಧರ್' ಸಿನಿಮಾ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಕಲಾಂಕಾವಲ್

ವಯಸ್ಸು 70 ದಾಟಿದ್ರು ಮಲಯಾಳಂ ನಟ ಮಮ್ಮುಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವರ್ಷಕ್ಕೆ ಅವರ ಎರಡ್ಮೂರು ಸಿನಿಮಾಗಳು ಬಿಡುಗಡೆ ಆಗುತ್ತದೆ. ಈ ವಾರ 'ಕಲಾಂಕಾವಲ್' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಜಿತಿನ್ ಕೆ. ಜೋಸ್ ನಿರ್ದೇಶನದ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ಶಂಕರ್ ದಾಸ್ ಎಂಬ ಪಾತ್ರದಲ್ಲಿ ಮಮ್ಮುಟ್ಟಿ ನಟಿಸಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿನಾಯಕನ್, ಜಿಬಿನ್ ಗೋಪಿನಾಥ್, ರಜಿಶಾ ವಿಜಯನ್ ಚಿತ್ರದ ತಾರಾಗಣದಲ್ಲಿದ್ದಾರೆ. ಮುಜೀಬ್ ಮಝೀದ್ ಸಂಗೀತ ಚಿತ್ರಕ್ಕಿದೆ. ಕುಖ್ಯಾತ ಸರಣಿ ಕೊಲೆಗಾರ ಸೈನೈಡ್ ಮೋಹನ್ ಸುತ್ತಮುತ್ತಲಿನ ಕಥೆ ಈ ಚಿತ್ರದಲ್ಲಿದೆ ಎನ್ನಲಾಗ್ತಿದೆ.

Big December Releases From Akhand-2 to Dhurandhar Major Movies Hitting Screens This Weekend

ಖಜುರಾಹೊ ಡ್ರೀಮ್ಸ್

ಮನೋಜ್ ವಾಸುದೇವ್ ನಿರ್ದೇಶನದ 'ಖಜುರಾಹೊ ಡ್ರೀಮ್ಸ್' ಈ ವಾರ ಬಿಡುಗಡೆ ಆಗುತ್ತಿರುವ ಮತ್ತೊಂದು ಮಲಯಾಳಂ ಸಿನಿಮಾ. ಅರ್ಜುನ್ ಅಶೋಕನ್, ಶರಾಫ್ ಯು ಧೀನ್, ಶ್ರೀನಾಥ್ ಭಾಸಿ ಹಾಗೂ ಅದಿತಿ ರವಿ ಈ ಚಿತ್ರದ ತಾರಾಗಣದಲ್ಲಿದ್ದಾರೆ.

More from Filmibeat

English summary
Get ready for a power-packed first weekend of December as major films from tollywood, Bollywood, Malayalam cinema and Hollywood hit the theatres. ‘Akhand-2’, ‘Dhurandhar’, ‘Kalankaval’ and ‘Khajuraho Dreams’ lead;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X