For Quick Alerts
  ALLOW NOTIFICATIONS  
  For Daily Alerts

  ವರ್ಷಾಂತ್ಯದಲ್ಲಿ ಮೂರು ದೊಡ್ಡ ಸಿನಿಮಾಗಳಿಂದ ಸಿಹಿ ಸುದ್ದಿ

  |

  ಈ ವರ್ಷದ ಕೆಲವೇ ದಿನಗಳು ಉಳಿದಿದೆ. ಹೊಸ ವರ್ಷವನ್ನು ಸ್ವಾಗತಿಸಲು ಈಗಾಗಲೇ ತಯಾರಿಗಳು ಶುರುವಾಗಿವೆ. ಚಿತ್ರರಂಗದಲ್ಲಿಯೂ ಹೊಸ ವರ್ಷಕ್ಕೆ ಹೊಸ ಹೊಸ ಸುದ್ದಿಗಳು ಬರುತ್ತವೆ.

  ಬಹು ನಿರೀಕ್ಷಿತ 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಫಸ್ಟ್ ಲುಕ್ ಡಿಸೆಂಬರ್ 21ಕ್ಕೆ ಬಿಡುಗಡೆಯಾಗಲಿದೆ. 'ಕೆಜಿಎಫ್ ಚಾಪ್ಟರ್ 1' ಸಿನಿಮಾ ಕಳೆದ ಡಿಸೆಂಬರ್ 21ಕ್ಕೆ ರಿಲೀಸ್ ಆಗಿದ್ದು, ಅದೇ ದಿನ 'ಕೆಜಿಎಫ್ ಚಾಪ್ಟರ್ 2' ಫಸ್ಟ್ ಲುಕ್ ಹೊರ ಬರಲಿದೆ. ಯಶ್, ಶ್ರೀನಿಧಿ ಶೆಟ್ಟಿ ಹಾಗೂ ಸಂಜಯ್ ದತ್ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ, ವಿಜಯ್ ಕಿರಗಂದೂರು ನಿರ್ಮಾಣವಿದೆ.

  ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?

  ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಚಿತ್ರತಂಡ ಕೂಡ ವರ್ಷಾಂತ್ಯ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದೆ. ಡಿಸೆಂಬರ್ 31 ರಂದು 'ಯುವರತ್ನ' ತಂಡ ಒಂದು ಸಪ್ರೈಸ್ ನೀಡಲಿದೆಯಂತೆ. ಅದೇನೂ ಎನ್ನುವುದು ಸದ್ಯದ ಕುತೂಹಲವಾಗಿದೆ. ಸಿನಿಮಾದ ಟೀಸರ್ ಈಗಾಗಲೇ ಬಂದಿದ್ದು, ಟ್ರೇಲರ್ ಅಥವಾ ಚಿತ್ರದ ಬಿಡುಗಡೆ ದಿನಾಂಕ ಅನೌನ್ಸ್ ಆಗಬಹುದು.

  ಡಿಸೆಂಬರ್ 21ಕ್ಕೆ 'ಕೆಜಿಎಫ್' ಅಭಿಮಾನಿಗಳಿಗೆ 'ಬಿಗ್' ನ್ಯೂಸ್ಡಿಸೆಂಬರ್ 21ಕ್ಕೆ 'ಕೆಜಿಎಫ್' ಅಭಿಮಾನಿಗಳಿಗೆ 'ಬಿಗ್' ನ್ಯೂಸ್

  ಕನ್ನಡದ ಜೊತೆಗೆ ಟಾಲಿವುಡ್ ನ ಮಹಾ ಸಿನಿಮಾ 'ಆರ್ ಆರ್ ಆರ್' ಕೂಡ ಹೊಸ ವರ್ಷದ ಸಂಭ್ರಮವನ್ನು ಇನ್ನಷ್ಟು ಹೆಚ್ಚು ಮಾಡುತ್ತಿದೆ. ಜನವರಿ 1 ರಂದು 'ಆರ್ ಆರ್ ಆರ್' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಲಿದೆ. 'ಬಾಹುಬಲಿ' ನಂತರ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದೆ. ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎನ್ ಟಿ ಆರ್ ಚಿತ್ರದಲ್ಲಿ ನಟಿಸಿದ್ದಾರೆ.

  English summary
  Big news from yuvaratna, RRR and KGF 2 movie team for new year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X