#ಮೀಟೂ ಫೈಟ್: ಅರ್ಜುನ್ ಸರ್ಜಾಗಿಲ್ಲ ಬಂಧನದ ಭೀತಿ.!
Recommended Video

ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೀ ಟೂ ವಿವಾದ : ಸರ್ಜಾಗೆ ಸದ್ಯಕ್ಕೆ ರಿಲೀಫ್ | FILMIBEAT KANNADA
#ಮೀಟೂ ಅಭಿಯಾನದ ಅಡಿ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದರಿಂದ ಬೇಸರಗೊಂಡ ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ ಹೂಡಿ ಕೋರ್ಟ್ ಮೆಟ್ಟಿಲೇರಿದರು.
ಇತ್ತ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಪೊಲೀಸ್ ಕಂಪ್ಲೇಂಟ್ ಕೊಟ್ಟರು. ಅರ್ಜುನ್ ಸರ್ಜಾ ವಿರುದ್ಧ ಎಫ್.ಐ.ಆರ್ ಕೂಡ ದಾಖಲಾಯಿತು. ತಮ್ಮ ವಿರುದ್ಧ ದಾಖಲಾಗಿರುವ ಎಫ್.ಐ.ಆರ್ ರದ್ದು ಕೋರಿ ನಟ ಅರ್ಜುನ್ ಸರ್ಜಾ ಹೈಕೋರ್ಟ್ ಮೊರೆ ಹೋಗಿದ್ದರು. ಆ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು.

ಬಂಧನದ ಭೀತಿಯಲ್ಲಿದ್ದ ನಟ ಅರ್ಜುನ್ ಸರ್ಜಾಗೆ ಹೈಕೋರ್ಟ್ ರಿಲೀಫ್ ನೀಡಿದೆ. ಅರ್ಜುನ್ ಸರ್ಜಾ ರನ್ನ ತನಿಖೆ ಮಾಡಬಹುದು, ಆದರೆ ಪೊಲೀಸರು ಬಂಧಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಪರ ವಕೀಲರ ವಾದ ಆಲಿಸಿದ ಹೈಕೋರ್ಟ್ ನ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಿದೆ.
More from Filmibeat
English summary
Big relief for Kannada Actor Arjun Sarja in High Court.
sruthi hariharan arjun sarja me too casting couch sandalwood controversy court ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ಕಾಸ್ಟಿಂಗ್ ಕೌಚ್ ಸ್ಯಾಂಡಲ್ ವುಡ್ ವಿವಾದ ಕೋರ್ಟ್


Click it and Unblock the Notifications











