ರಾಕಿ ಭಾಯ್ ಅಭಿನಯದ ಕೆಜಿಎಫ್-2 ಚಿತ್ರಕ್ಕೆ ಬಿಗ್ ರಿಲೀಫ್

Recommended Video

KGF 2 : ಕೆಜಿಎಫ್-2 ಚಿತ್ರಕ್ಕೆ ಬಿಗ್ ರಿಲೀಫ್ | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷೆಯ ಕೆಜಿಎಫ್-2 ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಕೆಜಿಎಫ್ ನಲ್ಲಿ ಚಿತ್ರೀಕರಣ ನಡೆಸದಂತೆ ಕೋಲಾರ ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ಆದೇಶಕ್ಕೆ ಹೈ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಚಿತ್ರೀಕರಣ ವೇಳೆ ಪರಿಸರಕ್ಕೆ ಯಾವುದೆ ಹಾನಿ ಮಾಡಿಲ್ಲ. ಇನ್ನು 25 ದಿನಗಳಲ್ಲಿ ಚಿತ್ರೀಕರಣ ಮುಗಿಸುತ್ತೇವೆ ಎಂದು ಮನವಿ ಮಾಡಿಕೊಂಡಿದ್ದರು. ನಿರ್ಮಾಪಕರ ಮನವಿ ಪುರಸ್ಕರಿಸಿದ ಹೈ ಕೋರ್ಟ್ ಚಿತ್ರೀಕರಣಕ್ಕೆ ಅನುಮತಿ ನೀಡಿದೆ.

ಕೆಜಿಎಫ್ ನ ಸೈನೈಡ್ ಗುಡ್ಡದ ಮೇಲೆ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಮಾಡಲಾಗುತ್ತಿದ್ದು, ಗುಡ್ದದ ಮೇಲೆ ಬೃಹತ್ ಪ್ರಮಾಣದ ಸೆಟ್ ಹಾಕಲಾಗಿದೆ. ಇದರಿಂದ ಗಿಡ-ಮರಗಳನ್ನು ನಾಶ ಮಾಡಲಾಗುತ್ತಿದೆ. ಜೊತೆಗೆ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ.

Big Relief To KGF-2 Team High Court Green Sigle To Continue Shooting In KGF

ಶ್ರೀನಿವಾಸ್ ಅವರ ದೂರನ್ನು ಪರಿಗಣಿಸಿದ ಕೋಲಾರ ಸಿಟಿ ಸಿವಿಲ್ ಕೋರ್ಟ್, ಕೆಜಿಎಫ್ ನಿರ್ಮಾಪಕರಿಗೆ ತಾತ್ಕಾಲಿಕವಾಗಿ ಶೂಟಿಂಗ್ ನಿಲ್ಲಿಸುವಂತೆ ಸೂಚನೆ ನೀಡಿತ್ತು. ನ್ಯಾಯಾಲಯದ ಮುಂದಿನ ಆದೇಶದವರೆಗೂ ಚಿತ್ರೀಕರಣ ಆರಂಭಿಸದಂತೆ ಆದೇಶಿಸಿತ್ತು. ಆದ್ರೀಗ ಹೈ ಕೋರ್ಟ್ ಚಿತ್ರೀಕರಣಕ್ಕೆ ಅನುಮತಿ ನೀಡಿದೆ.

ಯಶ್ ಅಭಿನಯಿಸುತ್ತಿರುವ ಕೆಜಿಎಫ್-2 ಚಿತ್ರವನ್ನ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದಾರೆ. ಕೆಜಿಎಫ್ ಚಾಪ್ಟರ್ 1 ಕಳೆದ ವರ್ಷ ಡಿಸೆಂಬರ್ ನಲ್ಲಿ ರಿಲೀಸ್ ಆಗಿ ದೊಡ್ಡ ಹಿಟ್ ಆಗಿತ್ತು.

More from Filmibeat

English summary
Big relief to KGF-2 team high court green single to continue shooting in KGF.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X