ಈ ವರ್ಷ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿ ಕೋಟಿ ಕೋಟಿ ನಷ್ಟ ಅನುಭವಿಸಿದ 10 ಚಿತ್ರಗಳ ಪಟ್ಟಿ

ಸಿನಿಮಾ ಅನ್ನೋದು ಜೂಜು ಆಡಿದಂತೆ ಎಂದು ಕೆಲವರು ಹೇಳ್ತಾರೆ. ಇಲ್ಲಿ ಒಂದೇ ಒಂದು ಸಿನಿಮಾ ಮಾಡಿ ರಾತ್ರೋರಾತ್ರಿ ಕುಬೇರಾಗಿರುವವರು ಇದ್ದಾರೆ. ಒಂದೇ ಚಿತ್ರದಿಂದ ನಷ್ಟಕ್ಕೆ ಸಿಲುಕಿ ಪಾತಾಳಕ್ಕೆ ಕುಸಿದವರಿಗೆ ಲೆಕ್ಕವಿಲ್ಲ. ಈವರ್ಷ ಬಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್‌ ಹಾಗೂ ಮಾಲಿವುಡ್‌ನಲ್ಲಿ ನೂರಾರು ಸಿನಿಮಾಗಳು ತೆರೆಗೆ ಬಂದಿದ್ದವು. ಅದರಲ್ಲಿ ಕೆಲ ಚಿತ್ರಗಳು ಹೀನಾಯವಾಗಿ ನೆಲ ಕಚ್ಚಿದ್ದವು.

ಸ್ಟಾರ್ ನಟರು ಇದ್ದ ಮಾತ್ರಕ್ಕೆ ಸಿನಿಮಾ ಓಡುತ್ತದೆ ಎನ್ನುವ ಮಾತು ಈಗ ಸುಳ್ಳಾಗಿದೆ. ಸ್ಟಾರ್‌ಡಮ್ ಪ್ರೇಕ್ಷಕರನ್ನು ಮೊದಲ ದಿನ ಚಿತ್ರಮಂದಿರಕ್ಕೆ ಸೆಳೆಯಬಹುದು ಅಷ್ಟೆ. ಇನ್ನುಳಿದಂತೆ ತೆರೆಮೇಲೆ ಮ್ಯಾಜಿಕ್ ನಡೆಯಬೇಕು. ಇಲ್ಲದಿದ್ದರೆ ನೆಗೆಟಿವ್ ಟಾಕ್ ಶುರುವಾಗಿ ಜನ ಚಿತ್ರಮಂದಿರಕ್ಕೆ ಬರಲ್ಲ. ಅಯ್ಯೋ ತಿಂಗಳಿಗೆ ಓಟಿಟಿಗೆ ಬರುತ್ತೆ ಬಿಡು ಎಂದು ಲೆಕ್ಕಾಚಾರ ಹಾಕುತ್ತಾರೆ. ಸಲ್ಮಾನ್ ಖಾನ್, ರಾಮ್‌ಚರಣ್, ಪವನ್ ಕಲ್ಯಾಣ್, ಸೂರ್ಯ, ಮಮ್ಮುಟಿ ರೀತಿಯ ಸ್ಟಾರ್ ನಟರೇ ಈ ವರ್ಷ ಬಾಕ್ಸಾಫೀಸ್ ಅಖಾಡದಲ್ಲಿ ಸೋತಿದ್ದಾರೆ.

Big Stars Big Losses Major Bollywood Tamil Telugu and Malayalam Films That Flopped in 2025

ಬರ್ತಾ ಬರ್ತಾ ಕಲಾವಿದರ ಸಂಭಾವನೆ, ಮೇಕಿಂಗ್ ಖರ್ಚು ಎಲ್ಲವೂ ಹೆಚ್ಚಾಗಿದೆ. ಹಾಗಾಗಿ ಸಿನಿಮಾ ಬಜೆಟ್ ಈಗ ನೂರಾರು ಕೋಟಿ ಗಡಿ ದಾಟಿದೆ. ನಿರ್ಮಾಪಕ ಕಷ್ಟ ಕೇಳುವವರಿಲ್ಲ. ಓಟಿಟಿ, ಸ್ಯಾಟಲೈಟ್ ರೈಟ್ಸ್ ಕೊಂಚಮಟ್ಟಿಗೆ ಧೈರ್ಯ ತಂದುಕೊಟ್ಟಿದೆ. ಆದರೂ ಥ್ರಿಯೇಟ್ರಿಕಲ್ ಕಲೆಕ್ಷನ್ ಬಹಳ ಮುಖ್ಯ ಎನ್ನುವಂತಾಗಿದೆ. ಆದರೂ ಸಿನಿಮಾ ಚೆನ್ನಾಗಿಲ್ಲ ಅಂದ್ರೆ ನಿರ್ಮಾಪಕರು, ವಿತರಕರು, ಪ್ರದರ್ಶಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಸಿನಿಮಾ ಕ್ರೇಜ್ ನೋಡಿ ಹಣ ಸುರಿದು ಸೋತರೆ ಆಕಾಶ ನೋಡುವಂತಾಗುತ್ತದೆ.

ಈ ವರ್ಷ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಹೀನಾಯವಾಗಿ ಸೋಲುಂಡ ಸ್ಟಾರ್ ನಟರ ಸಿನಿಮಾಗಳು ಯಾವುವು? ಇಲ್ಲಿದೆ ನೋಡಿ ಕಂಪ್ಲೀಟ್ ಲಿಸ್ಟ್.

Big Stars Big Losses Major Bollywood Tamil Telugu and Malayalam Films That Flopped in 2025

ಸಿಕಂದರ್

ಸಲ್ಮಾನ್ ಖಾನ್ ನಟನೆಯ 'ಸಿಕಂದರ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿತ್ತು. ಮುರುಗದಾಸ್ ನಿರ್ದೇಶನದ ಸಿನಿಮಾ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಸಾಜಿದ್ ನಾಡಿಯಾದ್ವಾಲಾ ಚಿತ್ರಕ್ಕೆ ಹಣ ಹೂಡಿದ್ದರು. ಸಿನಿಮಾ ಸೋತ ಬಳಿಕ ಮುರುಗದಾಸ್ ಹಾಗೂ ಸಲ್ಮಾನ್ ಖಾನ್ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ಪೈರಸಿ ಆಗಿದ್ದು ಭಾರೀ ಪೆಟ್ಟು ಕೊಟ್ಟಿತ್ತು. 90 ಕೋಟಿ ರೂ.ವರೆಗೆ ಚಿತ್ರದಿಂದ ನಷ್ಟವಾಗಿತ್ತು ಎನ್ನಲಾಗುತ್ತದೆ.

ಗೇಮ್‌ ಚೇಂಜರ್

ಬಾಕ್ಸಾಫೀಸ್ 'ಗೇಮ್‌ ಚೇಂಜರ್' ಆಗಬೇಕಿದ್ದ ರಾಮ್‌ಚರಣ್ ಸಿನಿಮಾ ಹೀನಾಯವಾಗಿ ಸೋತಿತ್ತು. ಖ್ಯಾತ ನಿರ್ದೇಶಕ ಶಂಕರ್ ಪ್ರತಿಭೆ ಕೂಡ ಚಿತ್ರವನ್ನು ಗೆಲ್ಲಿಸಲಿಲ್ಲ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬಂದಿತ್ತು. ದಿಲ್ ರಾಜು ಚಿತ್ರಕ್ಕೆ ಹಣ ಹೂಡಿದ್ದರು. ಚಿತ್ರದಲ್ಲಿ ಚರಣ್ ದ್ವಿಪಾತ್ರದಲ್ಲಿ ನಟಿಸಿದ್ದರು. ಕಿಯಾರಾ ಅದ್ವಾನಿ ನಾಯಕಿಯಾಗಿ ಮಿಂಚಿದ್ದರು. ಚಿತ್ರದಿಂದ ಬರೋಬ್ಬರಿ 100 ಕೋಟಿ ರೂ. ನಷ್ಟವಾಗಿತ್ತು ಎನ್ನುವ ಚರ್ಚೆ ಫಿಲ್ಮ್‌ ನಗರ್‌ನಲ್ಲಿ ಕೇಳಿಬಂದಿತ್ತು.

ಥಗ್ ಲೈಫ್

ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದು ಗೊತ್ತೇಯಿದೆ. ಈ ಚಿತ್ರದಲ್ಲಿ ಹೆಚ್ಚು ಕಮ್ಮಿ 100 ಕೋಟಿ ರೂ. ನಷ್ಟವಾಗಿರುವ ಅಂದಾಜಿದೆ. ಸ್ವತಃ ಕಮಲ್ - ಮಣಿರತ್ನಂ ಚಿತ್ರ ನಿರ್ಮಿಸಿದ್ದರು. ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕಮಲ್ ಹಾಸನ್ ಸಂಕಷ್ಟಕ್ಕೆ ಸಿಲುಕಿದ್ದರು. ತ್ರಿಷಾ ಹಾಗೂ ಸಿಂಬು ಚಿತ್ರದ ತಾರಾಗಣದಲ್ಲಿದ್ದರು.

ವಾರ್‌-2

ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ವಾರ್- 2' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಆಗಸ್ಟ್ 15ರಂದು ಸಿನಿಮಾ ತೆರೆಗೆ ಬಂದಿತ್ತು. ರಜನಿಕಾಂತ್ ನಟನೆಯ 'ಕೂಲಿ' ಚಿತ್ರ ಬಾಕ್ಸಾಫೀಸ್‌ನಲ್ಲಿ ಪೈಪೋಟಿ ಕೊಟ್ಟಿತ್ತು. ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ಮಾಪಕರಿಗೆ 60ರಿಂದ 70 ಕೋಟಿ ರೂ. ನಷ್ಟ ತಂದೊಡ್ಡಿತ್ತು.

ಎಮರ್ಜೆನ್ಸಿ

ಕಂಗನಾ ರಾಣಾವತ್ ನಿರ್ದೇಶಿಸಿ ನಟಿಸಿದ್ದ 'ಎಮರ್ಜೆನ್ಸಿ' ಸಿನಿಮಾ ಈ ವರ್ಷದ ಆರಂಭದಲ್ಲೇ ತೆರೆಗೆ ಬಂದಿತ್ತು. ಅಂದಾಜು 60 ಕೋಟಿ ರೂ. ಬಜೆಟ್ ಸಿನಿಮಾ 20 ಕೋಟಿ ರೂ. ಮಾತ್ರ ಗಳಿಸಿತ್ತು. ನೆಟ್‌ಫ್ಲಿಕ್ಸ್ ಭಾರೀ ಮೊತ್ತಕ್ಕೆ ಓಟಿಟಿ ರೈಟ್ಸ್ ಕೊಂಡುಕೊಂಡಿದ್ದು ನಿರ್ಮಾಪಕರಿಗೆ ವರವಾಗಿತ್ತು.

ಹರಿಹರ ವೀರಮಲ್ಲು

ಪವನ್ ಕಲ್ಯಾಣ್ ಈಗ ಆಂಧ್ರದ ಉಪಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ ಎಂದಿದ್ದಾರೆ. ಆದರೆ ಈ ಹಿಂದೆ ಶುರುವಾಗಿದ್ದ 'ಹರಿಹರ ವೀರಮಲ್ಲು' ಹಾಗೂ 'OG' ಚಿತ್ರಗಳು ಈ ವರ್ಷ ತೆರೆಗೆ ಬಂದಿದ್ದವು. ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಹರಿಹರ ವೀರಮಲ್ಲು' ಸಿನಿಮಾ ಭಾರೀ ನಷ್ಟಕ್ಕೆ ಗುರಿಯಾಗಿತ್ತು. 'OG' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ನಿರ್ಮಾಪಕರಿಗೆ ನಷ್ಟವಾಗಿದೆ ಎನ್ನುವ ವಾದ ಇದೆ.

ಕಣ್ಣಪ್ಪ

ಮೋಹನ್ ಬಾಬು ನಿರ್ಮಾಣದಲ್ಲಿ ಮಂಚು ವಿಷ್ಣು ಹೀರೊ ಆಗಿದ್ದ ನಟಿಸಿದ್ದ ಸಿನಿಮಾ ಕಣ್ಣಪ್ಪ. ಕನ್ನಡದಲ್ಲಿ ಬಂದಿದ್ದ 'ಶಿವಮೆಚ್ಚಿನ ಕಣ್ಣಪ್ಪ' ಚಿತ್ರದಿಂದ ಪ್ರೇರೇಪಿತರಾಗಿ ಈ ಸಿನಿಮಾ ಮಾಡಲಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದ್ದ ಸಿನಿಮಾ ಹೀನಾಯವಾಗಿ ಸೋತಿತ್ತು.

ರೆಟ್ರೋ

ತಮಿಳಿನಲ್ಲಿ ಸೂರ್ಯ ನಟಿಸಿದ್ದ 'ರೆಟ್ರೊ' ಸಿನಿಮಾ ಕೂಡ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತ್ತು. 'ಕನ್ನಿಮಾ' ಸಾಂಗ್‌ನಿಂದಲೇ ಸಿನಿಮಾ ಹೈಪ್ ಹೆಚ್ಚಿಸಿತ್ತು. ಸೂರ್ಯ ಜೊತೆ ಪೂಜೆ ಹೆಗ್ಡೆ ನಾಯಕಿಯಾಗಿ ನಟಿಸಿದ್ದರು.

ಇನ್ನುಳಿದಂತೆ ಅಜಿತ್ ನಟಿಸಿದ 'ವಿಡಾಮುಯರ್ಚಿ', ವಿಜಯ್ ದೇವರಕೊಂಡ ನಟನೆಯ 'ಕಿಂಗ್‌ಡಮ್', ವಿಕ್ರಂ ಅಭಿನಯದ 'ವೀರಧೀರ ಶೂರನ್', ರಾಮ್ ಪೊತಿನೇನಿ ಮಿಂಚಿದ್ದ 'ಆಂಧ್ರಕಿಂಗ್ ತಾಲೂಕ', ದುಲ್ಕರ್ ಸಲ್ಮಾನ್ ನಟನೆಯ 'ಕಾಂತ', ಮಮ್ಮುಟ್ಟಿ ನಟನೆಯ 'ಬಾಜೂಕಾ' ಹೀಗೆ ಸೋತ ಸಿನಿಮಾಗಳ ಸಂಖ್ಯೆ ದೊಡ್ಡದಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X