ಬಿಗ್ ಬಾಸ್ ವಿನ್ನರ್, ಮಾಡ್ರನ್ ರೈತ ಶಶಿ ನಟನೆಯ 'ಮೆಹಬೂಬಾ'ಗೆ ಸಚಿವರ ಸಾಥ್!

ಕನ್ನಡ ಬಿಗ್ ಬಾಸ್ ಸೀಸನ್ 6ರಲ್ಲಿ ಸಕತ್ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ, ಮಾಡ್ರನ್ ರೈತ ಎಂಬ ಹೆಸರಿನಿಂದ ಕನ್ನಡಿಗರ ಮನಗೆದ್ದು ಬಿಗ್ ಬಾಸ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದು ಯುವ ರೈತ ಶಶಿ ಕುಮಾರ್. ಈಗ ಬಿಗ್ ಬಾಸ್ ಸೀಸನ್ ಹತ್ತರ ಸಮಯದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಅದು 'ಮೆಹಬೂಬಾ' ಕಾರಣಕ್ಕೆ.

ಹೌದು, ಬಿಗ್ ಬಾಸ್ ವಿನ್ನರ್, ಮಾಡ್ರನ್ ರೈತ ಶಶಿ ನಾಯಜನಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ. ಇನ್ನೇನು ಅವರ ಸಿನಿಮಾ ಬಿಡುಗಡೆ ಹಂತದಲ್ಲಿದೆ. ಜನವರಿ 05ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶಶಿ ಅವರ ಬರ್ತ್‌ಡೇ ಅನ್ನು ಚಿತ್ರತಂಡ 'ಮೆಹಬೂಬಾ'. ಪೋಸ್ಟರ್ ಬಿಡುಗಡೆ ಮಾಡಿ ಸಂಭ್ರಮಿಸಿದೆ.

Bigg Boss 6 Kannada Winner Shashi Kumars Mehabooba movie poster release

ಶಶಿ ನಟನೆಯ ಮೆಹಬೂಬಾ ಸಿನಿಮಾ ಪೋಸ್ಟರ್ ಬಿಡುಗಡೆ

ಬಿಗ್ ಬಾಸ್ ಖ್ಯಾತಿಯ ಶಶಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಇದೇ ಸಮಯದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಪೋಸ್ಟರ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ಶಶಿ ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಚಿತ್ರತಂಡ 'ಮೆಹಬೂಬಾ' ಪೋಸ್ಟರ್ ಬಿಡುಗಡೆ ಮಾಡಿದೆ.

ಮಾಡ್ರನ್ ರೈತ ಎಂದು ಖ್ಯಾತಿ ಪಡೆದಿರುವ ಶಶಿ 'ಮೆಹಬೂಬಾ' ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಾಯಕನನಾಗಿ ಬಣ್ಣ ಹಚ್ಚುವುದರ ಜೊತೆಗೆ ನಿರ್ಮಾಪಕನಾಗಿಯೂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇನ್ನು, ಶಶಿ ಈಗಾಗಲೇ ಕಲರ್ಸ್ ಕನ್ನಡದಲ್ಲಿ ಬರುತ್ತಿರುವ 'ಅಂತರಪಟ' ಧಾರಾವಾಹಿಯಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.

ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದಕ ಸಚಿವ ಚಲುವರಾಯಸ್ವಾಮಿ, "ಮೆಹಬೂಬಾ ಸಿನಿಮಾಗೆ ಶಶಿ ಪ್ರೊಡ್ಯೂಸರ್. ಹೀರೋ ಅವರೇ.. ಲಾಭ, ನಷ್ಟ ಹಾಗೂ ಹೆಸರು ಅವರದ್ದೆ. ಅವರಿಗೆ ರಾಜ್ಯದ ಜನ ಆಶೀರ್ವಾದ ಮಾಡಬೇಕು. ನಾಯಕಿ ನನ್ನ ಗೆಳೆಯನ ಮಗಳು. ಹೀಗಾಗಿ ಇಬ್ಬರಿಗೆ ಸಿನಿಮಾ ಗೆಲುವು ತರಲಿ. ಇತ್ತೀಚೆಗೆ ಅನೇಕ ಚಿತ್ರಗಳು ಸಕ್ಸಸ್ ಆಗುತ್ತಿವೆ. ಜನರಿಗೆ ಯಾವ ರೀತಿ ಚಿತ್ರಗಳು ಇಷ್ಟಪಡುತ್ತಾರೆ. ಇಷ್ಟಪಡಲ್ಲ ಅನ್ನುವುದು ಊಹೆ ಮಾಡಲು ಆಗುವುದಿಲ್ಲ. ನಿಮ್ಮೆಲ್ಲ ಸಹಕಾರ ಇಡೀ ತಂಡ ಮೇಲೆ ಇರಲಿ" ಎಂದು ಜನರಿಗೆ ಮನವಿ ಮಾಡಿದ್ದಾರೆ.

Bigg Boss 6 Kannada Winner Shashi Kumars Mehabooba movie poster release

'ಮೆಹಬೂಬಾ' ನನಗೆ ಎಮೋಷನಲ್ ಜರ್ನಿ

ತಮ್ಮ ಸಿನಿಮಾ ಬಗ್ಗೆ ಮಾತನಾಡಿದ ನಟ ಶಶಿ, "ಮೆಹಬೂಬ ನನಗೆ ಎಮೋಷನಲ್ ಜರ್ನಿ. ಒಂದು ವಿಷಯವನ್ನು ಜನರಿಗೆ ತಲುಪಿಸಬೇಕು ಎನ್ನುವುದು ನಮ್ಮ ಸಿನಿಮಾ ಅಜೆಂಡವಾಗಿರುತ್ತದೆ. ವರ್ಷಕ್ಕೆ 200 ಸಿನಿಮಾಗಳು ಬಂದರು. ಹೆಸರು ಮಾಡೋದು 10 ರಿಂದ 15 ಸಿನಿಮಾಗಳು. ಆ 10 ರಿಂದ 15 ಸಿನಿಮಾಗಳಲ್ಲಿ ನಮ್ಮೊಂದು ಒಂದು ಆಗಲಿ ಅನ್ನೋದು ನಮ್ಮ ಕನಸು. ಮೆಹಬೂಬಾ ಖುಷಿ ತಂದುಕೊಟ್ಟ ಸಿನಿಮಾ. ಶೂಟಿಂಗ್ ಸಂಪೂರ್ಣವಾಗಿದೆ. ಆ ಖುಷಿ ವಿಚಾರವನ್ನು ಹಂಚಿಕೊಳ್ಳಲು ನಿಮ್ಮ ಮುಂದೆ ಬಂದಿದ್ದೇವೆ" ಎಂದು ಹೇಳಿದ್ದಾರೆ.

ಮೆಹಬೂಬಾ ನಿರ್ದೇಶಕ ಅನೂಪ್ ಆಂಟೊನಿ ಮಾತನಾಡಿ, "ಮೆಹಬೂಬಾ ನನ್ನ ಎರಡನೇ ಸಿನಿಮಾ. ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಫೆಬ್ರವರಿಗೆ ರಿಲೀಸ್ ಮಾಡಲು ಪ್ಲಾನ್ ಮಾಡುತ್ತಿದ್ದೇವೆ. ಅದ್ಭುತ ಲವ್ ಸ್ಟೋರಿ. ಮೆಹಬೂಬಾ ಮೂಲಕ ಶಶಿ ಸರ್ ಲಾಂಚ್ ಆಗುತ್ತಿದ್ದಾರೆ. ಪಾವನ ಮೇಡಂ ಅದ್ಭುತ ನಟನೆ ಚಿತ್ರದಲ್ಲಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿವೆ" ಎಂದು ಮಾಹಿತಿ ನೀಡಿದ್ದಾರೆ.

"ಮೆಹಬೂಬಾ"

ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ 'ಮೆಹಬೂಬಾ' ಚಿತ್ರ ಸಿದ್ಧವಾಗುತ್ತಿದೆ. ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ರಘು ಶಾಸ್ತ್ರೀ ಬರೆದಿದ್ದಾರೆ. ಸಂಭಾಷಣೆಯನ್ನು ರಘು ಶಾಸ್ತ್ರೀ ಬರೆದಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ.

More from Filmibeat

English summary
BBK6 Winner Shashi Kumar's 'Mehabooba' movie poster release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X