For Quick Alerts
  ALLOW NOTIFICATIONS  
  For Daily Alerts

  ಕೌಸಲ್ಯಾ ಜೊತೆ 'ಬಿಗ್ ಬಾಸ್ ಸೀಸನ್ 6' ವಿನ್ನರ್ ಶಶಿ ಕಲ್ಯಾಣ

  |

  'ಬಿಗ್ ಬಾಸ್ ಸೀಸನ್ 6' ರಿಯಾಲಿಟಿ ಶೋ ವಿನ್ನರ್ ಶಶಿ ಕುಮಾರ್ ಈಗ ಕೌಸಲ್ಯಾ ಜೊತೆ ಮದುವೆಯಾಗುತ್ತಿದ್ದಾರೆ. ಏನು ಶಶಿ ಮದುವೆನಾ..! ಅಂತ ಅಚ್ಚರಿ ಪಡಬೇಡಿ, ಇದು ರಿಯಲ್ ಮದುವೆ ಅಲ್ಲ ರೀಲ್ ಮದುವೆ.

  ಶಶಿ ಸದ್ಯ 'ಕೌಸಲ್ಯಾ ಕಲ್ಯಾಣ' ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಗಾಲೇ ಚಿತ್ರೀಕರಣ ಮುಗಿಸಿ ರಿಲೀಸ್ ಪ್ಲಾನ್ ಮಾಡುತ್ತಿದೆ 'ಕೌಸಲ್ಯಾ ಕಲ್ಯಾಣ' ಚಿತ್ರತಂಡ. ಅಂದಹಾಗೆ ಶಶಿ ಬಿಗ್ ಬಾಸ್ ಮನೆಯಿಂದ ವಿನ್ನರ್ ಆಗಿ ಹೊರ ನಂತರ ಈ ಚಿತ್ರದ ನಾಯಕನಾಗಿ ಆಯ್ಕೆಯಾಗಿಲ್ಲ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೊದಲೆ 'ಕೌಸಲ್ಯ ಕಲ್ಯಾಣ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆಗಲೇ ಚಿತ್ರೀಕರಣ ಸಹ ಮಾಡಿ ಮುಗಿಸಿದ್ದರು ಶಶಿ.

  ನಟ ಶ್ರೀಮುರಳಿ ಭೇಟಿ ಮಾಡಿದ ಬಿಗ್ ಬಾಸ್ ವಿನ್ನರ್ ಶಶಿಕುಮಾರ್ ನಟ ಶ್ರೀಮುರಳಿ ಭೇಟಿ ಮಾಡಿದ ಬಿಗ್ ಬಾಸ್ ವಿನ್ನರ್ ಶಶಿಕುಮಾರ್

  ಬಿಗ್ ಬಾಸ್ ಮನೆಯಲ್ಲಿ ರೈತನಾಗಿ ಮಾತ್ರ ಕಾಣಿಸಿಕೊಂಡಿದ್ದ ಶಶಿ ಒಬ್ಬ ನಾಯಕ ಕೂಡ ಆಗಿದ್ದರು ಅನ್ನೋದು 'ಕೌಸಲ್ಯಾ ಕಲ್ಯಾಣ' ಚಿತ್ರದ ಮಾಹಿತಿ ಹೊರಬಿದ್ದ ನಂತರ ಗೊತ್ತಾಗಿದೆ.

  ನುಡಿದಂತೆ ನಡೆದ 'ಬಿಗ್ ಬಾಸ್' ವಿನ್ನರ್ ಶಶಿ ಕುಮಾರ್.! ನುಡಿದಂತೆ ನಡೆದ 'ಬಿಗ್ ಬಾಸ್' ವಿನ್ನರ್ ಶಶಿ ಕುಮಾರ್.!

  ಅಂದ್ಹಾಗೆ, ಈ ಚಿತ್ರಕ್ಕೆ ನವೀನ್ ಕುಮಾರ್ ಮತ್ತು ಗಿರೀಶ್ ಇಬ್ಬರು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ರೋಮ್ಯಾಂಟಿಕ್ ಚಿತ್ರವಾಗಿದ್ದು, ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಈ ಕತೆ ಕನೆಕ್ಟ್ ಆಗುತ್ತಂತೆ. ಇಲ್ಲಿ ಕೌಸಲ್ಯಾ ಆಗಿ ನಟಿ ರಾಘವಿ ಕಾಣಿಸಿಕಂಡಿದ್ದಾರೆ.

  ಸದ್ಯ ಟ್ರೈಲರ್ ರಿಲೀಸ್ ಮಾಡುವ ತವಕದಲ್ಲಿರುವ ಚಿತ್ರತಂಡ ಚಿತ್ರವನ್ನು ಐಪಿಎಲ್ ಕ್ರಿಕೆಟ್ ಪಂದ್ಯಗಳು ಮುಗಿದ ಬಳಿಕ ತೆರೆಗೆ ತರುವ ಪ್ಲಾನ್ ಮಾಡತ್ತಿದೆ.

  English summary
  Bigg Boss 6 winner Shashi Kumar playing lead role in 'Kousalya Kalyana' movie. The movie is ready to releasing soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X