For Quick Alerts
  ALLOW NOTIFICATIONS  
  For Daily Alerts

  ಅನಿಲ್ ಕುಂಬ್ಳೆ ಮನೆಯಲ್ಲಿ 'ಬಿಗ್ ಬಾಸ್' ವಿನ್ನರ್ ಶೈನ್ ಶೆಟ್ಟಿ: ಭೇಟಿಯ ಕಾರಣವೇನು?

  |

  ಕನ್ನಡ ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಇತ್ತೀಚಿಗೆ 7ನೇ ಆವೃತ್ತಿಯನ್ನು ಮುಗಿಸಿದೆ. ಬಿಗ್ ಬಾಸ್ -7 ಮುಗಿದರು ಬಿಗ್ ಬಾಸ್ ಸ್ಪರ್ಧಿಗಳು ಮಾತ್ರ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈ ಬಾರಿ ಬಿಗ್ ಬಾಸ್ ವಿನ್ನರ್ ಪಟ್ಟ ಮುಡಿಗೇರಿಸಿಕೊಂಡಿರುವ ಶೈನ್ ಶೆಟ್ಟಿ ಹವಾ ಇನ್ನು ಕಮ್ಮಿ ಆಗಿಲ್ಲ.

  ವಿನ್ನರ್ ಆಗಿ ಹೊರಹೊಮ್ಮಿದ ಮೇಲೆ ಶೈನ್ ಫುಲ್ ಬ್ಯುಸಿಯಾಗಿದ್ದಾರೆ. ಸ್ನೇಹಿತರನ್ನು ಭೇಟಿ ಮಾಡುವುದು, ದೇವಸ್ಥಾನಕ್ಕೆ ಹೋಗುವುದು ಜೊತೆಗೆ ಸಾಕಷ್ಟು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗೆಸ್ಟ್ ಆಗಿ ಭಾಗಿಯಾಗುತ್ತಿದ್ದಾರೆ. ಬಿಗ್ ಬಾಸ್ ನಂತರ ಜನಪ್ರಿಯತೆ ಮತ್ತಷ್ಟು ಹೆಚ್ಚಿಕೊಂಡಿರುವ ಶೈನ್ ಇತ್ತೀಚಿಗೆ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಮನೆಗೆ ಭೇಟಿ ನೀಡಿದ್ದಾರೆ. ಹೌದು, ಅನಿಲ್ ಕುಂಬ್ಳೆ ಅವರು ಶೈನ್ ಶೆಟ್ಟಿಗೆ ಪೋನ್ ಮಾಡಿ ಮನೆಗೆ ಆಹ್ವಾನಿಸಿದ್ದಾರೆ. ಅಂದ್ಹಾಗೆ ಶೈನ್ ಶೆಟ್ಟಿ ಕ್ರಿಕೆಟಿಗನ ಮನೆಗೆ ಭೇಟಿ ನೀಡಿದ್ದೇಕೆ?ಮುಂದೆ ಓದಿ..

  ಕಳೆದೆಲ್ಲ ಸೀಸನ್ ವಿನ್ನರ್ ಗಿಂತ ಹೆಚ್ಚು ಬಹುಮಾನ ಪಡೆದ 'ಬಿಗ್ ಬಾಸ್-7' ವಿನ್ನರ್ ಶೈನ್ ಶೆಟ್ಟಿಕಳೆದೆಲ್ಲ ಸೀಸನ್ ವಿನ್ನರ್ ಗಿಂತ ಹೆಚ್ಚು ಬಹುಮಾನ ಪಡೆದ 'ಬಿಗ್ ಬಾಸ್-7' ವಿನ್ನರ್ ಶೈನ್ ಶೆಟ್ಟಿ

  ಅನಿಲ್ ಕುಂಬ್ಳೆ ಮನೆಯಲ್ಲಿ ಶೈನ್

  ಅನಿಲ್ ಕುಂಬ್ಳೆ ಮನೆಯಲ್ಲಿ ಶೈನ್

  ಬಿಗ್ ಬಾಸ್ -7 ವಿನ್ನರ್ ಆಗಿ ಹೊರ ಬರುತ್ತಿದ್ದಂತೆ ಶೈನ್ ಶೆಟ್ಟಿ ಮತ್ತಷ್ಟು ಶೈನ್ ಆಗಿದ್ದಾರೆ. ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡಿರುವ ಶೈನ್ ಇತ್ತೀಚಿಗೆ ಖ್ಯಾತ ಮಾಜಿ ಕ್ರಿಕೆಟಿಕ ಅನಿಲ್ ಕುಂಬ್ಳೆ ಮನೆಗೆ ಭೇಟಿ ನೀಡಿದ್ದಾರೆ. ಅನಿಲ್ ಕುಂಬ್ಳೆ ಫ್ಯಾಮಿಲಿ ಜೊತೆ, ಕುಂಬ್ಳೆ ಪತ್ನಿ ಮತ್ತು ಮಕ್ಕಳ ಜೊತೆ ಇರುವ ಫೋಟೋಗಳನ್ನು ಶೈನ್ ಸಾಮಾಜಿಕ ಜಾಲತಾಣದಲ್ಲಿ ಸಂತಸದಿಂದ ಹಂಚಿಕೊಂಡಿದ್ದಾರೆ.

  ಬಿಗ್ ಬಾಸ್ ಬಳಿಕ ಕುರಿ ಪ್ರತಾಪ್ ಬೇಸರವಾದ್ರಾ! ಸೋಲಿನ ಬಗ್ಗೆ ಪ್ರತಾಪ್ ಹೇಳಿದ್ದೇನು?ಬಿಗ್ ಬಾಸ್ ಬಳಿಕ ಕುರಿ ಪ್ರತಾಪ್ ಬೇಸರವಾದ್ರಾ! ಸೋಲಿನ ಬಗ್ಗೆ ಪ್ರತಾಪ್ ಹೇಳಿದ್ದೇನು?

  ಶೈನ್ ಗೆ ಕುಂಬ್ಳೆಯ ಪ್ರೀತಿಯ ಆಹ್ವಾನ

  ಶೈನ್ ಗೆ ಕುಂಬ್ಳೆಯ ಪ್ರೀತಿಯ ಆಹ್ವಾನ

  ಅಂದ್ಹಾಗೆ ಅನಿಲ್ ಕಂಬ್ಳೆ ಕುಟುಂಬದವರಿಗೆ ಶೈನ್ ಅಂದರೆ ತುಂಬ ಇಷ್ಟವಂತೆ. ಕುಂಬ್ಳೆ ಮನೆಯಲ್ಲಿ ಬಿಗ್ ಬಾಸ್ ಅನ್ನು ತಪ್ಪದೆ ನೋಡುತ್ತಿದ್ದರಂತೆ. ಈ ಬಾರಿಯ ಸ್ಪರ್ಧಿಗಳಲ್ಲಿ ಶೈನ್ ಎಲ್ಲರ ಮನಗೆದ್ದಿದ್ದರು. ಕುಂಬ್ಳೆ ಕುಟುಂಬದವರ ಮನಗೆದ್ದಿದ್ದರು ಶೈನ್. ಹಾಗಾಗಿ ಶೈನ್ ವಿನ್ನರ್ ಆಗಿ ಹೊರಬಂದ ಮೇಲೆ ಅನಿಲ್ ಕುಂಬ್ಳೆ, ಶೈನ್ ಅವರಿಗೆ ಫೋನ್ ಮಾಡಿ ಪ್ರೀತಿಯಿಂದ ಮನೆಗೆ ಆಹ್ವಾನಿಸಿದ್ದಾರೆ.

  ಕುಂಬ್ಳೆ ಪ್ರೀತಿ ಬಗ್ಗೆ ಶೈನ್ ಶೆಟ್ಟಿ ಹೇಳಿದ್ದೇನು?

  ಕುಂಬ್ಳೆ ಪ್ರೀತಿ ಬಗ್ಗೆ ಶೈನ್ ಶೆಟ್ಟಿ ಹೇಳಿದ್ದೇನು?

  ಅನಿಲ್ ಕುಂಬ್ಳೆ ಮನೆಗೆ ಭೇಟಿ ನೀಡಿರುವ ಬಗ್ಗೆ ಶೈನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕಂಡಿದ್ದಾರೆ. "ಅನಿಲ್ ಕುಂಬ್ಳೆ ಸರ್ ಮನೆಗೆ ಭೇಟಿ ಮಾಡಿದ್ದೆ. ವಾವ್ ಏನು ಆತಿಥ್ಯ. ಅನಿಲ್ ಕುಂಬ್ಳೆ ಸರ್ ಜೊತೆ ಸುಂದರವಾದ ಸಂಜೆ ಕಳೆದಿರುವುದು ನನ್ನ ಪುಣ್ಯ. ಭಾರತೀಯ ಹೆಮ್ಮೆಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಸರ್ ಎಷ್ಟು ಸರಳ ವ್ಯಕ್ತಿ" ಎಂದು ಬರೆದುಕಂಡಿದ್ದಾರೆ.

  ಶೈನ್ ಶೆಟ್ಟಿ ಈಗ ಏನು ಮಾಡುತ್ತಿದ್ದಾರೆ?

  ಶೈನ್ ಶೆಟ್ಟಿ ಈಗ ಏನು ಮಾಡುತ್ತಿದ್ದಾರೆ?

  ಶೈನ್ ಶೆಟ್ಟಿ ಸದ್ಯ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಟ್ರಿಪ್, ಪಾರ್ಟಿ ಅಂತ ಸುತ್ತಾಡುತ್ತಿದ್ದಾರೆ. ಇದರ ಜೊತೆಗೆ ಶೈನ್ ಎರಡು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆ ಒಂದು ವೆಬ್ ಸೀರಿಸ್ ಕೂಡ ಮಾಡುತ್ತಿದ್ದಾರೆ. ಇನ್ನು ಶೈನ್ ನಡೆಸುತ್ತಿದ್ದ ಫುಡ್ ಟ್ರಕ್ ಅನ್ನು ಮತ್ತಷ್ಟು ಅಭಿವೃದ್ದಿ ಮಾಡುವ ಯೋಜನೆ ಮಾಡುತ್ತಿದ್ದಾರೆ.

  English summary
  Kannada Bigg Boss-7 Winner shine Shetty visited to Cricketer Anil Kumble house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X