ಧರ್ಮ ಕೀರ್ತಿರಾಜ್ ಮದುವೆ ಫಿಕ್ಸ್; ಕೈ ಹಿಡಿಯುವ ಹುಡುಗಿ ಬಗ್ಗೆ ಕ್ಯಾಡ್ಬರಿ ಏನಂದ್ರು?
ಖ್ಯಾತ ಖಳನಟ ಕೀರ್ತಿರಾಜ್ ಪುತ್ರ ಧರ್ಮ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ನವಗ್ರಹ' ಚಿತ್ರದ ವಿಕ್ಕಿ ಪಾತ್ರದಲ್ಲಿ ಧರ್ಮ ಮಿಂಚಿದ್ದರು. ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಜೊತೆ ಒಂದು ಡುಯೆಟ್ ಸಾಂಗ್ ಕೂಡ ಸಿಕ್ಕಿತ್ತು. 'ಕಣ್ ಕಣ್ ಸಲಿಗೆ' ಸಾಂಗ್ ಕಿವಿಮೇಲೆ ಬಿದ್ದರೆ ಕ್ಯಾಡ್ಬರಿ ನೆನಪಾಗದೇ ಇರುವುದಿಲ್ಲ.
ಇತ್ತೀಚೆಗೆ ಬಿಗ್‌ಬಾಸ್ ಮನೆಗೂ ಧರ್ಮ ಕೀರ್ತಿರಾಜ್ ಹೋಗಿ ಬಂದಿದ್ದರು. ಸೀಸನ್ 11ರ ಸ್ಪರ್ಧಿಯಾಗಿ ಗಮನ ಸೆಳೆದರು. ಸೈಲೆಂಟ್ ಆಗಿಯೇ ಮನೆಯಲ್ಲಿ ವೀಕ್ಷಕರನ್ನು ರಂಜಿಸಿದರು. 56 ದಿನಗಳ ಕಾಲ ದೊಡ್ಮನೆ ಆಟದಲ್ಲಿ ಧರ್ಮ ಕಾಣಿಸಿಕೊಂಡರು. ಇನ್ನು ನಟ ದರ್ಶನ್ ಆಪ್ತ ಎನ್ನುವ ಕಾರಣಕ್ಕೂ ಸಾಕಷ್ಟು ಜನ ಅವರನ್ನು ಬೆಂಬಲಿಸಿದ್ದರು. ಇದೆಲ್ಲದರ ನಡುವೆ ಧರ್ಮ ಮದುವೆ ಫಿಕ್ಸ್ ಆಗಿದೆ ಎನ್ನುವ ಸುದ್ದಿ ಬಂದಿದೆ.

ಸ್ವತಃ ಧರ್ಮ ಕೀರ್ತಿರಾಜ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಅನುಷಾ ರೈ ಜೊತೆ ಧರ್ಮ ಉತ್ತಮ ಒಡನಾಟ ಹೊಂದಿದ್ದರು. ಇಬ್ಬರನ್ನು ನೋಡಿ ಕೆಲವರು ನಿಜಜೀವನದಲ್ಲಿ ಕೂಡ ನೀವಿಬ್ಬರು ಜೊತೆಯಾದರೆ ಚೆನ್ನಾಗಿರುತ್ತದೆ ಎಂದಿದ್ದರು. ಅಭಿಮಾನಿಗಳು ಆ ರೀತಿ ಅಂದುಕೊಳ್ಳಬಹುದು. ಆದರೆ ನಾವಿಬ್ಬರು ಜಸ್ಟ್ ಫ್ರೆಂಡ್ಸ್. ನಮ್ಮಿಬ್ಬರ ನಡುವೆ ಯಾವುದೇ ಪ್ರೀತಿ ಇಲ್ಲ, ನಾವು ಒಳ್ಳೆ ಸ್ನೇಹಿತರು ಎಂದು ಬಿಗ್‌ಬಾಸ್ ಮನೆಯಿಂದ ಹೊರ ಬಂದಾಗ ಧರ್ಮ ಹೇಳಿದ್ದರು.
ಸದ್ಯ ನ್ಯಾಷನಲ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಧರ್ಮ ಕೀರ್ತಿರಾಜ್ ಮಾತನಾಡಿದ್ದಾರೆ. ಈ ವೇಳೆ ಮದುವೆ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ಅನುಷಾ ಅವರನ್ನು ಮದುವೆ ಆಗುತ್ತೀರಾ? ಎಂದು ಫ್ಯಾನ್ಸ್ ಕೇಳುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ. "2025ರಲ್ಲಿ ನನ್ನ ಮದುವೆ, ಅಪ್ಪ -ಅಮ್ಮ ಹುಡುಗಿ ಹುಡುಕುತ್ತಿದ್ದಾರೆ. ಈಗಾಗಲೇ ಹುಡುಕಿದ್ದಾರೆ. ಸದ್ಯ ಮಾತುಕತೆ ನಡೀತಿದೆ. ಅನುಷಾ ನನ್ನ ಸ್ನೇಹಿತೆ ಅಷ್ಟೇ. ನಾವಿಬ್ಬರು ಸ್ನೇಹಿತರಾಗಿಯೇ ಇರ್ತೀವಿ. ಇಬ್ಬರದ್ದೂ ಬೇರೆ ಬೇರೆ ವೈಯಕ್ತಿಕ ಜೀವನ" ಎಂದಿದ್ದಾರೆ.

ಧರ್ಮ ಅವರ ತಂದೆ ಕೀರ್ತಿರಾಜ್ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ವಿಷ್ಣುವರ್ಧನ್, ಪ್ರಭಾಕರ್, ಅಂಬರೀಶ್ ಸೇರಿದಂತೆ ಘಟಾನುಘಟಿ ಕಲಾವಿದರ ಜೊತೆ ಬಣ್ಣ ಹಚ್ಚಿದ್ದರು. ತಂದೆ ಹಾದಿಯಲ್ಲೇ ಧರ್ಮ ಚಿತ್ರರಂಗಕ್ಕೆ ಬಂದಿದ್ದರು.
ತುಗೂದೀಪ ಕುಟುಂಬದ ಜೊತೆ ಕೀರ್ತಿರಾಜ್ ಅವರಿಗೆ ಒಡನಾಟ ಇತ್ತು. ಕನ್ನಡದ ಖ್ಯಾತ ಖಳನಟರ ಮಕ್ಕಳನ್ನು ಸೇರಿಸಿಕೊಂಡು 'ನವಗ್ರಹ' ಚಿತ್ರ ಪ್ಲ್ಯಾನ್ ಮಾಡಿದಾಗ ವಿಕ್ಕಿ ಪಾತ್ರಕ್ಕೆ ಧರ್ಮ ಅವರನ್ನು ದಿನಕರ್ ಆಯ್ಕೆ ಮಾಡಿದ್ದರು. ಆ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು. ಇಂದಿಗೂ ಕನ್ನಡ ಸಿನಿರಸಿಕರು ವಿಕ್ಕಿ ಪಾತ್ರದಿಂದಲೇ ಅವರನ್ನು ಗುರ್ತಿಸುವಂತಾಗಿದೆ.
'ಮಮ್ತಾಜ್' ಎಂಬ ಚಿತ್ರದಲ್ಲಿ ಹೀರೊ ಆಗಿ ಧರ್ಮ ನಟಿಸಿದ್ದರು. 'ರೋನಿ' ಹಾಗೂ ಇತ್ತೀಚೆಗೆ ಬಂದ 'ಟೆನಂಟ್' ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದರು. ಬಿಗ್‌ಬಾಸ್ ಮನೆಗೆ 6ನೇ ಸ್ಪರ್ಧಿಯಾಗಿ ಧರ್ಮ ಹೋಗಿದ್ದರು. ಬೇರೆ ಸ್ಪರ್ಧಿಗಳ ರೀತಿ ಜಗಳ ಮಾಡಿಕೊಳ್ಳದೇ ಬಹಳ ಸೈಲೆಂಟ್ ಆಗಿ ಮನೆಯಲ್ಲಿ ಉಳಿದಿದ್ದರು. ಕೆಲ ವಾರಗಳ ಬಳಿಕ ಅದೇ ಅವರಿಗೆ ಹಿನ್ನಡೆಯಾಗುವಂತೆ ಮಾಡಿತ್ತು.
ಮನರಂಜನೆ ಹಾಗೂ ಆಟ ಎಲ್ಲರಲ್ಲೂ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಲಿಲ್ಲ. ಒಂದಿಬ್ಬರು ಬಿಟ್ಟರೆ ಹೆಚ್ಚಾಗಿ ಯಾರ ಜತೆಗೂ ಬೆರತು ಆಡಲಿಲ್ಲ. ಒಂದು ವಾರದ ಅಂತರದಲ್ಲಿ ಧರ್ಮ ಹಾಗೂ ಅನುಷಾ ದೊಡ್ಮನೆ ಜರ್ನಿ ಮುಗಿಸಿ ಹೊರ ಬಂದಿದ್ದರು. ಧರ್ಮ ಮದುವೆ ಆಗುವ ಹುಡುಗಿ ಯಾರು? ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.


Click it and Unblock the Notifications











