Kirik Keerthi Divorce: ದಾಂಪತ್ಯಕ್ಕೆ ಪೂರ್ಣ ವಿರಾಮ.. "ಕರಿಮಣಿ ಮಾಲೀಕ ನಾನಲ್ಲ" ಎಂದ ಕಿರಿಕ್ ಕೀರ್ತಿ!
ಬಿಗ್‌ಬಾಸ್ ರನ್ನರ್‌ಅಪ್ ಆಗಿ ಜನಪ್ರಿಯರಾಗಿದ್ದ ಕಿರಿಕ್ ಕೀರ್ತಿ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಪತ್ರಕರ್ತನಾಗಿ, ನಿರೂಪಕನಾಗಿ ಹಾಗೇ ಬಿಗ್‌ಬಾಸ್‌ಗೆ ಬಂದ್ಮೇಲೆ ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಮೊನಚಾದ ಮಾತುಗಳಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ.
ಇದೇ ಸೋಶಿಯಲ್ ಮೀಡಿಯಾದಲ್ಲಿಯೇ ತಮ್ಮ ವಿಚ್ಛೇದನದ ಸುದ್ದಿಯನ್ನು ಪ್ರಕಟಿಸಿದ್ದಾರೆ. ನಿನ್ನೆ (ಆಗಸ್ಟ್ 18) ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಪತ್ನಿ ಅರ್ಪಿತಾರಿಂದ ವಿಚ್ಛೇದನ ಪಡೆದ ಪೋಸ್ಟ್ ಅನ್ನು ಶೇರ್ ಮಾಡಿದ್ದರು. ಈ ಮೂಲಕ ಕಳೆದ ಕೆಲವು ದಿನಗಳಿಂದ ಓಡಾಡುತ್ತಿದ್ದ ಊಹಾ-ಪೋಹಕ್ಕೆ ಕಿರಿಕ್ ಕೀರ್ತಿ ತೆರೆ ಎಳೆದಿದ್ದಾರೆ.

ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷ ಆಗುವ ಕಿರಿಕ್ ಕೀರ್ತಿ ತಮ್ಮ ಬದುಕಿನ ಬಗ್ಗೆ ಬರುವ ಕಮೆಂಟ್‌ಗಳಿಗೆ ತಿರುಗೇಟು ನೀಡುತ್ತಿದ್ದರು. ಅಂತೆಯೇ ಈಗ ತಮ್ಮ ದಾಂಪತ್ಯ ಬದುಕಿನ ಬಗ್ಗೆ ಮುಕ್ತವಾಗಿಯೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
"ಕರಿಮಣಿ ಮಾಲೀಕ ನಾನಲ್ಲ"
ನಿನ್ನೆ (ಆಗಸ್ಟ್ 18) ಕಿರಿಕ್ ಕೀರ್ತಿ ಇನ್‌ಸ್ಟಾಗ್ರಾಂನಲ್ಲಿ ವಿಚ್ಚೇದನದ ಬಗ್ಗೆ ಪೋಸ್ಟ್ ಶೇರ್ ಮಾಡಿಕೊಂಡಿದ್ದರು. "ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ.. ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ." ಎಂದು ಬರೆದುಕೊಂಡಿದ್ದಾರೆ.
"ಒಳ್ಳೆಯ ಬದುಕು ಅವಳಿಗೂ ಸಿಗಲಿ"
ಇಷ್ಟೆ ಅಲ್ಲ. ತಮ್ಮ ಮಾಜಿ ಪತ್ನಿಗೂ ಒಳ್ಳೆಯ ಬದುಕು ಸಿಗಲಿ ಎಂದು ಅದೇ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. "ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ, ಕಹಿನೆನಪುಗಳು ಮರೆತು ಹೊಸಜೀವನಕ್ಕೆ ನಾಂದಿ ಹಾಡಲಿ, ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರಿಯಲಿ" ಎಂದು ಅದೇ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ನಕಾರಾತ್ಮಕ ಪ್ರತಿಕ್ರಿಯೆಗಳಿಗೆ ಬೇಸರ
ಕಿರಿಕ್ ಕೀರ್ತಿ, ದೇಶ, ನಾಡು, ನುಡಿ ಭಾಷೆಯ ಬಗ್ಗೆ ಮುಕ್ತವಾಗಿ ಮಾತಾಡುತ್ತಿದ್ದರು. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ನಕಾರಾತ್ಮಕ ಕಮೆಂಟ್‌ಗಳು ಬಂದಿದ್ದವು. ಕುಟುಂಬದ ತೇಜೋವಧೆಗಳಿದ್ದವು. ಆ ಬಗ್ಗೆ ಎರಡು ದಿನಗಳ ಹಿಂದಷ್ಟೇ ಬೇಸರ ವ್ಯಕ್ತಪಡಿಸಿದ್ದರು. "ಸಾಕು.. ಇನ್ನು ನನ್ನ ಸಿದ್ದಾಂತ.. ದೇಶ ಪ್ರೇಮ, ಕನ್ನಡ ಪ್ರೇಮ, ಧರ್ಮದ ಅಭಿಮಾನ ನನ್ನ ಮನಸ್ಸಿನಲ್ಲಿ ಮಾತ್ರ... ನಿಮ್ಮ ದ್ವೇಷ, ಫೇಕ್ ನ್ಯೂಸ್, ಅವಮಾನಗಳು, ಬೈಗುಳಗಳು.. ಇದೇ ನಿಮ್ಮಾಸ್ತಿ.. ನನಗೆ ಇದನ್ನೆಲ್ಲಾ ಎದುರಿಸೋ ಶಕ್ತಿ ಇದ್ದಂತಿಲ್ಲ.. ಯಾಕಂದ್ರೆ ಇದು ನನ್ನಮ್ಮನ್ನ ಕಣ್ಣೀರಿಗೆ ಕಾರಣವಾಗಿದೆ.. ಮಗನ ಭವಿಷ್ಯಕ್ಕೆ, ಕುಟುಂಬದ ನೆಮ್ಮದಿಗೆ ದೊಡ್ಡ ಅಡ್ಡಿಯಾಗಿದೆ.. ಸಾಕ್ರಪ್ಪಾ ಸಾಕು.. ನಾನು ಸೋತರೂ ಪರ್ವಾಗಿಲ್ಲ.. ನಿಮ್ಮ ಮಟ್ಟಿಗೆ ಇಳಿಯೋಕೆ ನಂಗೆ ಸಾಧ್ಯವಿಲ್ಲ.. ನಿಮ್ಮಷ್ಟು ದ್ವೇಷ ನನಗೆ ಜೀವನದಲ್ಲಿ ಯಾವತ್ತೂ ಸಾಧ್ಯವಿಲ್ಲ.. ಇನ್ನಾದ್ರೂ ನನ್ನ ಕುಟುಂಬ, ವೈಯಕ್ತಿಕ ಜೀವನವನ್ನು ಬಿಟ್ಟು ನೆಮ್ಮದಿಯಾಗಿ ಅವರನ್ನು ಬದುಕಲು ಬಿಡಿ.." ಎಂದು ಬರೆದುಕೊಂಡಿದ್ದರು.


Click it and Unblock the Notifications











