»   » 'ಬಿಗ್ ಬಾಸ್'ನಲ್ಲಿ ಚಾನ್ಸ್ ಕೊಡಿ: ಸುದೀಪ್ ಗೆ ಪತ್ರ ಬರೆದ ಕನ್ನಡದ ಮಿಸ್ಟರ್ ಬೀನ್

'ಬಿಗ್ ಬಾಸ್'ನಲ್ಲಿ ಚಾನ್ಸ್ ಕೊಡಿ: ಸುದೀಪ್ ಗೆ ಪತ್ರ ಬರೆದ ಕನ್ನಡದ ಮಿಸ್ಟರ್ ಬೀನ್

Posted By:
Subscribe to Filmibeat Kannada

ಸೆಲೆಬ್ರಿಟಿಗಳು ಮಾತ್ರ ಭಾಗವಹಿಸುವ ಕನ್ನಡದ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್'. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋ ಬಂದ್ರೆ ಮನೆಮಂದಿಯೆಲ್ಲಾ ಟಿವಿ ಮುಂದೆ ಕುಳಿತುಕೊಳ್ಳುವಷ್ಟು ಮನರಂಜನೆ ಹವಾ ಸೃಷ್ಟಿಸಿದೆ ಈ ಕಾರ್ಯಕ್ರಮ.

'ಬಿಗ್ ಬಾಸ್' ಸೀಸನ್ ನಾಲ್ಕರಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಎಂಟ್ರಿ ಕೊಟ್ಟು 'ಬಿಗ್ ಬಾಸ್ ಕನ್ನಡ 4' ನಲ್ಲಿ ಗೆದ್ದು ಬಿಗ್ ಬಾಸ್ ಸ್ಟಾರ್ ಆದರು. ಇನ್ನು ಮುಂದಿನ ಸೀಸನ್ ನಲ್ಲಿ ಯಾರು ಭಾಗವಹಿಸಿ, ಯಾರು ಗೆಲ್ಲುತ್ತಾರೋ ಅದು ಊಹೆಗೂ ನಿಲುಕದ ಆಲೋಚನೆ. ಆದರೀಗ ಮುಂದಿನ 'ಬಿಗ್ ಬಾಸ್' ಸೀಸನ್ ನಲ್ಲಿ ಭಾಗವಹಿಸುವ ಆಕಾಂಕ್ಷಿಯಾಗಿ ಕನ್ನಡದ ಮಿಸ್ಟರ್ ಬೀನ್ ಎಂತಲೇ ಹೆಸರಾದ ಮಂಜುನಾಥ ಜೆ.ರೇಳೆಕರ ಎಂಬುವವರು ತುದಿಗಾಲಲ್ಲಿ ನಿಂತಿದ್ದಾರೆ. ಜೊತೆಗೆ ಸಕಲ ಸಿದ್ಧತೆಗಳಲ್ಲಿ ತೊಡಗಿದ್ದಾರೆ.

ಮೂಕ ಅಭಿನಯದಿಂದಲೇ ಪ್ರಪಂಚದ ಜನರನ್ನು ನಗಿಸುವ ಮಿಸ್ಟರ್ ಬೀನ್ ನಿಮಗೆಲ್ಲ ಗೊತ್ತಿರಬಹುದು. ಅವರ ಕಲೆಯನ್ನೇ ಮೈಗೂಡಿಸಿಕೊಂಡು ಕನ್ನಡದ ಮಿಸ್ಟರ್ ಬೀನ್ ಎಂತಲೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಯೂಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿದ್ದಾರೆ ಮಂಜುನಾಥ್. ತಾವು ಬಿಗ್ ಬಾಸ್ ಕನ್ನಡ ಮುಂದಿನ ಸೀಸನ್ ನಲ್ಲಿ ಸ್ಪರ್ಧಿಯಾಗಿ ಬರಲು ಬೇಡಿಕೆಯಿಟ್ಟು ಹೋಸ್ಟ್ ಸುದೀಪ್ ಅವರಿಗೆ ಪತ್ರ ಸಹ ಬರೆದಿದ್ದಾರಂತೆ. ಅಸಲಿ ಈ ಮಂಜುನಾಥ್ ಜೆ.ರೇಳೆಕರ ಯಾರು? ಇಲ್ಲಿದೆ ನೋಡಿ ಡೀಟೇಲ್ಸ್..

ಮಂಜುನಾಥ್ ಯಾರು?

ಕನ್ನಡ ಮಿಸ್ಟರ್ ಬೀನ್ ಮಂಜುನಾಥ್ ಜೆ.ರೇಳೆಕರ ಮೂಲತಃ ಬೆಳಗಾವಿ ಜಿಲ್ಲೆಯ, ಗೋಕಾಕ ತಾಲೂಕಿನ ಮೂಡಲಗಿ ಗ್ರಾಮದ ನಿವಾಸಿ.

ಮಂಜುನಾಥ್ ತಂದೆ-ತಾಯಿ ಯಾರು?

ಮೂಡಲಗಿ ಗ್ರಾಮದ ರೈತ ಜೋತಿಬಾ ಮತ್ತು ಆಶಾಕಾರ್ಯಕರ್ತೆ ಆಗಿ ಕಾರ್ಯನಿರ್ವಹಿಸುತ್ತಿರುವ ವಿಜಯಲಕ್ಷ್ಮೀ ಎಂಬುವರ ಪುತ್ರ ಮಂಜುನಾಥ ಜೆ.ರೇಳೆಕರ.

ಮಂಜುನಾಥ್ ಹಿನ್ನೆಲೆ ಏನು?

ಶೈಕ್ಷಣಿಕವಾಗಿ ಪಿಯುಸಿ, ಡಿಪ್ಲೊಮೊ ಸಿವಿಲ್ ಮುಗಿಸಿರುವ ಮಂಜುನಾಥ್ ಟೈಲರಿಂಗ್ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಪತ್ರಿಕೆಗಳಿಗೆ ಹವ್ಯಾಸಿ ಬರಹಗಾರನಾಗಿ ಲೇಖನಗಳನ್ನು ಬರೆಯುವ ಹವ್ಯಾಸಗಳು ಇವೆ.

'ಸೃಜನಶೀಲ' ಮಂಜುನಾಥ

ಸದಾ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮಂಜುನಾಥ ಅವರು ಬರವಣಿಗೆ ಸ್ಪರ್ಧೆಗಳು, ಕಿರುಚಿತ್ರ ನಿರ್ಮಾಣ ಸ್ಫರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2016 ರಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಡೆಸಿದ್ದ 'ಸ್ವಚ್ಛ ಭಾರತ ಕಿರುಚಿತ್ರೋತ್ಸವ ಸ್ಪರ್ಧಿಯಲ್ಲಿ' ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.

ನಟನೆಯಲ್ಲಿ ಆಸಕ್ತಿ..

ಜೀವನಕ್ಕಾಗಿ ಟೈಲರಿಂಗ್ ಉದ್ಯೋಗ ಮಾಡುತ್ತಿರುವ ಮಂಜುನಾಥ, ಹಾಸ್ಯ ಕಲಾವಿದನಾಗಿ ವೃತ್ತಿ ಬದುಕು ಕಂಡುಕೊಳ್ಳುವ ಕನಸನ್ನು ಹೊತ್ತಿದ್ದಾರೆ. ಆದ್ದರಿಂದ ಮಿಸ್ಟರ್ ಬೀನ್ ಕಲೆಯನ್ನು ಕರಗತ ಮಾಡಿಕೊಂಡಿರುವ ಮಂಜುನಾಥ್ ತಮ್ಮ ಹಾಸ್ಯ ನಟನೆಯ ವಿಡಿಯೋಗಳನ್ನು ಫೇಸ್ ಬುಕ್, ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಉತ್ತಮ ರೆಸ್ಪಾನ್ಸ್ ಪಡೆದಿದ್ದು, ಕನ್ನಡದ ಮಿಸ್ಟರ್ ಬೀನ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸೌಂಡ್ ಮಾಡುತ್ತಿದ್ದಾರೆ.

ಮಂಜುನಾಥ್ ಅಭಿನಯ

ಮಂಜುನಾಥ ಜೆ.ರೇಳೆಕರ ಮೂರು ಕಿರು ಚಿತ್ರಗಳಲ್ಲಿ ಹಾಗೂ 'ಜಯಸೂರ್ಯ' ಎಂಬ ದೊಡ್ಡ ಚಿತ್ರದಲ್ಲಿ ನಟಿಸಿದ್ದಾರೆ.

'ಬಿಗ್ ಬಾಸ್' ನಿರೀಕ್ಷೆ ಏಕೆ?

ಮಂಜುನಾಥ ಅವರು ಸಂಪೂರ್ಣವಾಗಿ ತಾವು ಹಾಸ್ಯ ಕಲಾವಿದನಾಗಿ ವೃತ್ತಿ ಬದುಕನ್ನು ಕಂಡುಕೊಳ್ಳುವ ಕನಸು ಹೊತ್ತಿದ್ದು, ಅವರ ಐಡೆಂಟಿಟಿಗೆ ಒಂದು ವೇದಿಕೆ ಅವಶ್ಯಕವಾಗಿದೆ. ತಾವು ಬಿಗ್ ಬಾಸ್ ವೇದಿಕೆಗೆ ಸ್ಪರ್ಧಿಯಾಗುವ ಅವಕಾಶ ಸಿಕ್ಕಲ್ಲಿ ಇದ್ದಷ್ಟು ದಿನ ಜನರಿಗೆ ಮನರಂಜನೆ ನೀಡುತ್ತಾರಂತೆ. ಅಲ್ಲದೇ ಸಮಾಜ ಸೇವೆ ಮಾಡುವ ಕನಸುಗಳನ್ನು ಹೊಂದಿದ್ದಾರೆ.

ಸುದೀಪ್ ಮತ್ತು ಪರಮೇಶ್ವರ್ ಗುಂಡ್ಕಲ್ ಗೆ ಪತ್ರ ಬರೆದ ಮಂಜುನಾಥ್

ಬಡಕುಟುಂಬದ ಮಂಜುನಾಥ ಮುಂದಿನ ಬಿಗ್ ಬಾಸ್ ಸೀಸನ್ ಸ್ಪರ್ಧಿಯಾಗಲು ಅವಕಾಶಕ್ಕಾಗಿ ಈಗಾಗಲೇ ಕಾರ್ಯಕ್ರಮದ ಹೋಸ್ಟ್ ಸುದೀಪ್ ಮತ್ತು ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಗೆ ಪತ್ರ ಬರೆದಿದ್ದಾರೆ.

English summary
Bigg Boss aspirant Mudalagi Manjunath writes letter to sudeep for chance.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada