ನಟಿ ಅನು ಜೊತೆಗೆ 'ಬಿಗ್ ಬಾಸ್' ಅಯ್ಯಪ್ಪ ವಿವಾಹ
ಕ್ರಿಕೆಟ್ ಆಟಗಾರ ಹಾಗೂ ಬಿಗ್ ಬಾಸ್ ಕನ್ನಡದ ಸ್ಪರ್ಧಿ ಅಯ್ಯಪ್ಪ ವಿವಾಹ ನಡೆದಿದೆ. ಕೊಡಗಿನ ವಿರಾಜಪೇಟೆಯಲ್ಲಿ ಅಯ್ಯಪ್ಪ ಹಾಗೂ ಅನು ಪೂವಮ್ಮ ಕಲ್ಯಾಣೋತ್ಸವ ನಡೆದಿದೆ.
ಅಯ್ಯಪ್ಪ ಹಾಗೂ ಅನು ವಿವಾಹ ಕೊಡವ ಸಂಪ್ರದಾಯದಂತೆ ಜರುಗಿದೆ. ಎರಡು ಕುಟುಂಬದ ಸಂಬಂಧಿಗಳು, ಆಪ್ತರು ಹಾಗೂ ಸ್ನೇಹಿತರು ಕಾರ್ಯಕ್ರಮದಲ್ಲಿ ಆಗಮಿಸಿದ್ದರು. ಅಯ್ಯಪ್ಪ ಅವರ ಸಹೋದರಿಯಾಗಿರುವ ನಟಿ ಪ್ರೇಮಾ ಸಹ ತಮ್ಮನ ಸಂತಸದ ಕ್ಷಣಗಳಲ್ಲಿ ಭಾಗಿಯಾಗಿದ್ದರು.

ಅಂದಹಾಗೆ, ಕೊಡಗಿನ ಕುವರಿ ಅನು ಸ್ಯಾಂಡಲ್ ವುಡ್ ನಲ್ಲಿ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಕಥಾ ವಿಚಿತ್ರ, ಕರ್ವ, ಪಾನಿಪೂರಿ, ಲೈಫ್ ಸೂಪರ್ ಹೀಗೆ ಕೆಲವು ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಪೈಕಿ 'ಕರ್ವ' ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡ ಸಿನಿಮಾವಾಗಿದೆ.
ಸಿನಿಮಾ ಮಾತ್ರವಲ್ಲದೆ ಸ್ಟಾರ್ ಸುವರ್ಣ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಮುದ್ದು ಲಕ್ಷ್ಮಿ' ಧಾರಾವಾಹಿಯಲ್ಲಿ ಸಹ ಅನು ನಟಿಸಿದ್ದಾರೆ.
English summary
Bigg Boss kannada contestant and cricket player Ayyappa got married with actress Anu Poovamma.


Click it and Unblock the Notifications